ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ವಿಶೇಷ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಯಾವುದೇ ರಾಸಾಯನಿಕ ಬಳಸದ ಈ ಮಾವು ಕೈಗೆಟುಕುವ ದರದಲ್ಲಿ ಲಭ್ಯವಿದೆ. ಹೀಗಾಗಿ ಭಾರಿ ಬೇಡಿಕೆ ಇದೆ.
ಸದ್ಯ ಹಣ್ಣುಗಳ ಮಾರುಕಟ್ಟೆಯಲ್ಲಿ ಮಾವಿನದ್ದೇ ಕಾರುಕಾರು. ವಿವಿಧ ತಳಿಯ ಮಾವಿನ ಹಣ್ಣುಗಳು ಮಾರುಕಟ್ಟೆಯಲ್ಲಿ ಲಭ್ಯವಿದೆ. ಕಾಡಿನ ಜೀರಿಗೆ ಮಾವಿನಿಂದ ಹಿಡಿದು ತೋತಾಪುರಿ, ಬಾದಾಮಿ, ಅಲ್ಫೋನ್ಸಾ ಸೇರಿದಂತೆ ಹಲವು ದುಬಾರಿ ಬೆಲೆಯ ಮಾವು ಲಭ್ಯವಿದೆ. ಇದೀಗ ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮಾತ್ರ ಬೆಳೆಯುವ ಕರಿ ಇಶಾಡ್ ಮಾವಿನ ಹಣ್ಣು ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
25
ವಿಶೇಷ ತಳಿಯ ಮಾವಿನ ಹಣ್ಣು
ಅಂಕೋಲಾದ ಕರಿ ಇಶಾಡ್ ಮಾವಿನ ಹಣ್ಣು, ಮಾವಿನ ತಳಿಗಳಲ್ಲೇ ವಿಶೇಷವಾದ ತಳಿಯ ಮಾವಿನ ಹಣ್ಣಾಗಿದ್ದು ಈ ಮಾವು ಅಂಕೋಲಾ ತಾಲೂಕಿನ ಸುತ್ತಮುತ್ತ ಮಾತ್ರ ಬೆಳಯಲಾಗಿತ್ತದೆ. ಮಾರುಕಟ್ಟೆಗೆ ಈ ಹಣ್ಣು ಎಂಟ್ರಿಕೊಡುತ್ತಿದ್ದಂತೆ ಮಾವು ಪ್ರಿಯರು ಮುಗಿಬಿದ್ದು ಖರೀದಿಸುತ್ತಿದ್ದಾರೆ.
35
GI ಟ್ಯಾಗ್ ಹೊಂದಿರುವ ಮಾವು
ಈ ವಿಶೇಷ ಮಾವಿನ ತಳಿಗೆ ಜಾಗತಿಕ ಮಾನ್ಯತೆ ಇದ್ದು 2023 ರಲ್ಲಿ ಈ ಮಾವಿಗೆ ಜಿ.ಐ ಟ್ಯಾಗ್ ಮಾನ್ಯತೆ ಸಹಃ ದೊರಕಿದೆ. ಉತ್ತರಕನ್ನಡ ಜಿಲ್ಲೆ ಯಿಂದ ವಿದೇಶಕ್ಕೂ ರಪ್ತಾಗುವ ಈ ಕರಿ ಇಶಾಡ್ ಮಾವಿನ ಹಣ್ಣು ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾತ್ರ ಲಬ್ಯವಿರುತ್ತದೆ.
ಈ ಬಾರಿ ಅಂಕೋಲಾ ಭಾಗದಲ್ಲಿ ಮಾವಿನ ಇಳುವರಿ ಹೆಚ್ಚಿದೆ. ಅದರಲ್ಲೂ ಕರಿ ಇಶಾಡ್ ಮಾವಿನ ಹಣ್ಣು ಇಳುವರಿ ಹೆಚ್ಚಿದೆ. ಕರಿ ಇಶಾಡ್ ಮಾವು ಉತ್ತಮ ರುಚಿ ಹಾಗೂ ಸ್ವಾದ ಹೊಂದಿದೆ. ಜೊತೆಗೆ ಕೈಗೆಟುಕುವ ದರದಲ್ಲಿ ಈ ಮಾವು ಲಭ್ಯವಿದೆ.
55
ರಾಸಾಯನಿಕ ಬಳದ ಸಾವಯವ ಮಾವು
ಈ ಮಾವಿಗೆ ಯಾವುದೇ ರಾಸಾಯನಿಕ ಗೊಬ್ಬರ ಬಳಸದೇ ಕೇವಲ ಸಾವಯವ ಪದ್ದತಿಯಲ್ಲಿ ಬೆಳೆಯಲಾಗುತ್ತದೆ. ಜನರು ಆರ್ಗಾನಿಕ್ ಆಹಾರದ ಬಗ್ಗೆ ಕಾಳಜಿ ಹೆಚ್ಚಾಗುತ್ತಿರುವ ಈ ಸಂದರ್ಭದಲ್ಲಿ ಕರಿ ಇಶಾಡ್ ಮಾವು ಭಾರಿ ಬೇಡಿಕೆ ಪಡೆದುಕೊಂಡಿದೆ.