ಸತತ 4 ಪಂದ್ಯಗಳನ್ನು ಸೋತಿರುವ ಡೆಲ್ಲಿಗೆ ಪ್ಲೇ ಆಫ್‌ ಪ್ರವೇಶಿಸಲುಯಿದೆ ಲಾಸ್ಟ್ ಚಾನ್ಸ್..!

Suvarna News   | Asianet News
Published : Nov 01, 2020, 06:51 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅದ್ಭುತ ಆರಂಭವನ್ನು ಪಡೆದಿದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಮಹತ್ವದ ಘಟ್ಟದಲ್ಲಿ ಲಯ ಕಳೆದುಕೊಂಡಿದ್ದು, ಪ್ಲೇ ಆಫ್‌ಗೇರಲು ಹರಸಾಹಸ ಪಡುತ್ತಿದೆ. ಅದರಲ್ಲೂ ಮುಂಬೈ ಇಂಡಿಯನ್ಸ್ ಎದುರು ಹೀನಾಯ ಸೋಲು ಕಾಣುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ತನ್ನ ಪ್ಲೇ ಆಫ್‌ ಸ್ಥಾನವನ್ನು ಮತ್ತಷ್ಟು ಅಭದ್ರ ಮಾಡಿಕೊಂಡಿದೆ. ಡೆಲ್ಲಿ ಪ್ಲೇ ಆಫ್‌ ಸಾಧ್ಯಾಸಾಧ್ಯತೆಗಳೇನು ಎನ್ನುವುದರ ಲೆಕ್ಕಾಚಾರ ಇಲ್ಲಿದೆ ನೋಡಿ.

PREV
110
ಸತತ 4 ಪಂದ್ಯಗಳನ್ನು ಸೋತಿರುವ ಡೆಲ್ಲಿಗೆ  ಪ್ಲೇ ಆಫ್‌ ಪ್ರವೇಶಿಸಲುಯಿದೆ ಲಾಸ್ಟ್ ಚಾನ್ಸ್..!

ಡೆಲ್ಲಿ ಕ್ಯಾಪಿಟಲ್ಸ್ ತಂಡ ಟೂರ್ನಿ ಆರಂಭದಲ್ಲಿ ಅತ್ಯಂತ ತಂಡ ಎನ್ನುವಂತೆ ಪ್ರದರ್ಶನ ನೀಡಿತ್ತು, ಮೊದಲ 9 ಪಂದ್ಯಗಳ ಪೈಕಿ 7 ಪಂದ್ಯಗಳನ್ನು ಗೆದ್ದು, ಪ್ಲೇ ಆಫ್‌ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿತ್ತು.

210

ಆದರೆ ಇದಾದ ಬಳಿಕ ಸತತ 4 ಪಂದ್ಯಗಳನ್ನು ಸೋಲುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದೀಗ ಅಂತಿಮ ನಾಲ್ಕರ ಘಟ್ಟದಲ್ಲಿ ಸ್ಥಾನ ಪಡೆಯಲು ಹರಸಾಹಸ ಪಡುತ್ತಿದೆ. 

310

ಅದರಲ್ಲೂ ಬಲಿಷ್ಠ ಮುಂಬೈ ಇಂಡಿಯನ್ಸ್ ಎದುರು ಆಘಾತಕಾರಿ ಸೋಲು ಕಂಡಿರುವ ಬೆನ್ನಲ್ಲೇ ಡೆಲ್ಲಿ ತಂಡ ಇದೀಗ ಆರ್‌ಸಿಬಿ ಎದುರು ಮಾಡು ಇಲ್ಲವೇ ಮಡಿ ಪಂದ್ಯವನ್ನಾಡಲು ಸಜ್ಜಾಗಿದೆ.

410

ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎದುರು ಡೆಲ್ಲಿ ಗೆಲುವು ಸಾಧಿಸಿದರೆ, ನೇರವಾಗಿ ಮೊದಲ ಕ್ವಾಲಿಫೈಯರ್ ಆಡಲು ಅರ್ಹತೆಗಿಟ್ಟಿಸಿಕೊಳ್ಳಲಿದೆ.

510

ಒಂದು ವೇಳೆ ಆರ್‌ಸಿಬಿ ವಿರುದ್ಧ ಮುಗ್ಗರಿಸಿದರೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸಂಪೂರ್ಣವಾಗಿ ಪ್ಲೇ ಆಫ್‌ ರೇಸಿನಿಂದ ಹೊರಬೀಳುವುದಿಲ್ಲ.

610

ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಅದೃಷ್ಟ ಕೈಹಿಡಿದರೆ ಆರ್‌ಸಿಬಿ ವಿರುದ್ಧ ಸೋತರೂ ಪ್ಲೇ ಆಫ್ ಹಂತವನ್ನು ಪ್ರವೇಶಿಸಬಹುದಾಗಿದೆ.

710

ಸದ್ಯ ಡೆಲ್ಲಿ ಕ್ಯಾಪಿಟಲ್ಸ್ ತಂಡ 13 ಪಂದ್ಯಗಳನ್ನಾಡಿ 7 ಗೆಲುವು ಹಾಗೂ 6 ಸೋಲುಗಳೊಂದಿಗೆ 14 ಅಂಕ ಸಹಿತ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

810

ಒಂದು ವೇಳೆ ಸನ್‌ರೈಸರ್ಸ್ ಹೈದರಾಬಾದ್ ತಂಡ ಮುಂಬೈ ವಿರುದ್ಧ ಸೋಲನ್ನು ಅನುಭವಿಸಿದರೆ, ಇದರ ಜತೆಗೆ ರಾಜಸ್ಥಾನ ರಾಯಲ್ಸ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡದ ನೆಟ್‌ ರೇಟ್‌ ಡೆಲ್ಲಿಗಿಂತ ಕಡಿಮೆಯಿದ್ದರೆ ಅಯ್ಯರ್ ಪ್ಲೇ ಆಫ್‌ ಹಾದಿ ಸುಗಮವಾಗಲಿದೆ.

910

ಒಂದು ವೇಳೆ ಡೆಲ್ಲಿ ತಂಡ ಆರ್‌ಸಿಬಿ ವಿರುದ್ಧ ಮುಗ್ಗರಿಸಿ, ಇದೇ ವೇಳೆ ಹೈದರಾಬಾದ್ ತಂಡ ಡೆಲ್ಲಿಗೆ ಸೋಲುಣಿಸಿದರೆ ಅಯ್ಯರ್ ಪಡೆ ಲೀಗ್ ಹಂತದಲ್ಲೇ ಹೊರಬೀಳಲಿದೆ.

1010

ಒಟ್ಟಿನಲ್ಲಿ ಪರಿಶ್ರಮ ಹಾಗೂ ಅದೃಷ್ಟ ಎರಡೂ ಕೈ ಹಿಡಿದರೆ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ಲೇ ಆಫ್‌ಗೆ ಏರಬಹುದಾಗಿದೆ.

click me!

Recommended Stories