ಕೊಹ್ಲಿ To ಪಂತ್: 10 ಲಕ್ಷದಿಂದ ಆರಂಭಿಸಿ 17 ಕೋಟಿಗೂ ಅಧಿಕ ಸ್ಯಾಲರಿ ಪಡೆಯುತ್ತಿರುವ ಕ್ರಿಕೆಟರ್ಸ್!

First Published Sep 8, 2020, 5:31 PM IST

IPL ಟೂರ್ನಿ ಪ್ರತಿಭಾನ್ವಿತ ಕ್ರಿಕೆಟಿಗರಿಗೆ ಅವಕಾಶ ನೀಡುವ ಜೊತೆಗೆ ಆರ್ಥಿಕವಾಗಿ ಸದೃಢ ಮಾಡುತ್ತಿದೆ. ಅದರಲ್ಲಿ ಕೆಲ ಕ್ರಿಕೆಟಿಗರೂ ಮೂಲ ಬೆಲೆಯಿಂದ ಐಪಿಎಲ್ ಪಯಣ ಆರಂಭಿಸಿ ಇದೀಗ ಕೋಟಿ ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ಈ ಕ್ರಿಕೆಟಿಗರ ವಿವರ ಇಲ್ಲಿದೆ.

2008ರಲ್ಲಿ ಅಂಡರ್ 19 ತಂಡದ ನಾಯಕ ವಿರಾಟ್ ಕೊಹ್ಲಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮೊದಲ ಐಪಿಎಲ್ ಹರಾಜಿನಲ್ಲಿ 13 ಲಕ್ಷ ರೂಪಾಯಿ ನೀಡಿ ಖರೀದಿಸಿತ್ತು. ಪ್ರತಿ ಹರಾಜಿಗೂ ಮುನ್ನವೇ ವಿರಾಟ್ ಕೊಹ್ಲಿಯನ್ನು ಆರ್‌ಸಿಬಿ ತನ್ನಲ್ಲೇ ಉಳಿಸಿಕೊಂಡಿದೆ.
undefined
13 ಲಕ್ಷ ರೂಪಾಯಿಂದ ಆರಂಭಗೊಂಡ ಕೊಹ್ಲಿ ಐಪಿಎಲ್ ಪಯಣ 2011ರ ವೇಳೆಗೆ 8.28 ಕೋಟಿ ಸ್ಯಾಲರಿ ಪಡೆದರು. ಇನ್ನು 2014ರಲ್ಲಿ 12.5 ಕೋಟಿ ರೂಪಾಯಿ ಪಡೆದರೆ, 2017ರಲ್ಲಿ 17 ಕೋಟಿ ರೂಪಾಯಿ ಸ್ಯಾಲರಿ ಪಡೆದಿದ್ದಾರೆ.
undefined
ಕನ್ನಡಿಗ ಕೆಎಲ್ ರಾಹುಲ್ 2013ರಲ್ಲಿ 13 ಲಕ್ಷ ರೂಪಾಯಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬಿಕರಿಯಾಗಿದ್ದರು. ಐಪಿಎಲ್ ಟೂರ್ನಿ ಎಂಟ್ರಿ ಬಳಿಕ ಟೀಂ ಇಂಡಿಯಾ ಟೆಸ್ಟ್ ತಂಡಕ್ಕೆ ಪದಾರ್ಪಣೆ ಮಾಡಿದ ರಾಹುಲ್ ಸ್ಯಾಲರಿ 10 ಪಟ್ಟು ಏರಿಕೆಯಾಯಿತು.
undefined
2014ರಲ್ಲಿ ರಾಹುಲ್‌ಗೆ 1 ಕೋಟಿ ರೂಪಾಯಿ ನೀಡಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಖರೀದಿಸಿತು. 2018ರಲ್ಲಿ ರಾಹುಲ್‌ಗೆ 11 ಕೋಟಿ ರೂಪಾಯಿ ನೀಡಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಖರೀದಿಸಿತು.
undefined
2015ರಲ್ಲಿ ಮುಂಬೈ ಇಂಡಿಯನ್ಸ್ ಯುವ ಆಲ್ರೌಂಡರ್ ಹಾರ್ದಿಕ್ ಪಾಂಡ್ಯಗೆ 1 ಕೋಟಿ ರೂಪಾಯಿ ನೀಡಿ ಖರೀದಿಸಿತು. ಪಾಂಡ್ಯ ಜೊತೆ 3 ವರ್ಷಗಳ ಒಪ್ಪಂದ ಮಾಡಿಕೊಂಡ ಕಾರಣ 2017ರ ವರೆಗೆ 1 ಕೋಟಿ ರೂಪಾಯಿ ಸ್ಯಾಲರಿ ಪಡೆದರು.
undefined
2018ರಲ್ಲಿ ಹಾರ್ದಿಕ್ ಪಾಂಡ್ಯ ಸ್ಯಾಲರಿಯನ್ನು ಮುಂಬೈ ಇಂಡಿಯನ್ಸ್ 11 ಪಟ್ಟು ಏರಿಕೆ ಮಾಡಿತು. 2018ರಲ್ಲಿ ಹಾರ್ದಿಕ್ ಪಾಂಡ್ಯ 11 ಕೋಟಿ ರೂಪಾಯಿ ಸ್ಯಾಲರಿ ಪಡೆದರು.
undefined
2016ರಲ್ಲಿ ರಿಷಬ್ ಪಂತ್ ಐಪಿಎಲ್ ಟೂರ್ನಿಗೆ ಪದಾರ್ಪಣೆ ಮಾಡಿದರು. ಡೆಲ್ಲಿ ಕ್ಯಾಪಿಟಲ್ಸ್ ತಂಡ ರಿಷಬ್ ಪಂತ್‌ಗೆ 1.9 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು
undefined
2020ರಲ್ಲಿ ರಿಷಬ್ ಪಂತ್ ಐಪಿಎಲ್ ಸ್ಯಾಲರಿ ಶೇಕಡಾ 88 ರಷ್ಟು ಹೆಚ್ಚಳವಾಯಿತು. 2020ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ರಿಷಬ್ ಪಂತ್‌ಗೆ 15 ಕೋಟಿ ರೂಪಾಯಿ ಸ್ಯಾಲರಿ ನೀಡಿತು.
undefined
click me!