14ನೇ ಐಪಿಎಲ್‌ಗೂ ಮುನ್ನ ಆರ್‌ಸಿಬಿಯಿಂದ ಈ 5 ಆಟಗಾರರಿಗೆ ಗೇಟ್‌ಪಾಸ್..!

First Published | Nov 13, 2020, 2:45 PM IST

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 13 ಆವೃತ್ತಿಯಿಂದಲೂ ಐಪಿಎಲ್ ಟ್ರೋಫಿ ಕನ್ನಡಿಯೊಳಗಿನ ಗಂಟು ಎನ್ನುವಂತೆ ಬಾಸವಾಗುತ್ತಿದೆ. ದುಬೈನಲ್ಲಾದರೂ ವಿರಾಟ್‌ ಪಡೆ ಕಪ್‌ ಗೆಲ್ಲಬಹುದು ಎನ್ನುವ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ. 
ಬರೋಬ್ಬರಿ 3 ವರ್ಷಗಳ ಬಳಿಕ ಪ್ಲೇ ಆಫ್‌ ಪ್ರವೇಶಿಸಿದ್ದ ಆರ್‌ಸಿಬಿ ತಂಡ ಮೊದಲ ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು ಸೋತು ಟೂರ್ನಿಯಿಂದ ಹೊರಬಿದ್ದು ನಿರಾಸೆ ಅನುಭವಿಸಿದೆ. ಇನ್ನು 14ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭಕ್ಕೆ ಇನ್ನು ಕೆಲವು ತಿಂಗಳುಗಳು ಬಾಕಿ ಇವೆ. ಭಾರತದಲ್ಲೇ ನಡೆಯಲಿರುವ 14ನೇ ಆವೃತ್ತಿಯ ಐಪಿಎಲ್ ಟೂರ್ನಿಗೂ ಬೆಂಗಳೂರು ಮೂಲದ ಫ್ರಾಂಚೈಸಿ ಈ 5 ಆಟಗಾರರಿಗೆ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ. 

1. ಉಮೇಶ್ ಯಾದವ್: ವೇಗದ ಬೌಲರ್
undefined
ಆರ್‌ಸಿಬಿ ವೇಗಿ ಉಮೇಶ್ ಯಾದವ್ ಕಳೆದ ಎರಡು ಆವೃತ್ತಿಗಳಲ್ಲೂ ನಿರೀಕ್ಷಿತ ಪ್ರದರ್ಶನ ತೋರಲು ವಿಫಲರಾಗಿದ್ದಾರೆ. ತಮ್ಮ ಬೌಲಿಂಗ್‌ ಲಯ ