ಬೆಂಗಳೂರಿನ ಘನತೆಗೆ 'ವರದಕ್ಷಿಣೆ' ಕಪ್ಪುಚುಕ್ಕೆ: ಮೆಟ್ರೋ ನಗರಗಳ ಒಟ್ಟು ಕೇಸ್‌ಗಳಲ್ಲಿ ಶೇ. 87ರಷ್ಟು ಪಾಲು ಸಿಲಿಕಾನ್ ಸಿಟಿಯದ್ದೇ!

Published : May 09, 2026, 11:13 AM IST

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) 2024ರ ವರದಿಯ ಪ್ರಕಾರ, ದೇಶದ ಮೆಟ್ರೋ ನಗರಗಳ ಪೈಕಿ ಬೆಂಗಳೂರು ಅತಿ ಹೆಚ್ಚು ವರದಕ್ಷಿಣೆ ಪ್ರಕರಣಗಳನ್ನು ಹೊಂದಿದೆ. ಕೇವಲ ವರದಕ್ಷಿಣೆ ಮಾತ್ರವಲ್ಲದೆ, ಮಹಿಳೆಯರ ಮೇಲಿನ ದೌರ್ಜನ್ಯ ಕೇಸ್‌ಗಳಲ್ಲೂ ಬೆಂಗಳೂರು ಮುಂದಿದೆ.

PREV
15
NCRB ಡೇಟಾ ಪ್ರಕಟ

ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಹೆಸರಾದ ಬೆಂಗಳೂರು ನಗರ, ಈಗ ಅಪರಾಧ ಲೋಕದ ಕರಾಳ ಮುಖವನ್ನೂ ಅನಾವರಣಗೊಳಿಸಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ ‘ಕ್ರೈಮ್ ಇನ್ ಇಂಡಿಯಾ 2024’ ವರದಿಯ ಪ್ರಕಾರ, ದೇಶದ ಮೆಟ್ರೋ ನಗರಗಳಲ್ಲಿ ದಾಖಲಾಗುವ ಒಟ್ಟು ವರದಕ್ಷಿಣೆ ಪ್ರಕರಣಗಳಲ್ಲಿ ಸಿಂಹಪಾಲು ಬೆಂಗಳೂರಿನದ್ದೇ ಆಗಿದೆ.

25
ವರದಕ್ಷಿಣೆ ಪ್ರಕರಣಗಳಲ್ಲಿ ಬೆಂಗಳೂರೇ ಮೊದಲು

ವರದಿಯ ಪ್ರಕಾರ, ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಒಟ್ಟು 1,008 ವರದಕ್ಷಿಣೆ ನಿಷೇಧ ಕಾಯ್ದೆ (1961) ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ ಬೆಂಗಳೂರು ಒಂದರಲ್ಲೇ 878 ಪ್ರಕರಣಗಳು ವರದಿಯಾಗಿವೆ. ಅಂದರೆ ಮೆಟ್ರೋ ನಗರಗಳ ಒಟ್ಟು ಪ್ರಕರಣಗಳಲ್ಲಿ ಸುಮಾರು ಶೇ. 87ರಷ್ಟು ಪ್ರಕರಣಗಳು ಬೆಂಗಳೂರಿನಲ್ಲಿ ದಾಖಲಾಗಿರುವುದು ಆತಂಕಕ್ಕೆ ಕಾರಣವಾಗಿದೆ. ಉತ್ತರ ಪ್ರದೇಶದ ಲಕ್ನೋ 48 ಪ್ರಕರಣಗಳೊಂದಿಗೆ ಎರಡನೇ ಸ್ಥಾನದಲ್ಲಿದೆ.

35
ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಸಾವು

ವರದಕ್ಷಿಣೆ ಕಿರುಕುಳಕ್ಕೆ ಸಂಬಂಧಿಸಿದಂತೆ 2024ರಲ್ಲಿ ಬೆಂಗಳೂರಿನಲ್ಲಿ 25 ಸಾವುಗಳು ಸಂಭವಿಸಿವೆ. ದೆಹಲಿಯಲ್ಲಿ ದಾಖಲಾದ 109 ಸಾವುಗಳಿಗೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಿದ್ದರೂ, ದಕ್ಷಿಣ ಭಾರತದ ಇತರ ನಗರಗಳಾದ ಚೆನ್ನೈ, ಕೊಚ್ಚಿ ಮತ್ತು ಕೊಯಮತ್ತೂರಿಗೆ ಹೋಲಿಸಿದರೆ ಬೆಂಗಳೂರಿನ ಸ್ಥಿತಿ ಶೋಚನೀಯವಾಗಿದೆ. ಈ ನಗರಗಳಲ್ಲಿ ವರದಕ್ಷಿಣೆ ಸಾವು ಶೂನ್ಯ ದಾಖಲಾಗಿರುವುದು ಗಮನಾರ್ಹ.

45
ಮಹಿಳೆಯರ ವಿರುದ್ಧದ ಅಪರಾಧಗಳಲ್ಲಿಯೂ ಏರಿಕೆ

ಕೇವಲ ವರದಕ್ಷಿಣೆ ಮಾತ್ರವಲ್ಲದೆ, ಮಹಿಳೆಯರ ವಿರುದ್ಧದ ಇತರ ಅಪರಾಧಗಳಲ್ಲೂ ಬೆಂಗಳೂರು ಕುಖ್ಯಾತಿ ಪಡೆದಿದೆ. ವಿಶೇಷ ಮತ್ತು ಸ್ಥಳೀಯ ಕಾನೂನು (SLL) ಕಾಯ್ದೆಯಡಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳಲ್ಲಿ ಬೆಂಗಳೂರು 1,501 ಪ್ರಕರಣಗಳೊಂದಿಗೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.

55
ದೈಹಿಕ ಬಲ ಪ್ರಯೋಗದ ಕೇಸ್‌ನಲ್ಲೂ ಬೆಂಗಳೂರು ಮುಂದು

ಮಹಿಳೆಯರ ಮೇಲೆ ದೈಹಿಕ ಬಲ ಪ್ರಯೋಗಿಸಿ ವಿನಯಭಂಗ ಮಾಡಿದ ಪ್ರಕರಣಗಳಲ್ಲಿ ಬೆಂಗಳೂರು 897 ಕೇಸ್‌ಗಳೊಂದಿಗೆ ಮುಂಚೂಣಿಯಲ್ಲಿದೆ. ಮುಂಬೈ (857) ನಂತರದ ಸ್ಥಾನದಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನಲ್ಲಿ ಕಾನೂನು ಜಾಗೃತಿ ಹೆಚ್ಚಿರುವುದರಿಂದ ಹೆಚ್ಚು ಪ್ರಕರಣಗಳು ದಾಖಲಾಗುತ್ತಿವೆಯೇ ಅಥವಾ ನಿಜಕ್ಕೂ ಅಪರಾಧಗಳ ಸಂಖ್ಯೆ ಹೆಚ್ಚಿದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.

Read more Photos on
click me!

Recommended Stories