ಗೂಗಲ್‌ಗೂ ಗೊತ್ತಾಯ್ತು ಪಟ್ಟಣಗೆರೆ ಶೆಡ್ಡಿನ ಗಮ್ಮತ್ತು; ಈ ಲೊಕೇಶನ್‌ಗೆ 5 ಸ್ಟಾರ್ ರಿವ್ಯೂವ್ಸ್ ನೋಡಿ ನೆಟ್ಟಿಗರು ಸುಸ್ತು

First Published | Jul 11, 2024, 3:20 PM IST

ಬೆಂಗಳೂರು (ಜು.11): ಬೆಂಗಳೂರಿಗೆ ಬಂದವರು ನೀವು ವಂಡರ್ ಲಾ, ಫನ್ ಪಾರ್ಕ್, ಲಾಲ್‌ಬಾಗ್ ಹೋಗದಿದ್ದರೂ ಸರಿ ನೀವು ಮೈಸೂರು ರಸ್ತೆಯಲ್ಲಿನ ಪಟ್ಟಣಗೆರೆ ಶೆಡ್ ಅನ್ನು ಒಮ್ಮೆಯಾದರೂ ನೋಡಲೇಬೇಕು. ಇದು ಗೂಗಲ್ ಮ್ಯಾಪ್‌ನಲ್ಲಿ ಪಟ್ಟಣಗೆರೆ ಶೆಡ್‌ಗೆ ನೆಟ್ಟಿಗರು ಕೊಟ್ಟಿರುವ 5 ಸ್ಟಾರ್ ರಿವ್ಯೂವ್ ಆಗಿದೆ.

ಗೂಗಲ್ ಮ್ಯಾಪ್‌ನಲ್ಲಿ ಪತ್ತೆಯಾಗುವ ಈ ಪಟ್ಟಣಗೆರೆ ಲೊಕೇಶನ್‌ಗೆ.  ಜಾಗಕ್ಕೆ ಡಿ ಬಾಸ್ ನೋಡಲು ಬರಬಹುದು, ಪತ್ನಿರಹಿತವಾಗಿ ಪ್ರೇಯಸಿಯೊಂದಿಗೆ ಬರಬಹುದು, ಒಂದು ಕಾಮೆಂಟ್ ಮಾಡಿದರೆ ನಿಮ್ಮನ್ನು ಶೆಡ್‌ಗೆ ಕರೆಸಿಕೊಳ್ಳುತ್ತಾರೆ? ಕುಂಟೆಬಿಲ್ಲೆ ಆಡಲು ಪಟ್ಟಣಗೆರೆ ಶೆಡ್ ಉತ್ತಮ ಸ್ಥಳ.... ಹೀಗೆ ನೂರೆಂಟು ರಿವ್ಯೂವ್ಸ್‌ಗಳು ಬಂದಿವೆ. ನಟ ದರ್ಶನ್ ಸ್ನೇಹಿತೆ ಪವಿತ್ರಾಗೌಡಗೆ ಕೆಟ್ಟದಾಗಿ ಕಾಮೆಂಟ್ ಮಾಡಿದ್ದಾನೆಂಬ ಉದ್ದೇಶಕ್ಕೆ ನಟ ದರ್ಶನ್ ಅಂಡ್ ಗ್ಯಾಂಗ್‌ನಿಂದ ಚಿತ್ರದುರ್ಗದಲ್ಲಿದ್ದ ರೇಣುಕಾಸ್ವಾಮಿಯನ್ನು ಕಿಡ್ನಾಪ್ ಮಾಡಿಕೊಂಡು ಬಂದು ಪಟ್ಟಣಗೆರೆ ಶೆಡ್ಡಿನಲ್ಲಿ ಕೂಡಿ ಹಾಕಿ ಮನಸೋ ಇಚ್ಛೆ ಹಲ್ಲೆ ಮಾಡಿ ಕೊಲೆ ಮಾಡಲಾಗಿದೆ.

