RCB ವಿರುದ್ಧದ ಪಂದ್ಯಕ್ಕೂ ಮುನ್ನ ಡೆಲ್ಲಿಗೆ ಅತಿದೊಡ್ಡ ಶಾಕ್; ಅಮಿತ್ ಮಿಶ್ರಾ ಟೂರ್ನಿಯಿಂದಲೇ ಔಟ್..!

First Published Oct 5, 2020, 5:39 PM IST

ದುಬೈ: ಚೊಚ್ಚಲ ಐಪಿಎಲ್ ಟ್ರೋಫಿ ಮೇಲೆ ಕಣ್ಣಿಟ್ಟಿರುವ ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಪ್ರಸಕ್ತ ಆವೃತ್ತಿಯ ಐಪಿಎಲ್‌ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನ ತೋರುತ್ತಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಕಾದಾಡಲು ರೆಡಿಯಾಗಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಇದೀಗ ಅತಿದೊಡ್ಡ ಶಾಕ್ ಎದುರಾಗಿದೆ. ತಂಡದ ಅತ್ಯಂತ ಅನುಭವಿ ಆಟಗಾರ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ. ಯಾರು ಆ ಆಟಗಾರ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಶ್ರೇಯಸ್ ಅಯ್ಯರ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಇದುವರೆಗೂ(ಅ.05ಕ್ಕೂ ಮುನ್ನ) 4 ಪಂದ್ಯಗಳನ್ನಾಡಿದ್ದು, 3 ಪಂದ್ಯಗಳನ್ನು ಗೆದ್ದು ಕೇವಲ ಒಮ್ಮೆ ಮಾತ್ರ ಸೋಲಿನ ಕಹಿಯುಂಡಿದೆ.
undefined
ಪ್ರಸ್ತುತ 6 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು, ಪ್ಲೇ ಆಫ್ ಹಂತ ಪ್ರವೇಶಿಸಬಲ್ಲ ನೆಚ್ಚಿನ ತಂಡಗಳಲ್ಲಿ ಒಂದು ಎನಿಸಿದೆ.
undefined
ಬ್ಯಾಟಿಂಗ್, ಬೌಲಿಂಗ್ ಹಾಗೂ ಆಲ್ರೌಂಡರ್ ವಿಭಾಗದಲ್ಲಿ ಸಾಕಷ್ಟು ಸಮತೋಲಿತ ತಂಡವಾಗಿ ಗುರುತಿಸಿಕೊಂಡಿರುವ ಡೆಲ್ಲಿಗೆ ಇದೀಗ ಒಂದು ಶಾಕ್ ಎದುರಾಗಿದೆ.
undefined
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಾಗಲೇ ತಂಡದ ಸ್ಟಾರ್ ಆಟಗಾರ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
undefined
ಹೌದು, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅತ್ಯಂತ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಉಂಗುರ ಬೆರಳಿನ ಗಾಯಕ್ಕೆ ತುತ್ತಾಗಿದ್ದು, ಇದೀಗ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಿಂದ ಹೊರಬಿದ್ದಿದ್ದಾರೆ.
undefined
ಕೋಲ್ಕತ ನೈಟ್‌ ರೈಡರ್ಸ್ ವಿರುದ್ಧ ಶಾರ್ಜಾದಲ್ಲಿ ನಡೆದ ಪಂದ್ಯದ ವೇಳೆ ಲೆಗ್‌ ಸ್ಪಿನ್ನರ್ ಅಮಿತ್ ಮಿಶ್ರಾ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು.
undefined
ಅಮಿತ್ ಮಿಶ್ರಾ ತಾವೆಸೆದ ಮೊದಲ ಓವರ್‌ನಲ್ಲೇ ನಿತಿಶ್ ರಾಣಾ ಬಲವಾಗಿ ಬಾರಿಸಿದ ಕ್ಯಾಚನ್ನು ಹಿಡಿಯುವ ಯತ್ನದಲ್ಲಿ ಕೈಬೆರಳಿನ ಗಾಯಕ್ಕೆ ತುತ್ತಾಗಿದ್ದರು.
undefined
ಇದಾದ ಬಳಿಕ ತೀವ್ರ ನೋವಿಗೆ ತುತ್ತಾಗಿದ್ದರೂ ಸಹ ಮತ್ತೊಂದು ಓವರ್ ಬೌಲಿಂಗ್ ಮಾಡಿ ಶುಭ್‌ಮನ್ ಗಿಲ್ ಅವರ ವಿಕೆಟ್‌ ಪಡೆಯುವಲ್ಲಿ ಮಿಶ್ರಾ ಯಶಸ್ವಿಯಾಗಿದ್ದರು
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಅಮಿತ್ ಮಿಶ್ರಾ 3 ಪಂದ್ಯಗಳನ್ನಾಡಿದ್ದು, 3 ವಿಕೆಟ್ ಕಬಳಿಸಿದ್ದರು.
undefined
37 ವರ್ಷದ ಅಮಿತ್ ಮಿಶ್ರಾ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಸ್ಪಿನ್ನರ್ ಆಗಿ ಗುರುತಿಸಿಕೊಂಡಿದ್ದರು. 150 ಪಂದ್ಯಗಳನ್ನಾಡಿ 160 ವಿಕೆಟ್ ಕಬಳಿಸುವ ಮೂಲಕ ಲಸಿತ್ ಮಾಲಿಂಗ(170) ಬಳಿಕ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿದ್ದರು.
undefined
ಇದೀಗ ಅನುಭವಿ ಸ್ಪಿನ್ನರ್ ಅಮಿತ್ ಮಿಶ್ರಾ ಅನುಪಸ್ಥಿತಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಾಡುವ ಸಾಧ್ಯತೆಯಿದೆ.
undefined
ಮಿಶ್ರಾ ಅನುಪಸ್ಥಿತಿಯಲ್ಲಿ ಅಕ್ಷರ್ ಪಟೇಲ್-ಅಶ್ವಿನ್ ಜತೆಗೂಡಿ ಡೆಲ್ಲಿ ಕ್ಯಾಪಿಟಲ್ಸ್ ಪರ ಸ್ಪಿನ್ ಜಾಲ ಹೆಣೆಯಲಿದ್ದಾರೆ.
undefined
click me!