ಐಪಿಎಲ್ ತಂಡಗಳೊಂದಿಗೆ ಸಂಬಂಧ ಹೊಂದಿರುವ ಬಾಲಿವುಡ್ ಸೆಲೆಬ್ರೆಟಿಗಳು!

First Published | Sep 19, 2020, 1:21 PM IST

ಐಪಿಎಲ್  ಗ್ಲಾಮರ್ ಜಗತ್ತಿನೊಂದಿಗೆ ನಿಕಟ ಸಂಬಂಧ ಹೊಂದಿರುವ ವಿಷಯ ತಿಳಿದೇ ಇದೆ.   ಹಲವಾರು ಸೆಲೆಬ್ರೆಟಿಗಳು ವಿಶೇಷವಾಗಿ ಬಾಲಿವುಡ್‌ಗೆ ಸೇರಿದವರು  ಐಪಿಎಲ್‌ ಟೀಮ್‌ಗಳೊಂದಿಗೆ ಸಂಬಂಧ ಹೊಂದಿದ್ದಾರೆ.   ಐಪಿಎಲ್ ಜೊತೆ ಸಂಬಂಧ ಹೊಂದಿರುವ ಸಿನಿಮಾ ಜಗತ್ತಿಗೆ ಸೇರಿದ ವ್ಯಕ್ತಿಗಳು ಇವರು. 

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಸ್ತಿತ್ವಕ್ಕೆ ಬಂದಾಗಿನಿಂದಲೂ, ಸೆಲೆಬ್ರೆಟಿಗಳು ಫ್ರ್ಯಾಂಚೈಸ್‌ನೊಂದಿಗೆ ಸಂಬಂಧ ಹೊಂದಿದ್ದಾರೆ. ಮಾಲೀಕರಾಗಿ ಅಥವಾ ಬ್ರಾಂಡ್ ಅಂಬಾಸಿಡರ್ ಆಗಿ ಬಾಲಿವುಡ್‌ ಜೊತೆ ಕನೆಕ್ಟ್‌ ಆಗಿದೆ ಐಪಿಎಲ್‌ .
ಸೆಲೆಬ್ರಿಟಿಗಳಲ್ಲಿ ಬಾಲಿವುಡ್ ತಾರೆಯರು ಫ್ರ್ಯಾಂಚೈಸ್‌ ಜೊತೆ ಕೈ ಸೇರಿಸಿರುವುದು ಈ ಟೂರ್ನಿಯ ಗ್ಲಾಮರ್ ಅಂಶವನ್ನು ಹೆಚ್ಚಿಸಲು ಸಹಾಯ ಮಾಡಿದೆ.
Tap to resize

ಪ್ರಿಯಾಂಕಾ ಚೋಪ್ರಾ (ಕೆಕೆಆರ್): ಮಾಜಿ ಮಿಸ್ ವರ್ಲ್ಡ್ ಬಾಲಿವುಡ್‌ನ ಫೇಮಸ್‌ ನಟಿ ಪಿಸಿಗೂ ಈ ಟೂರ್ನಿಯ ಜೊತೆ ನಂಟಿದೆ . 2012 ರ ಸೀಸನ್‌ನಲ್ಲಿ ಅವರು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಜೊತೆ ಸಂಬಂಧ ಹೊಂದಿದ್ದರು ಈ ನಟಿ, ಈ ತಂಡ 'ಬಾಲಿವುಡ್ ಕಿಂಗ್' ಶಾರುಖ್ ಖಾನ್‌ರರ ಒಡೆತನದಲ್ಲಿದೆ. ಅದೇ ವರ್ಷ ಕೆಕೆಆರ್ ತಂಡ ತನ್ನ ಮೊದಲ ಪ್ರಶಸ್ತಿಯನ್ನು ಸಹ ಗೆದ್ದಿತು.
ಹೃತಿಕ್ ರೋಷನ್ :ಐಪಿಎಲ್ ಆರಂಭಿಕ ಸಿಸನ್‌ನಲ್ಲಿ ಮುಂಬೈ ಇಂಡಿಯನ್ಸ್ (ಎಂಐ) ಮ್ಯಾನೇಜ್ಮೆಂಟ್ ಬಾಲಿವುಡ್‌ನ ಹಾಟ್‌ ಹೃತಿಕ್ ರೋಷನ್‌ರನ್ನು ಬ್ರಾಂಡ್ ಅಂಬಾಸಿಡರ್‌ ಆರಿಸಿಕೊಂಡಿತ್ತು.
ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ (ಆರ್‌ಸಿಬಿ): ವಿರಾಟ್ ಕೊಹ್ಲಿ ನೇತೃತ್ವದಲ್ಲಿರುವುದರಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಟೀಮ್‌ ಅಭಿಮಾನಿಗಳ ಮೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಆದಾಗ್ಯೂ, ಈ ತಂಡ ಹಿಂದೆ ವಿಜಯ್ ಮಲ್ಯ ಒಡೆತನದಲ್ಲಿದ್ದಾಗ, ಕತ್ರಿನಾ ಕೈಫ್ ಮತ್ತು ದೀಪಿಕಾ ಪಡುಕೋಣೆ ಈ ತಂಡದ ಜೊತೆ ಕಾಣಿಸಿಕೊಂಡಿದ್ದರು. ಆದರೆ ಆರ್‌ಸಿಬಿ ಎಂದಿಗೂ ಕಪ್‌ ಎತ್ತುವಲ್ಲಿ ಯಶಸ್ವಿಯಾಗಲಿಲ್ಲ.
ಸನ್ನಿ ಲಿಯೋನ್ (ಕೆಎಕ್ಸ್‌ಐಪಿ): ಕಿಂಗ್ಸ್ ಇಲೆವೆನ್ ಪಂಜಾಬ್ (ಕೆಎಕ್ಸ್‌ಐಪಿ) ಕೂಡ ಬಿ-ಟೌನ್ ಸೆಲೆಬ್ರಿಟಿ ಪ್ರೀಟಿ ಜಿಂಟಾ ಒಡೆತನದಲ್ಲಿದೆ. ಫ್ರ್ಯಾಂಚೈಸ್ ಸಾಕಷ್ಟು ಸೆಲೆಬ್ರೆಟಿ ನಂಟು ಹೊಂದಿದ್ದರೂ, ಇಲ್ಲಿಯವರೆಗೆ ತುಂಬಾ ಸದ್ದು ಮಾಡಿದ್ದು ಸನ್ನಿ ಲಿಯೋನ್. ಅವರು 2015 ಸೀಸನ್‌ವಿನಲ್ಲಿ ತಂಡದೊಂದಿಗೆ ಗುರುತಿಸಲ್ಪಟ್ಟರು. ಮಾಜಿ ಪ್ರೋನ್‌ ಸ್ಟಾರ್‌ ಹಾಗೂ ಬಾಲಿವುಡ್ ನಟಿ ಇಡೀ ವಾತಾವರಣದಲ್ಲಿ ಸಂಚಲನ ಉಂಟು ಮಾಡಿದ್ದರು. ಆದರೆ ಕೆಎಕ್ಸ್‌ಐಪಿ ಇನ್ನೂ ತನ್ನ ಚೊಚ್ಚಲ ಟ್ರೋಫಿಗಾಗಿ ಕಾಯುತ್ತಿದೆ.
ವಿಂದು ದಾರಾ ಸಿಂಗ್ (ಸಿಎಸ್‌ಕೆ): ಚೆನ್ನೈ ಸೂಪರ್ ಕಿಂಗ್ಸ್ ಹೆಚ್ಚಾಗಿ ಕಾಲಿವುಡ್‌ನ ಸೆಲೆಬ್ರಿಟಿಗಳೊಂದಿಗೆ ತೊಡಗಿಸಿಕೊಂಡಿದ್ದರೂ, ವಿಂದೂ ದಾರಾ ಸಿಂಗ್ ಈ ತಂಡದೊಂದಿಗೆ ದೀರ್ಘಕಾಲ ಸಂಬಂಧ ಹೊಂದಿದ್ದರು. ಆದರೆ ಅವರ ವಿರುದ್ಧದ 2013 ರ ಭ್ರಷ್ಟಾಚಾರದ ಆರೋಪಗಳ ನಂತರ ಅವರು ಕಾಣಿಸಿಕೊಳ್ಳಲಿಲ್ಲ.
ಅಕ್ಷಯ್ ಕುಮಾರ್ (ಡಿಡಿ): ಫಸ್ಟ್‌ ಸೀಸನ್‌ನಲ್ಲಿ ದೆಹಲಿ ಡೇರ್‌ಡೆವಿಲ್ಸ್ (ಡಿಡಿ) ಎಂಬ ಹೆಸರಿನ ತಂಡಕ್ಕೆಸಹಜವಾಗಿ, ಡೇರ್‌ಡೆವಿಲ್ ಮಾದರಿಯ ಬ್ರಾಂಡ್ ಅಂಬಾಸಿಡರ್ ಅಗತ್ಯವಿತ್ತು. ಆಗ ಚಲನಚಿತ್ರಗಳಲ್ಲಿ ಡೇರ್‌ಡೆವಿಲ್ ಸಾಹಸಗಳನ್ನು ಪ್ರದರ್ಶಿಸುವಲ್ಲಿ ಪ್ರಸಿದ್ಧರಾಗಿರುವ ಬಾಲಿವುಡ್‌ನ ಅಕ್ಷಯ್ ಕುಮಾರ್ ಈ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ಈ ತಂಡವು ನಾಲ್ಕು ಪ್ಲೇಆಫ್‌ಗಳನ್ನು ತಲುಪಿದ್ದರೂ ಇದುವರೆಗೆ ಪ್ರಶಸ್ತಿಯನ್ನು ಗೆದ್ದಿಲ್ಲ.
ಯಾಮಿ ಗೌತಮ್ (ಎಸ್‌ಆರ್‌ಹೆಚ್): ಬಾಲಿವುಡ್‌ನ ಮೋಹಕ ನಟಿಯರಲ್ಲಿ ಒಬ್ಬರಾದ ಯಾಮಿ ಗೌತಮ್ ಕೂಡ ಟೂರ್ನಿಯೊಂದಿಗೆ ಸಂಬಂಧ ಹೊಂದಿದ್ದಾರೆ ಇದು 2013 ರ ಆವೃತ್ತಿಯ ಸಮಯದಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ತಂಡದ ಜೊತೆ ಕಾಣಿಸಿಕೊಂಡಾಗ ಅಭಿಮಾನಿಗಳು ಖುಷಿ ಪಟ್ಟಿದ್ದರು. ಆದರೆ ಹೆಚ್ಚು ಕಾಲ ಈ ನಂಟು ಉಳಿಯಲಿಲ್ಲ.

Latest Videos

click me!