ನ.04 ರಿಂದ ಮಹಿಳಾ IPL 2020 ಟೂರ್ನಿ; ಶಾರ್ಜಾದಲ್ಲಿ ಮೆಘಾಫೈಟ್!

First Published Nov 1, 2020, 7:19 PM IST

13ನೇ ಆವೃತ್ತಿ ಐಪಿಎಲ್ ಟೂರ್ನಿ ಅಂತಿಮ ಘಟ್ಟ ತಲುಪಿದೆ. ಪ್ಲೇ ಆಫ್ ಸ್ಥಾನಕ್ಕಾಗಿ ಹೋರಾಟ ಚುರುಕುಗೊಂಡಿದೆ. ಇದೀಗ ಮಹಿಳಾ ಐಪಿಎಲ್ ಟೂರ್ನಿ ಆರಂಭಗೊಳ್ಳುತ್ತಿದೆ. ಪ್ಲೇ ಆಫ್ ಪಂದ್ಯದ ನಡುವೆ ಮಹಿಳಾ ಐಪಿಎಲ್ ಟೂರ್ನಿ ಆಯೋಜನೆಗೊಳ್ಳಲಿದೆ. 3 ತಂಡಗಳು ಹೋರಾಟ ನಡೆಸಲಿದೆ. ಮಹಿಳಾ ಐಪಿಎಲ್ ಟೂರ್ನಿ ವೇಳಾಪಟ್ಟಿ, ತಂಡ ಸೇರಿದಂತೆ ಇತರ ಮಾಹಿತಿ ಇಲ್ಲಿದೆ.

13ನೇ ಆವೃತ್ತಿ ಐಪಿಎಲ್ ಟೂರ್ನಿಯ ಲೀಗ್ ಪಂದ್ಯಗಳು ನವೆಂಬರ್ 3ಕ್ಕೆ ಅಂತ್ಯಗೊಳ್ಳಲಿದೆ. ನವೆಂಬರ್ 4 ರಿಂದ ಮಹಿಳಾ ಐಪಿಎಲ್ ಟೂರ್ನಿ 2020 ಆರಂಭಗೊಳ್ಳಲಿದೆ.
undefined
ಪುರುಷರ ಐಪಿಎಲ್ ಟೂರ್ನಿಯ ಪ್ಲೇ ಆಫ್ ಪಂದ್ಯದ ನಡುವೆ ಮಹಿಳಾ ಐಪಿಎಲ್ ಟೂರ್ನಿ ನಡೆಯಲಿದೆ. ನವೆಂಬರ್ 09ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ.
undefined
ಮಹಿಳಾ ಐಪಿಎಲ್ 2020 ಟೂರ್ನಿಯಲ್ಲಿ ಒಟ್ಟು 4 ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಶಾರ್ಜಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ.
undefined
ಮೂರು ತಂಡಗಳಾದ ಸೂಪರ್‌ನೊವಾಸ್, ವೆಲೊಸಿಟಿ ಹಾಗೂ ಟ್ರೈಲ್‌ಬ್ಲೇಜರ್ಸ್ ಮಹಿಳಾ ಐಪಿಎಲ್ 2020 ಟೂರ್ನಿ ಪ್ರಶಸ್ತಿಗಾಗಿ ಹೋರಾಟ ನಡೆಸಲಿದೆ.
undefined
ನವೆಂಬರ್ 4 ರಂದು ಮೊದಲ ಪಂದ್ಯ, 2ನೇ ಪಂದ್ಯ ನವೆಂಬರ್ 5, ಮೂರನೇ ಪಂದ್ಯ ನವೆಂಬರ್ 7 ಹಾಗೂ ನವೆಂಬರ್ 9 ರಂದು ಫೈನಲ್ ಪಂದ್ಯ ನಡೆಯಲಿದೆ.
undefined
ನವೆಂಬರ್ 5 ರ ಪಂದ್ಯ 3.30ಕ್ಕೆ ಆರಂಭಗೊಳ್ಳಲಿದೆ. ಇನ್ನುಳಿದ ಎಲ್ಲಾ ಪಂದ್ಯಗಳು ಸಂಜೆ 7.30ಕ್ಕೆ ಆರಂಭವಾಗಲಿದೆ
undefined
ಸೂಪರ್ ನೋವಾಸ್ ತಂಡಕ್ಕೆ ಹರ್ಮನ್ ಪ್ರೀತ್ ಕೌರ್ ನಾಯಕಿ, ಸ್ಮೃತಿ ಮಂದಾನ ಟ್ರೈಲ್‌ಬ್ಲೇಜರ್ಸ್ ನಾಯಕಿಯಾಗಿದ್ದರೆ, ವೆಲೋಸಿಟಿ ತಂಡಕ್ಕೆ ಮಿಥಾಲಿ ರಾಜ್ ನಾಯಕಿಯಾಗಿದ್ದಾರೆ.
undefined
ವೆಲೋಸಿಟಿ ತಂಡದ ಉಪನಾಯಕಿಯಾಗಿರುವ ಕನ್ನಡತಿ ವೇದಾ ಕೃಷ್ಣಮೂರ್ತಿ ಈ ಬಾರಿಯ ಮಹಿಳಾ ಐಪಿಎಲ್ ಟೂರ್ನಿಯಲ್ಲಿ ಅಬ್ಬರಿಸೋ ವಿಶ್ವಾಸದಲ್ಲಿದ್ದಾರೆ
undefined
click me!