ಶಿಗ್ಗಾಂವಿ(Shiggaon) ತಾಲೂಕಿನ ತಿಮ್ಮಾಪುರ, ಶ್ಯಾಡಂಬಿ, ಹೊಸೂರು, ಗುಂಡೂರು, ಹುರಳಿಕುಪ್ಪಿ ಮುಂತಾದ ಗ್ರಾಮಗಳಲ್ಲಿ ಭತ್ತ, ಗೋವಿನಜೋಳ, ಹತ್ತಿ ಮುಂತಾದ ಬೆಳೆ(Crop) ಹಾಗೂ ಮನೆ(House) ಹಾನಿಯಾದ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಚಿವ ಬಿ.ಸಿ. ಪಾಟೀಲ್
ಜಿಲ್ಲೆಯಲ್ಲಿ 782 ಮಿಮೀ ವಾಡಿಕೆ ಮಳೆಯಾಗಬೇಕಿತ್ತು(Rain), ಆದರೆ, ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ಜಿಲ್ಲೆಯಲ್ಲಿ 984 ಮಿಮೀ ಮಳೆ ಬಿದ್ದಿದೆ. ಅಕಾಲಿಕವಾಗಿ ಸುರಿದ ಮಳೆಯಿಂದ 11,907 ಹೆಕ್ಟೇರ್ ಭತ್ತ, 28 ಸಾವಿರ ಹೆಕ್ಟೇರ್ ಮೆಕ್ಕೆಜೋಳ, 5 ಸಾವಿರ ಹೆಕ್ಟೇರ್ ಹತ್ತಿ ಬೆಳೆ ಸೇರಿದಂತೆ 45 ಸಾವಿರ ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿನ ಬೆಳೆ ನಾಶವಾಗಿದೆ(Crop Damage) ಎಂದು ತಿಳಿಸಿದ ಸಚಿವರು
ನ.30ರ ವರೆಗೂ ಬೆಳೆ ಹಾನಿ ಸಮೀಕ್ಷೆ(Crop Loss Survey) ಮಾಡಲು ಅವಕಾಶ ನೀಡಲಾಗಿದೆ. ಬೆಳೆ ನಷ್ಟ ಆಗಿದ್ದಕ್ಕೆ ಡಿ.1ರ ಬಳಿಕ ಪರಿಹಾರ(Compensation) ನೀಡಲಾಗುವುದು. ರೈತರು(Farmers) ಅರ್ಜಿ ಸಲ್ಲಿಸಲು ಇನ್ನೂ ನಾಲ್ಕು ದಿನ ಅವಕಾಶವಿದೆ. ಮುಖ್ಯಮಂತ್ರಿಗಳೊಂದಿಗೆ(Chief Minister) ಚರ್ಚಿಸಿ ಇದನ್ನು ವಿಸ್ತರಣೆ ಮಾಡಲು ಸಾಧ್ಯವಿದ್ದರೆ ಮಾಡಲಾಗುವುದು ಎಂದು ತಿಳಿಸಿದ ಬಿ.ಸಿ. ಪಾಟೀಲ್
ಈ ಹಿಂದೆ ಎಂದೂ ಈ ಅವಧಿಯಲ್ಲಿ ಇಷ್ಟು ಮಳೆಯಾಗಿ ಬೆಳೆ ಹಾನಿಯಾಗಿರಲಿಲ್ಲ. ರೈತರಿಗೆ ದೊಡ್ಡ ಪ್ರಮಾಣದಲ್ಲಿ ನಷ್ಟವಾಗಿದೆ. ಜಾನುವಾರುಗಳಿಗೆ ಮೇವು ಸಿಗದಷ್ಟು ಬೆಳೆ ಹಾನಿಯಾಗಿದೆ. ಆದರೆ, ರೈತರು ಆತ್ಮಸ್ಥೈರ್ಯ ಕಳೆದುಕೊಳ್ಳಬಾರದು. ರೈತರೊಂದಿಗೆ ಸರ್ಕಾರವಿದೆ. ಆದಷ್ಟು ಬೇಗ ಪರಿಹಾರ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಬೆಳೆ ಹಾನಿ ಪರಿಶೀಲನೆಗೆ ತೆರಳಿದ್ದ ವೇಳೆ ರೈತರು ತಮ್ಮ ಅಳಲು ತೋಡಿಕೊಂಡರು. ಕೆಲ ದಿನಗಳಿಂದ ಸುರಿದ ಮಳೆಯಿಂದಾಗಿ ಶ್ಯಾಡಂಬಿ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿಯ ಬೆಳೆಗಳು ಸಂಪೂರ್ಣವಾಗಿ ಹಾನಿಯಾಗಿದೆ. ಮನೆಗಳು ಬಿದ್ದಿದ್ದು, ತುರ್ತಾಗಿ ಸರ್ಕಾರದಿಂದ ಪರಿಹಾರವನ್ನು ನೀಡಬೇಕು ಎಂದು ಶ್ಯಾಡಂಗಿ ಗ್ರಾಮದ ರೈತರು ಮನವಿ ಮಾಡಿದರು.
ಭತ್ತ ಹಾಗೂ ಗೋವಿನಜೋಳ ಬೆಳೆ ಸಂಪೂರ್ಣವಾಗಿ ಹಾನಿಯಾಗಿದೆ. ಪೂರ್ಣವಾಗಿ ಹಾಗೂ ಭಾಗಶಃ ಬಿದ್ದ ಮನೆಗಳನ್ನು ಪರಿಶೀಲನೆ ಮಾಡಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ ರೈತರು
ರೈತರ ಮನವಿ ಆಲಿಸಿದ ಸಚಿವ ಬಿ.ಸಿ. ಪಾಟೀಲ್, ರೈತರ ಸಂಕಷ್ಟ ನಮಗೆ ಅರ್ಥವಾಗುತ್ತದೆ. ಅದಕ್ಕಾಗಿಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ನಮ್ಮನ್ನು ಇಲ್ಲಿಗೆ ಕಳುಹಿಸಿದ್ದಾರೆ. ಅಧಿಕಾರಿಗಳು ಸಮೀಕ್ಷೆ ನಡೆಸಿ ಬೆಳೆ, ಮನೆ ಹಾನಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದರು.