ಚಾಮರಾಜನಗರ: ಪರಿಸರ ಪ್ರೇಮಿ ವೆಂಕಟೇಶ್ ನೆಟ್ಟ ಗಿಡಗಳಿಗೆ 1.87 ಲಕ್ಷ ನರೇಗಾ ಬಿಲ್?

First Published | Aug 29, 2024, 8:25 PM IST

ವರದಿ - ಪುಟ್ಟರಾಜು. ಆರ್. ಸಿ. ಏಷಿಯಾನೆಟ್ ಸುವರ್ಣ ನ್ಯೂಸ್, ಚಾಮರಾಜನಗರ

ಚಾಮರಾಜನಗರ(ಆ.29): ಕಷ್ಟಪಟ್ಟು ಬಿಸಿಲಲ್ಲಿ ಬೆವರು ಸುರಿಸಿ ಗಿಡ ನೆಟ್ಟವರು ಪರಿಸರ ಪ್ರೇಮಿ ವೆಂಕಟೇಶ್. ಅವರು ನೆಟ್ಟ ಸಸಿಗಳನ್ನೇ  ಮನರೇಗಾದಡಿ ಅಧಿಕಾರಿಗಳು ಬಂಡವಾಳ ಮಾಡಿಕೊಂಡಿದ್ದಾರೆ. ಮನರೇಗಾದಡಿ ಅಕ್ರಮ ನಡೆಯಬಾರದೆಂದು ಹಲವು ಕಟ್ಟುಪಾಡುಗಳನ್ನು ರೂಪಿಸಲಾಗಿದೆ. ಇದರ ನಡುವೆಯೂ ಅಕ್ರಮ ನಡೆಯುತ್ತಿವೆ ಎಂಬುದಕ್ಕೆ ಈ ನಿದರ್ಶನವೇ ಸಾಕ್ಷಿಯಾಗಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ನೋಡಿ..

ಇವರು ಚಾಮರಾಜನಗರದ ಪರಿಸರ ಪ್ರೇಮಿ ವೆಂಕಟೇಶ್. ಈಗಾಗ್ಲೇ ಜಿಲ್ಲಾದ್ಯಂತ 10 ಸಾವಿರಕ್ಕೂ ಹೆಚ್ಚು ಗಿಡ ನೆಟ್ಟು ಹೆಸರು ಕೂಡ ಪಡೆದಿದ್ದಾರೆ. ಎರಡು ವರ್ಷದ ಹಿಂದೆ ಚಾಮರಾಜನಗರ ಹೊರ ವಲಯದ ಬೇಡರಪುರ ಬಳಿಯ ಚಾಮರಾಜನಗರ ಅಂಬೇಡ್ಕರ್ ವಿಶ್ವವಿದ್ಯಾಲಯದ ಬಳಿಯ ರಸ್ತೆ ಬದಿ ಹಾಗೂ ಆವರಣದಲ್ಲಿ ವಿವಿ ಅನುಮತಿ ಪಡೆದು ಸುಮಾರು 400 ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟಿ ಪೋಷಣೆ ಮಾಡಿದ್ದಾರೆ. ಆದ್ರೆ ಸಾಮಾಜಿಕ ಅರಣ್ಯ ವಲಯದ ಅಧಿಕಾರಿಗಳು 2024-25 ರ ಸಾಲಿನಲ್ಲಿ ಗಿಡ ನೆಡುವ ಕಾರ್ಯಕ್ರಮ ಎಂದು ತೋರಿಸಿ 1.87 ಲಕ್ಷ ರೂ ಎಂದು ಬರೆಸಲಾಗಿದೆ. 

ನಾನು ನೆಟ್ಟಿರುವ ಗಿಡಗಳ ಮಧ್ಯೆಯೇ ಜೆಸಿಬಿಯಿಂದ ಕೆಲ ಗುಂಡಿಗಳನ್ನು ತೆಗೆದು ಬಳಿಕ ಒಂದಷ್ಟು ಕಾರ್ಮಿಕರನ್ನು ಸ್ಥಳಕ್ಕೆ ಕರೆತಂದು ಗುಂಡಿ ತೆಗೆಯುವಂತೆ ಫೋಟೋ ತೆಗೆಸಿಕೊಳ್ಳಲಾಗಿದ್ದು ಬಳಿಕ ನಾನು ನೆಟ್ಟಿರುವ ಗಿಡಗಳನ್ನೆ ಮನರೇಗಾ ಯೋಜನೆಯಡಿ ನೆಡಲಾಗಿದೆ ಎಂದು ಬಿಂಬಿಸಿ ಬಿಲ್ ಮಾಡಲಾಗಿದೆ. ವಾಸ್ತವವಾಗಿ ಪರಿಸರ ಪ್ರೇಮಿ ವೆಂಕಟೇಶ್ ನಾನು ಗಿಡ ನೆಟ್ಟಿದ್ದೇನೆ ಆದ್ರೆ ಅರಣ್ಯ ಇಲಾಖೆ ಇದಕ್ಕೆ ಬಿಲ್ ಮಾಡಿಕೊಂಡಿದೆ ಎಂಬ ಗಂಭೀರ ಆರೋಪ ಮಾಡಿದ ಪರಿಸರ ಪ್ರೇಮಿ ವೆಂಕಟೇಶ್

Latest Videos


ಇನ್ನೂ ಮನರೇಗಾ ಯೋಜನೆಯಡಿ ಗಿಡಗಳನ್ನು ನೆಟ್ಟಿದ್ದೇವೆ ಅಂತಿದ್ದಾರೆ. ಆ ಯೋಜನೆಯ ನಾಮಫಲಕದಲ್ಲಿ ಎಷ್ಟು ಗುಂಡಿ ತೆಗೆಯಲಾಗಿದೆ. ಎಷ್ಟು ಗಿಡಗಳನ್ನು ನೆಡಲಾಗಿದೆ. ಎಷ್ಟು ಕಾರ್ಮಿಕರನ್ನು ಬಳಸಲಾಗಿದೆ ಅನ್ನೋದ್ರ ವಿವರಗಳನ್ನು ಎಲ್ಲೋ ಬರೆದಿಲ್ಲ. 187 ಗಿಡಗಳನ್ನು ನೆಟ್ಟಿದ್ರೆ 1.87 ಲಕ್ಷ ರೂ ಖರ್ಚಾಗುತ್ತಾ ಅನ್ನೋ ಪ್ರಶ್ನೆ ಕೂಡ ಉದ್ಬವಿಸುತ್ತೆ. ಇನ್ನೂ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದ್ರೆ ಗಿಡ ನೆಡಲೂ ಅಧಿಕಾರಿಗಳಿಗೆ ಸೂಚಿಸಲಾಗಿತ್ತು. ಆದರಂತೆ 180 ಗಿಡ ನೆಟ್ಟಿದ್ದಾರೆ ಅಂತ ತಿಳಿಸಿದ ವೆಂಕಟೇಶ್

 ಈ ಬಗ್ಗೆ ತನಿಖೆ ನಡೆಸಲು ಸೂಚಿಸಿದ್ದೇವೆ. ನಂತರ ತಪ್ಪಾಗಿದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಹಾಗೂ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡ್ತೀವಿ ಅಂತಾ ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಪರಿಸರ ಪ್ರೇಮಿ ವೆಂಕಟೇಶ್ ಗಿಡ ನೆಟ್ಟಿರುವುದು ಬಿಟ್ಟರೆ ಬೇರೆ ಯಾರೂ  ಕೂಡ ಈ ಸ್ಥಳದಲ್ಲಿ ಗಿಡ ನೆಟ್ಟಿಲ್ಲ. ಇದ್ದರೂ ಕೂಡ ಬೆರಳೆಣಿಕಷ್ಟು ಗಿಡಗಳಿವೆ. ಅಧಿಕಾರಿಗಳ ಪ್ರಕಾರವೇ 187 ಗಿಡ ನೆಡಲೂ 1.87 ಲಕ್ಷ ರೂಪಾಯಿ ಬೇಕಾ ಅನ್ನೋದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಬೇಕಿದೆ.

click me!