IPL 2020: ಡೆಲ್ಲಿ ಕ್ಯಾಪಿಟಲ್ಸ್‌ ಈ ಸಲ ಕಪ್‌ ಗೆಲ್ಲುವ ನೆಚ್ಚಿನ ತಂಡವೆನ್ನಲು ಈ 4 ಅಂಶಗಳೇ ಸಾಕು..!

First Published Sep 8, 2020, 1:29 PM IST

ಬೆಂಗಳೂರು: ಚೊಚ್ಚಲ ಐಪಿಎಲ್‌ ಗೆಲ್ಲುವ ಕನವರಿಕೆಯಲ್ಲಿರುವ ಮೂರು ತಂಡಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಕೂಡಾ ಒಂದು ಎನಿಸಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕಿಂಗ್ಸ್ ಇಲೆವನ್ ಪಂಜಾಬ್ ತಂಡದಂತೆ ಡೆಲ್ಲಿಗೂ ಕೂಡಾ ಕಪ್ ಎತ್ತಿಹಿಡಿಯುವ ಅವಕಾಶ ಒದಗಿ ಬಂದಿಲ್ಲ.
ಕಳೆದ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ತೋರಿದ ಹೊರತಾಗಿಯೂ ಕೊನೆಯ ಕ್ಷಣದಲ್ಲಿ ಮಾಡಿದ ಎಡವಟ್ಟಿನಿಂದಾಗಿ ಡೆಲ್ಲಿ ಕಪ್ ಗೆಲ್ಲುವ ಅವಕಾಶದಿಂದ ವಂಚಿತವಾಯಿತು. ಆದರೆ ಈ ಬಾರಿ ಐಪಿಎಲ್ ಕಪ್‌ ಗೆಲ್ಲಬಲ್ಲ ಪ್ರಬಲ ತಂಡವಾಗಿ ಡೆಲ್ಲಿ ಕ್ಯಾಪಿಟಲ್ಸ್ ಗುರುತಿಸಿಕೊಂಡಿದೆ. ಈ 5 ಕಾರಣಗಳಿಂದಾಗಿ ಡೆಲ್ಲಿ ಸಲ ಕಪ್ ಗೆಲ್ಲಬಹುದು.

1. ಸ್ಫೋಟಕ ಭಾರತೀಯ ಯುವ ಬ್ಯಾಟ್ಸ್‌ಮನ್‌ಗಳ ದಂಡು..!
undefined
ಡೆಲ್ಲಿ ತಂಡದಲ್ಲಿ 3 ಭಾರತೀಯ ಯುವ ನಂಬಿಕಸ್ಥ ಸ್ಫೋಟಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ನಾಯಕ ಶ್ರೇಯಸ್ ಅಯ್ಯರ್, ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ರಿಷಭ್ ಪಂತ್ ಹಾಗೂ ಪೃಥ್ವಿ ಶಾ ತಂಡದ ಪಾಲಿಗೆ ಬಲಿಷ್ಠ ಬ್ಯಾಟಿಂಗ್ ಪಡೆಯನ್ನೇ ಹೊಂದಿದೆ.
undefined
2. ಬಲಾಢ್ಯ ಆರಂಭಿಕರನ್ನು ಹೊಂದಿದೆ ಡೆಲ್ಲಿ
undefined
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಮೂವರು ತಜ್ಞ ಆರಂಭಿಕ ಬ್ಯಾಟ್ಸ್‌ಮನ್‌ಗಳಿದ್ದಾರೆ. ಪೃಥ್ವಿ ಶಾ ಹಾಗೂ ಶಿಖರ್ ಧವನ್ ಆರಂಭಿಕರಾಗಿದ್ದು, ಈ ಬಾರಿ ಅಜಿಂಕ್ಯ ರಹಾನೆ ಕೂಡಾ ಡೆಲ್ಲಿ ತಂಡ ಕೂಡಿಕೊಂಡಿರುವುದು ಡೆಲ್ಲಿ ಬಲವನ್ನು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಧವನ್ ಹಾಗೂ ಪೃಥ್ವಿ ಸಿಡಿಲಬ್ಬರದ ಆರಂಭ ಒದಗಿಸಿದರೆ ಉತ್ತಮ ಮೊತ್ತ ದಾಖಲಿಸಬಹುದು.
undefined
3. ಅನುಭವಿ ಹಾಗೂ ಯುವ ಸ್ಪಿನ್ನರ್‌ಗಳ ಪಡೆ:
undefined
ಡೆಲ್ಲಿ ತಂಡದಲ್ಲಿ ಸಾಕಷ್ಟು ಅನುಭವಿ ಹಾಗೂ ಯುವ ಸ್ಪಿನ್ನರ್‌ಗಳ ಪಡೆಯೇ ಇದೆ. ಅಮಿತ್ ಮಿಶ್ರಾ, ಅಕ್ಷರ್ ಪಟೇಲ್, ಸಂದೀಪ್ ಲ್ಯಾಮಿಚ್ಚಾನೆ ಅವರ ಜತೆಗೆ ರವಿಚಂದ್ರನ್ ಅಶ್ವಿನ್ ಕೂಡಾ ಡೆಲ್ಲಿ ತಂಡವನ್ನು ಸೇರಿಕೊಂಡಿರುವುದು ಎದುರಾಳಿ ಪಾಳಯದಲ್ಲಿ ನಡುಕ ಹುಟ್ಟಿಸುವುದಂತೂ ಗ್ಯಾರಂಟಿ.
undefined
4. ಡೆಡ್ಲಿ ಮಾರಕ ವೇಗಿಗಳು:
undefined
ಡೆಲ್ಲಿ ತಂಡ ಬರೀ ಸ್ಪಿನ್ನರ್‌ಗಳನ್ನೇ ನೆಚ್ಚಿಕೊಂಡಿಲ್ಲ, ಮಾರಕ ವೇಗಿಗಳ ದಂಡೇ ಇದೆ. ಕಗಿಸೋ ರಬಾಡ, ಕೀಮೋ ಪೌಲ್, ಮೋಹಿತ್ ಶರ್ಮಾ, ಆನ್ರಿಚ್ ನೋರ್ಜೆ, ಇಶಾಂತ್ ಶರ್ಮಾ ಅವರಂತಹ ಮಾರಕ ವೇಗಿಗಳು ಇರುವುದರಿಂದ ಡೆಲ್ಲಿ ಈ ಬಾರಿ ಕಪ್‌ ಗೆಲ್ಲುವ ಪ್ರಬಲ ತಂಡಗಳಲ್ಲಿ ಒಂದು ಎಂದರೆ ತಪ್ಪಾಗಲಾರದು.
undefined
click me!