ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿದ ಟಾಪ್ 5 ಕ್ರಿಕೆಟಿಗರಿವರು..!

Suvarna News   | Asianet News
Published : Sep 10, 2020, 05:08 PM IST

ಬೆಂಗಳೂರು: ಭಾರತದ ಚುಟುಕು ಕ್ರಿಕೆಟ್ ಹಬ್ಬ ಐಪಿಎಲ್ ಟೂರ್ನಿ ಆರಂಭಕ್ಕೆ ಕೌಂಟ್ ಡೌನ್ ಶುರುವಾಗಿದೆ. ಹೊಡಿಬಡಿಯಾಟಕ್ಕೆ ಹೆಸರಾದ ಐಪಿಎಲ್ ಟೂರ್ನಿಯಲ್ಲಿ ಹಲವಾರು ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿ ಬೊಬ್ಬಿರಿದಿದ್ದಾರೆ. ಇದುವರೆಗೂ 12 ಐಪಿಎಲ್ ಆವೃತ್ತಿಗಳು ಮುಕ್ತಾಯವಾಗಿದ್ದು 57 ಶತಕಗಳು ದಾಖಲಾಗಿವೆ. ಕ್ರಿಸ್‌ ಗೇಲ್ ಒಬ್ಬರೇ 6 ಶತಕ ಚಚ್ಚಿದ್ದರೆ, ವಿರಾಟ್ ಕೊಹ್ಲಿ 5, ಡೇವಿಡ್ ವಾರ್ನರ್ ಹಾಗೂ ಶೇನ್ ವಾಟ್ಸನ್ ತಲಾ 4 ಶತಕ ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಐಪಿಎಲ್ ಇತಿಹಾಸದಲ್ಲಿ ಅತಿವೇಗವಾಗಿ ಶತಕ ಸಿಡಿಸಿದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...

PREV
112
ಐಪಿಎಲ್ ಟೂರ್ನಿಯಲ್ಲಿ ಅತಿವೇಗದ ಶತಕ ಸಿಡಿಸಿದ ಟಾಪ್ 5 ಕ್ರಿಕೆಟಿಗರಿವರು..!

1. ಕ್ರಿಸ್ ಗೇಲ್: 30 ಎಸೆತ

1. ಕ್ರಿಸ್ ಗೇಲ್: 30 ಎಸೆತ

212

ಏಪ್ರಿಲ್ 23, 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಲ್ಲಿದ್ದ ಕ್ರಿಸ್‌ ಗೇಲ್ ಪುಣೆ ವಾರಿಯರ್ಸ್ ವಿರುದ್ಧ ಕೇವಲ 30 ಎಸೆತಗಳಲ್ಲಿ ಮೂರಂಕಿ ಮೊತ್ತ ದಾಖಲಿಸಿದ್ದರು. ಈ ಪಂದ್ಯದಲ್ಲಿ ಗೇಲ್ ಒಟ್ಟು 66 ಎಸೆತಗಳನ್ನು ಎದುರಿಸಿ 17 ಸಿಡಿಲಬ್ಬರದ ಸಿಕ್ಸರ್‌ಗಳ ನೆರವಿನಿಂದ 175 ರನ್ ಬಾರಿಸಿದ್ದರು.

312

2. ಯೂಸೂಪ್ ಪಠಾಣ್: 37 ಎಸೆತ

2. ಯೂಸೂಪ್ ಪಠಾಣ್: 37 ಎಸೆತ

412

ರಾಜಸ್ಥಾನ ರಾಯಲ್ಸ್ ತಂಡದಲ್ಲಿದ್ದ ಯೂಸುಪ್ ಪಠಾಣ್ ಮಾರ್ಚ್ 13, 2010ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಕೇವಲ 37 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಪಠಾಣ್ ಸ್ಪೋಟಕ ಶತಕದ ಹೊರತಾಗಿಯೂ ರಾಜಸ್ಥಾನ ರಾಯಲ್ಸ್ ತಂಡ 4 ವಿಕೆಟ್‌ಗಳಿಂದ ಶರಣಾಗಿತ್ತು.