ರೇಣುಕಾಸ್ವಾಮಿ ಕೊಲೆ ಮಾಡಿದ ನಂತರ ಅಲ್ಲಿಂದ ಗೂಡ್ಸ್ ಆಟೋದಲ್ಲಿ ಹೆಣವನ್ನು ತೆಗೆದುಕೊಂಡು ಹೋಗಿ ಸುಮನಹಳ್ಳಿ ಮೇಲ್ಸೇತುವೆ ಬಳಿಯ ಮೋರಿಯಲ್ಲಿ ಬೀಸಾಡಿ ಬಂದಿದ್ದರು. ಇದಾದ ನಂತರ ನಟ ದರ್ಶನ್ ಅಂಡ್ ಗ್ಯಾಂಗ್‌ ಅನ್ನು ಸೇಫ್ ಮಾಡಲು ನಾಲ್ವರು ಪೊಲೀಸರಿಗೆ ಸರೆಂಡರ್ ಆಗಿದ್ದರು. ಆದರೆ, ಅವರೇ ನಟ ದರ್ಶನ್ ಆರೋಪಿ ಎಂಬ ಸುಳಿವು ನೀಡಿದ್ದರು. ಇದಾದ ನಂತರ ನಟ ದರ್ಶನ್ ಸೇರಿದಂತೆ 16 ಜನರನ್ನು ಬಂಧಿಸಿ ಪಟ್ಟಣಗೆರೆ ಶೆಡ್‌ಗೆ ಮೂರ್ನಾಲ್ಕು ಬಾರಿ ಸ್ಥಳ ಮಹಜರಿಗೆ ಕರೆದುಕೊಂಡು ಬರಲಾಗಿತ್ತು. ಆದ್ದರಿಂದ ಈಗ ಪಟ್ಟಣಗೆರೆ ಶೆಡ್ ಲೊಕೇಶನ್ ಭಾರಿ ವೈರಲ್ ಆಗಿದೆ.

Tap to resize

Darshan arrested in murder case with Jeep

ರೇಣುಕಾಸ್ವಾಮಿಯನ್ನು ಕೊಲೆ ಮಾಡಿದ ಸ್ಥಳಕ್ಕೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಸೇರಿ 16 ಜನ ಆರೋಪಿಗಳನ್ನು ಕರೆದುಕೊಂಡು ಬಂದು ಪೊಲೀಸರು ಸ್ಥಳ ಮಹಜರು ಮಾಡಿದ್ದರು. ಈ ವೇಳೆ ನಟ ದರ್ಶನ್‌ನನ್ನು ಪೊಲೀಸರು ಕಸ್ಟಡಿಯಿಂದ ಹೊರಗೆ ಕರೆದುಕೊಂಡು ಬಂದಾಗ ಅವರನ್ನು ನೋಡಲು ಸಾವಿರಾರು ಅಭಿಮಾನಿಗಳು ಅಲ್ಲಿ ಸೇರಿದ್ದರು. ಇನ್ನು ಕೆಲವರು ಸ್ಥಳದ ಬಗ್ಗೆ ಮಾಹಿತಿ ಇಲ್ಲದೇ ಲೊಕೇಶನ್ ಬಗ್ಗೆ ಗೂಗಲ್ ಮ್ಯಾಪ್‌ನಲ್ಲಿ ಹುಡುಕಾಟ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣಗೆರೆ ಶೆಡ್ ಇರುವ ಸ್ಥಳವನ್ನು ಗೂಗಲ್ ಮ್ಯಾಪ್‌ನಲ್ಲಿ ಐಡೆಂಟಿಫಿಕೇಶನ್ ಮಾಡಿದ್ದಾರೆ. ಇದಾದ ನಂತರ ಈ ಗೂಗಲ್ ಲೊಕೇಶನ್‌ಗೆ ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡಿದ್ದಾರೆ.

ಪಟ್ಟಣಗೆರೆ ಶೆಡ್‌ನ ಗೂಗಲ್ ಲೊಕೇಶನ್‌ಗೆ ಬಗ್ಗೆ ಬಂದಿರುವ ತರಹೇವಾರಿ ಕಾಮೆಂಟ್‌ಗಳು ಇಲ್ಲಿವೆ ನೋಡಿ... 
'ಪಟ್ಟಣಗೆರೆ ಶೆಡ್ ತುಂಬಾ ಸುಂದರವಾದ ಸ್ಥಳವಾಗಿದ್ದು, ಇಲ್ಲಿ ಸ್ವರರ್ಗವೇ ಇದೆ. ಒಮ್ಮೆ ಶೆಡ್‌ನ ಒಳಗೆ ಹೋದರೆ ನೀವು ಮತ್ತೆಂದೂ ಹೊರಗೆ ಬರುವುದಿಲ್ಲ. ವೀಕೆಂಡ್‌ನಲ್ಲಿ ತಪ್ಪದೇ ಭೇಟಿ ನೀಡಿ'.
'ಒಂದು ರಾತ್ರಿ ತಂಗಲು ಪಟ್ಟಣಗೆರೆ ಶೆಡ್‌ ಶಿಫಾರಸು ಮಾಡಿ.. ಉಚಿತ ಪಿಕಪ್ ಮತ್ತು ಡ್ರಾಪ್ ಲಭ್ಯವಿದೆ. ಇಲ್ಲಿ ಮಸಾಜ್ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ'.
'ಬೆಂಗಳೂರು ರೌಡಿಗಳೊಂದಿಗೆ ಉತ್ತಮ ವ್ಯವಹಾರ ಮತ್ತು ವ್ಯಾಜ್ಯ ಇತ್ಯರ್ಥಕ್ಕಾಗಿ ಉತ್ತಮ ಸ್ಥಳವಾಗಿದೆ. ನಿಮಗೆ ಜೀವನದ ಮೇಲೆ ಜಿಗುಪ್ಸೆ ಆಗಿದ್ದರೆ ಈ ಸ್ಥಳಕ್ಕೆ ಭೇಟಿ ನೀಡಬೇಕು'.

