ಉಳಿದಿದ್ದು ಬರಿ ಕಣ್ಣೀರು..ಪೋಟೋ ಇಟ್ಟು ಶ್ರದ್ಧಾಂಜಲಿ ಸಲ್ಲಿಸಿ ಮನವಿ ಮಾಡಿಕೊಂಡ್ರು!

First Published | Feb 6, 2021, 5:28 PM IST

ಧಾರವಾಢ(ಫೆ. 06) ಜನವರಿ 15 ರಂದು ಧಾರವಾಡ ತಾಲೂಕಿನ ಇಟಿಗಟ್ಟಿ ಗ್ರಾಮದ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 10 ಮಹಿಳೆಯರು ಮೃತಪಟ್ಟಿದ್ದರು. ಒಟ್ಟಾಗಿ ಗೋವಾಕ್ಕೆ ಹೊರಟಿದ್ದ ಬಾಲ್ಯ ಗೆಳತಿಯರೆಲ್ಲ ಮಸಣ ಸೇರಿದ್ದರು.  ರಸ್ತೆ ಅಗಲವಾಗಿ ಇಲ್ಲದಿರುವುದೆ ದುರ್ಘಟನೆಗೆ ಕಾರಣ ಎಂದು ಹೇಳಿರುವ ಕುಟುಂಬಸ್ಥರು ವಿಭಿನ್ನವಾಗಿ ಪ್ರತಿಭಟನೆ ಮಾಡಿದ್ದಾರೆ.

ಹುಬ್ಬಳ್ಳಿದ ಧಾರವಾಡವರೆಗೆ 28 ಕೀ ಮೀ ರಸ್ತೆ ಕೇವಲ ಒನ್ ವೇ ಇರುವ ಹಿನ್ನಲೆಯಿಂದ ಭೀಕರ ಅಪಘಾತದಲ ನಡಿದಿದೆ ಎಂಬುದು ಆರೋಪ.
undefined
ರಸ್ತೆ ಅಗಲೀಕರಣಕ್ಕೆ ಒತ್ತಾಯಿಸಿ ಮೃತರ ಕುಟುಂಬಸ್ಥರು ದುರ್ಮರಣಕ್ಕೆ ಗುರಿಯಾದವರ ಪೋಟೋ ಇಟ್ಟು ಹೂವು ಹಾಕಿ ರಸ್ತೆಯಲ್ಲಿಯೇ ಮೌನ ಪ್ರತಿಭಟನೆ ನಡೆಸಿದರು.
undefined

Latest Videos


ಈ ಘಟನೆಗೆ ಇಡಿ ರಾಜ್ಯವೇ ತಲ್ಲಣಗೊಂಡಿತ್ತು, ಕುಟುಂಬಸ್ಥರು ಬಳಿಕ ಮಾತನಾಡಿ ನಮ್ಮ ಕುಟುಂಬಗಳಿಗೆ ಆಗದ ಪರಿಸ್ಥಿತಿ ಬೇರೆ ಯಾರಿಗೂ ಆಗಬಾರದು ಎಂದು ಕಣ್ಣೀರಿಟ್ಟಿರು.
undefined
ಸ್ಥಳಿಯ ಜನಪ್ರತಿನಿಧಿಗಳ ಗಮನ ಹರಿಸಿ ಆದಷ್ಟು ಬೇಗ ಈ ರಸ್ತೆಯನ್ನ ಅಗಲೀಕರಣ ಮಾಡಿ ಮುಂದೆ ಆಗುವ ಅನಾಹುತಗಳನ್ನ ತಪ್ಪಿಸಬೇಕು ಎಂದು ಒತ್ತಾಯ ಮಾಡಿದರು.
undefined
ಈ ಹೆದ್ದಾರಿಯನ್ನ ನಿರ್ವಹಣೆ ಮಾಡುತ್ತಿರುವ ಅಶೋಕ್ ಖೇಣಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಧಿಕ್ಕಾರ ಕೂಗಿದರು.
undefined
ರಸ್ತೆ ಅಗಲೀಕರಣ ಮಾಡಿ ಎಂದು ಮನವಿಯನ್ನು ಸರ್ಕಾರಕ್ಕೆ ಸಲ್ಲಿಕೆ ಮಾಡಿದರು.
undefined
ತಮ್ಮಕುಟುಂಬಕ್ಕೆ ಬಂದ ಸ್ಥಿತಿ ಯಾರಿಗೂ ಬರಬಾರದು ಎಂಬ ಕಾಳಜಿಯಿಂದ ಇಂಥದ್ದೊಂದು ಪ್ರತಿಭಟನೆ ದಾಖಲು ಮಾಡಿದ್ದಾರೆ.
undefined
click me!