512

3. ಡೇವಿಡ್ ಮಿಲ್ಲರ್: 38 ಎಸೆತ

3. ಡೇವಿಡ್ ಮಿಲ್ಲರ್: 38 ಎಸೆತ

612

ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದ ಡೇವಿಡ್ ಮಿಲ್ಲರ್ ಮೇ 06, 2013ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಕ್ಷರಶಃ ಅಬ್ಬರಿಸಿದ್ದರು. ಮೊದಲು ಬ್ಯಾಟಿಂಗ್ ಮಾಡಿ 190 ರನ್ ಗಳಿಸಿದ್ದ ಆರ್‌ಸಿಬಿ ಬಳಿಕ 9.5 ಓವರ್‌ಗಳಲ್ಲಿ ಕೇವಲ 64 ರನ್ ನೀಡಿ 4 ವಿಕೆಟ್ ಕಬಳಿಸಿ ಗೆಲುವಿನ ಕನವರಿಕೆಯಲ್ಲಿತ್ತು. ಈ ವೇಳೆ ಕೇವಲ 38 ಎಸೆತಗಳಲ್ಲಿ ಶತಕ ಸಿಡಿಸಿ ಮಿಲ್ಲರ್ ಆರ್‌ಸಿಬಿ ಪಾಲಿಗೆ ಕಿಲ್ಲರ್ ಮಿಲ್ಲರ್ ಎನಿಸಿದರು.

712

4. ಆಡಂ ಗಿಲ್‌ಕ್ರಿಸ್ಟ್: 42 ಎಸೆತ

4. ಆಡಂ ಗಿಲ್‌ಕ್ರಿಸ್ಟ್: 42 ಎಸೆತ

812

ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಂ ಗಿಲ್‌ಕ್ರಿಸ್ಟ್ ಏಪ್ರಿಲ್ 27, 2008ರಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 42 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಅವರ ಈ ಇನಿಂಗ್ಸ್‌ನಲ್ಲಿ 4 ಬೌಂಡರಿ ಹಾಗೂ 10 ಸಿಕ್ಸರ್‌ಗಳು ಸೇರಿದ್ದವು.

912

5. ಎಬಿ ಡಿವಿಲಿಯರ್ಸ್: 43 ಎಸೆತ

5. ಎಬಿ ಡಿವಿಲಿಯರ್ಸ್: 43 ಎಸೆತ

1012

ಮಿಸ್ಟರ್ 360 ಖ್ಯಾತಿಯ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ ಮೇ.14, 2016ರಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿದ್ದರು. ಈ ಪಂದ್ಯದಲ್ಲಿ ಕೊಹ್ಲಿ ಕೂಡಾ ಶತಕ ಬಾರಿಸಿದ್ದರು. ಅಂತಿಮವಾಗಿ ಗುಜರಾತ್ ಲಯನ್ಸ್ ವಿರುದ್ಧ ಆರ್‌ಸಿಬಿ 144 ರನ್‌ಗಳ ಭಾರೀ ಅಂತರದ ಜಯ ಸಾಧಿಸಿತ್ತು.

1112

6. ಡೇವಿಡ್ ವಾರ್ನರ್: 43 ಎಸೆತ

6. ಡೇವಿಡ್ ವಾರ್ನರ್: 43 ಎಸೆತ

1212

ಸನ್‌ರೈಸರ್ಸ್ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಏಪ್ರಿಲ್ 30, 2017ರಲ್ಲಿ ಕೊಲ್ಕತಾ ನೈಟ್‌ ರೈಡರ್ಸ್ ವಿರುದ್ಧ ಕೇವಲ 43 ಎಸೆತಗಳಲ್ಲಿ ಶತಕ ಪೂರೈಸಿ ಎಬಿಡಿ ಜತೆ ಜಂಟಿ 5ನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ. 

click me!

Recommended Stories