ಪಟ್ಟಣಗೆರೆ ಶೆಡ್‌ನ ಗೂಗಲ್ ಲೊಕೇಶನ್‌ಗೆ ಬಗ್ಗೆ ಬಂದಿರುವ ತರಹೇವಾರಿ ಮತ್ತಷ್ಟು ಕಾಮೆಂಟ್‌ಗಳು ಇಲ್ಲಿವೆ ನೋಡಿ..
* ತುಂಬಾ ಒಳ್ಳೆ ಜಾಗ ಒಂದು ಮೆಸೆಜ್ ಮಾಡಿದ್ರೆ ಸಾಕು ಅವರೇ ಬಂದು ಪಿಕ್ ಮಾಡ್ತಾರೆ.
* ಬೆಂಗಳೂರಿನಲ್ಲಿ ಹೋಗಲು ಅತ್ಯುತ್ತಮ ತಂಗುದಾಣ. ವಂಡರ್ಲಾ ಅಥವಾ ಫನ್ ವರ್ಲ್ಡ್‌ ಸ್ಥಳಕ್ಕಿಂತಲೂ ಹೆಚ್ಚು ಸಾಹಸಮಯವಾಗಿದೆ ಎಂದು ನಾನು ಕೇಳಿದ್ದೇನೆ. ಇಲ್ಲಿ ಉತ್ತಮ ಸಮಯವನ್ನು ಕಳೆಯಿರಿ.
* ಅತ್ಯುತ್ತಮವಾದ ಶೆಡ್, ನೀವು ಜೀವಿತಾವಧಿಯಲ್ಲಿ ಒಮ್ಮೆ ಈ ಶೆಡ್ ಅನ್ನು ಭೇಟಿ ಮಾಡಬಹುದು. ನೀವು ಸ್ವರ್ಗ/ನರಕಕ್ಕೆ ಹೋಗಲು ಬಯಸಿದರೆ ದಯವಿಟ್ಟು ಇಲ್ಲಿಗೆ ಭೇಟಿ ನೀಡಿ.
* ಕುಂಟೆ ಬಿಲ್ಲೆ ಆಡಲು ಉತ್ತಮವಾದ ಸ್ಥಳ.. ಶೆಡ್ದ್ ಹೋಗಣ ಬಾ!! ಕುಂಟೆಬಿಲ್ಲೆ ಆಡಣ ಬಾ!...

*ಶೆಡ್ ಗೆ ಬಾ 😂🤣 ನಿಮ್ಮ ಜೀವನದಲ್ಲಿ ಒಂದು ಬಾರಿ ಭೇಟಿ ನೀಡಲು ಉತ್ತಮ ಸ್ಥಳ. ಒಂದೇ ಭೇಟಿಗೆ ನೇರವಾಗಿ ಸ್ವರ್ಗಕ್ಕೆ ಕರೆದೊಯ್ಯಲಿದೆ. ಕುಂಟೆ ಬಿಲ್ಲೆ ಆಟ ಹೆಚ್ಚು ಶಿಫಾರಸು ಮಾಡಿದ ಚಟುವಟಿಕೆಯಾಗಿದೆ.
* ಸಿನಿಮಾ ನಟ ದರ್ಶನ್ ಮತ್ತು ನಟಿ ಪವಿತ್ರಾ ಗೌಡ ಅವರ ಗ್ಯಾಂಗ್ ನಿಂದ ಪಟ್ಟಣಗೆರೆ ಶೆಡ್‌ನಲ್ಲಿ ಚಿತ್ರದುರ್ಗ ಜಿಲ್ಲೆಯ ರೇಣುಕಾಸ್ವಾಮಿಯನ್ನು ಬಬರ್ಬರವಾಗಿ ಕೊಲೆ ಮಾಡಿದ ಸ್ಥಳವಾಗಿದೆ. 

Latest Videos

click me!