Kodagu: ಇಡೀ ರಾತ್ರಿ ಕಾಫಿ ತೋಟದಲ್ಲಿ ಒಂಟಿಯಾದ 2 ವರ್ಷದ ಮಗು; ಸಾಕು ನಾಯಿಯಿಂದ ಪತ್ತೆ

Published : Dec 01, 2025, 01:33 PM IST

Kodagu Baby Missing" ಕಾಫಿ ತೋಟದಲ್ಲಿ ಆಟವಾಡುತ್ತಿದ್ದ ಎರಡು ವರ್ಷದ ಮಗುವೊಂದು ನಾಪತ್ತೆಯಾಗಿತ್ತು. ಇಡೀ ರಾತ್ರಿ ತೋಟದಲ್ಲಿ ಕಳೆದ ಮಗುವನ್ನು, ಮರುದಿನ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಸ್ಥಳೀಯರ ಹುಡುಕಾಟದ ವೇಳೆ ಸಾಕು ನಾಯಿಯೊಂದು ಪತ್ತೆಹಚ್ಚಿ ಪೋಷಕರ ಮಡಿಲಿಗೆ ಸೇರಿಸಿದೆ.

PREV
14
ಎರಡು ವರ್ಷದ ಮಗು

ಕೊಡಗಿನ ಪೊನ್ನಂಪೇಟೆ ತಾಲೂಕಿನ ಕೊಂಗಣ ಗ್ರಾಮದಲ್ಲಿ ಎರಡು ವರ್ಷದ ಮಗುವೊಂದು ಇಡೀ ರಾತ್ರಿ ಕಾಫಿ ತೋಟದಲ್ಲಿ ಕಳೆದಿದೆ. ಮರುದಿನ ಸಾಕು ನಾಯಿಗಳಿಂದ ಮಗು ಪತ್ತೆಯಾಗಿದೆ. ಸುನಿಲ್ ಹಾಗೂ ನಾಗಿಣಿ ದಂಪತಿಯ ಎರಡು ವರ್ಷದ ಮಗು ಸುನನ್ಯಾ ಕಾಫಿ ತೋಟದಲ್ಲಿ ಮಿಸ್ ಆಗಿತ್ತು.

24
ಕಾಫಿ ತೋಟ

ಶನಿವಾರ ಪೋಷಕರು ಮಗುವನ್ನು ಕೊಂಗಣ ಗ್ರಾಮದ ಶರಿ ಗಣಪತಿ ಎಂಬವರ ತೋಟಕ್ಕೆ ಕರೆದುಕೊಂಡು ಬಂದಿದ್ದರು. ಈ ವೇಳೆ ಮಗು ನಾಪತ್ತೆಯಾಗಿತ್ತು. ಎಷ್ಟೇ ಹುಡುಕಿದರೂ ಮಗು ಸಿಗದೇ ಪೋಷಕರು ಕಂಗಲಾಗಿದ್ದರು. ಶನಿವಾರ ಸಾಕಷ್ಟು ಹುಡುಕಿ ಮಗು ಸಿಗದೇ ಕತ್ತಲಾದ ಬಳಿಕ ಪೋಷಕರು ಹಿಂದಿರುಗಿದ್ದರು.

34
ಅರಣ್ಯ ಇಲಾಖೆ ಸಿಬ್ಬಂದಿಯಿಂದಲೂ ಹುಡುಕಾಟ

ಮಗು ಕಾಣೆಯಾಗಿರವ ಬಗ್ಗೆ ಅರಣ್ಯ ಇಲಾಖೆ ಸಿಬ್ಬಂದಿಗೂ ಮಾಹಿತಿ ನೀಡಲಾಗಿತ್ತು. ಭಾನುವಾರ ಅನಿಲ್‌ ಕಾಳಪ್ಪ ಎಂಬವರಿಗೆ ಸೇರಿದ್ದ ಸಾಕು ನಾಯಿ ಓರಿಯೋ ಮಗುವನ್ನು ಪತ್ತೆ ಮಾಡಿದೆ. ಅರಣ್ಯ ಇಲಾಖೆ ಸಿಬ್ಬಂದಿಯವರು ಸಾಕು ನಾಯಿಗಳೊಂದಿಗೆ ಮಗುವಿಗಾಗಿ ಹುಡಕಾಟ ನಡೆಸಿದ್ದರು.

44
ಮಗು ಮಿಸ್ ಆಗಿದ್ದೇಗೆ?

ಶನಿವಾರ ಮಧ್ಯಾಹ್ನ ಮಗುವಿನ ತಾಯಿ ಮೊಬೈಲ್ ನೋಡುತ್ತಾ ಕುಳಿತಿದ್ದರು. ಈ ವೇಳೆ ಮಗು ಸುನನ್ಯಾ ನಾಪತ್ತೆಯಾಗಿದ್ದಳು. ಶ್ವಾನ ಓರಿಯೋದಿಂದಾಗಿ ಸುನನ್ಯಾ ಮತ್ತೆ ತಾಯಿ ಮಡಿಲು ಸೇರಿದ್ದಾಳೆ. ಸ್ಥಳೀಯರು ಸಹ ಮಗುವಿಗಾಗಿ ಹುಡುಕಾಟ ನಡೆಸಿದ್ದರು.

ಇದನ್ನೂ ಓದಿ: ಫಸ್ಟ್‌ನೈಟ್‌ ಕೋಣೆಯಿಂದ ಹೊರ ಬಂದ ವರ ಮಿಸ್ಸಿಂಗ್; ವಧು ಆಸೆ ನೆರವೇರಿಸಲು ಹೋದವ ಬರಲೇ ಇಲ್ಲ!

Read more Photos on
click me!

Recommended Stories