ಜನ್ಮ ಕೊಟ್ಟ ಅಮ್ಮನನ್ನು ಎಷ್ಟು ವರ್ಣಿಸಿದರೂ ಸಾಲದು. ಆದರೆ ತಾಯಿಯನ್ನು ಕಳೆದುಕೊಂಡಾಗ ಆಗುವ ನೋವು ಶಬ್ದಕ್ಕೆ ನಿಲುಕದ್ದು. ಅಂತೆಯೇ ಅಮ್ಮನನ್ನು ಕಳೆದುಕೊಂಡ ಈ ಕಾಡಾನೆ ಮರಿ ನರಳಾಡುತ್ತಿದೆ. ಕಾಫಿ ತೋಟದ ನಡುವೆ ಸಿಲುಕಿರುವ ಐದು ದಿನದ ಮರಿಯಾನೆ ಅಮ್ಮನ ಸೇರಲು ಹಂಬಲಿಸುತ್ತಿದೆ. ಮತ್ತೊಂದೆಡೆ ಜನರಿಂದ ತಾಯಿ ಮಡಿಲು ಸೇರಿಸಲು ಶತ ಪ್ರಯತ್ನ ನಡೆದಿದೆ.