ಭಾರತದಲ್ಲಿ ಅತಿಹೆಚ್ಚು ಸಂಬಳ ಸಿಗುವ ಟಾಪ್ 6 ಸರ್ಕಾರಿ ಉದ್ಯೋಗಗಳಿವು! ನೀವೂ ಟ್ರೈ ಮಾಡಿ

Published : Feb 19, 2026, 09:03 AM IST

ಬೆಂಗಳೂರು: ಸರ್ಕಾರಿ ಕೆಲಸ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಸಾರ್ವಜನಿಕ ಸೇವೆಯ ಜತೆಗೆ ಕೈತುಂಬಾ ಸಂಬಳವನ್ನು ಪಡೆಯಬಹುದು. ಬನ್ನಿ ನಾವಿಂದು ಭಾರತದಲ್ಲಿ ಅತಿಹೆಚ್ಚು ಸಂಬಳ ಸಿಗುವ ಆರು ಸರ್ಕಾರಿ ಹುದ್ದೆಗಳು ಯಾವುವು ಎಂದು ನೋಡೋಣ. 

PREV
16
ONGC ಮುಖ್ಯಸ್ಥರು:

ಆಯಿಲ್ ಅಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೊರೇಷನ್‌ನ ಮುಖ್ಯಸ್ಥರು ತಿಂಗಳಿಗೆ 60 ಸಾವಿರ ರುಪಾಯಿನಿಂದ 2,80,000 ರುಪಾಯಿವರೆಗೆ ಸಂಬಳ ಪಡೆಯುತ್ತಾರೆ. ಇವರು ದೇಶದ ಮೂಲಸೌಕರ್ಯ, ಕಚ್ಚಾ ತೈಲವನ್ನು ರೀಫೈಂಡ್ ಮಾಡುವ ಮೂಲಕ ದೇಶಕ್ಕೆ ಹೆಚ್ಚಿನ ಆದಾಯ ತಂದುಕೊಡುವ ಕೆಲಸ ಮಾಡುತ್ತಾರೆ.

26
ಇಂಡಿಯನ್ ಆರ್ಮಿ ಚೀಫ್

ಭಾರತೀಯರಾದ ನಾವೆಲ್ಲರೂ ನೆಮ್ಮದಿಯಿಂದ ದೇಶದೊಳಗೆ ಜೀವನ ನಡೆಸುತ್ತಿದ್ದೇವೆ ಎಂದರೆ ಅದಕ್ಕೆ ಕಾರಣ ಭಾರತೀಯ ಸೇನೆ. ಭಾರತೀಯ ಸೇನೆಯ ಮೂರು ವಿಭಾಗಗಳಾದ ಭೂ ಸೇನೆ, ವಾಯು ಸೇನೆ ಹಾಗೂ ನೌಕ ಸೇನೆಯ ಮುಖ್ಯಸ್ಥರು ತಿಂಗಳಿಗೆ 56,100 ರುಪಾಯಿಗಳಿಂದ 2,50,000 ರುಪಾಯಿ ಸಂಬಳ ಪಡೆಯುತ್ತಾರೆ.

36
ಸುಪ್ರೀಂ ಕೋರ್ಟ್ ನ್ಯಾಯಾಧೀಶರು

ನ್ಯಾಯಾಂಗದ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿಭಾಯಿಸುವ ಮೂಲಕ ಈ ದೇಶದ ನೆಲದ ಕಾನೂನನ್ನು ಎತ್ತಿಹಿಡಿಯುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶರು ತಿಂಗಳಿಗೆ 2,50,000 ಸಂಬಳ ಪಡೆಯುತ್ತಾರೆ.

46
ಭಾರತ ಆಡಳಿತ ಸೇವೆ:

ಭಾರತ ಆಡಳಿತ ಸೇವೆ ಅಂದರೆ ಐಎಎಸ್ ಅಧಿಕಾರಿಗಳು ನಮ್ಮ ದೇಶದಲ್ಲಿ ಅತಿಹೆಚ್ಚು ಸಂಬಳ ಪಡೆಯುವ ಸರ್ಕಾರಿ ಉದ್ಯೋಗಿಗಳಾಗಿದ್ದಾರೆ. ಇವರಿಗೆ ತಿಂಗಳಿಗೆ 56,100 ನಿಂದ 2,50,000 ರುಪಾಯಿ ಸಂಬಳ ಸಿಗುತ್ತದೆ. ಸರ್ಕಾರದ ನೀತಿ ನಿರೂಪಣೆ ನೋಡಿಕೊಳ್ಳುವುದರ ಜತೆಗೆ ದೇಶವನ್ನು ಪ್ರಗತಿಪಥದತ್ತ ಕೊಂಡೊಯ್ಯುವ ಮಹತ್ವದ ಜವಾಬ್ದಾರಿ ಇವರ ಹೆಗಲ ಮೇಲಿದೆ.

56
ಇಂಡಿಯನ್ ಫಾರಿನ್ ಸರ್ವೀಸ್

ಐಎಫ್‌ಎಸ್ ಅಧಿಕಾರಿಗಳು ತಿಂಗಳಿಗೆ 56,100 ರುಪಾಯಿಗಳಿಂದ 2,50,000 ರುಪಾಯಿ ಸಂಬಳ ಪಡೆಯುತ್ತಾರೆ. ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸುವುದು, ರಾಜತಾಂತ್ರಿಕ ಬಿಕ್ಕಟ್ಟುಗಳನ್ನು ನಿಬಾಯಿಸುವುದು ಇವರ ಪ್ರಮುಖ ಕೆಲಸ.

66
ಭಾರತ ಪೊಲೀಸ್ ಸೇವೆ:

ಇಂಡಿಯನ್ ಪೊಲೀಸ್ ಸರ್ವೀಸ್ ಅಥವಾ ಐಪಿಎಸ್ ಅಧಿಕಾರಿಗಳು ಸಮಾಜದ ಕಾನೂನು ವ್ಯವಸ್ಥೆಯ ರಕ್ಷಕರಾಗಿದ್ದು, ಇವರಿಗೆ ಆರಂಭಿಕ 56,100 ರುಪಾಯಿನಿಂದ 2,25,000 ರುಪಾಯಿ ಸಂಬಳವನ್ನು ಪಡೆಯುತ್ತಾರೆ. ಅಪರಾಧ ಚಟುವಟಿಕೆಗಳನ್ನು ಮಟ್ಟಹಾಕುವುದು ಹಾಗೂ ಕಾನೂನು ಸುವ್ಯವಸ್ಥೆ ನೋಡಿಕೊಳ್ಳುವುದು ಇವರ ಪ್ರಮುಖ ಜವಾಬ್ದಾರಿ.

Read more Photos on
click me!

Recommended Stories