ಅರ್ಜಿ ಶುಲ್ಕ ಎಷ್ಟು?
ಎಲ್ಲಾ ಅಭ್ಯರ್ಥಿಗಳಿಗೆ ಪರೀಕ್ಷಾ ಶುಲ್ಕ 500 ರೂಪಾಯಿಗಳು. ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT)ಗೆ ಹಾಜರಾದ ನಂತರ, ಅನ್ವಯವಾಗುವ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿ ಅಭ್ಯರ್ಥಿಗಳಿಗೆ ₹400 ಹಣ ವಾಪಸ್ ಹಿಂತಿರುಗಿಸಲಾಗುತ್ತದೆ. PwBD, ಮಹಿಳೆಯರು, ಲಿಂಗಪರಿವರ್ತಿತರು, ಮಾಜಿ ಸೈನಿಕರು, SC/ST, ಅಲ್ಪಸಂಖ್ಯಾತ ವರ್ಗಗಳು ಅಥವಾ ಆರ್ಥಿಕವಾಗಿ ಹಿಂದುಳಿದ ವರ್ಗಗಳ (EBC) ಅಭ್ಯರ್ಥಿಗಳಿಗೆ ಶುಲ್ಕ 250 ರೂ. ನಿಗದಿಪಡಿಸಲಾಗಿದೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆಗೆ (CBT) ಹಾಜರಾದ ನಂತರ ಬ್ಯಾಂಕ್ ಶುಲ್ಕಗಳನ್ನು ಕಡಿತಗೊಳಿಸಿದ ನಂತರ ಈ ಮೊತ್ತವನ್ನು ಸಹ ಹಿಂತಿರುಗಿಸಲಾಗುತ್ತದೆ. ಇಂಟರ್ನೆಟ್ ಬ್ಯಾಂಕಿಂಗ್, ಡೆಬಿಟ್/ಕ್ರೆಡಿಟ್ ಕಾರ್ಡ್‌ಗಳು, UPI ಅಥವಾ ಲಭ್ಯವಿರುವ ಇತರ ಪಾವತಿ ವಿಧಾನಗಳನ್ನು ಬಳಸಿಕೊಂಡು ಶುಲ್ಕವನ್ನು ಆನ್‌ಲೈನ್‌ನಲ್ಲಿ ಪಾವತಿಸಬೇಕು.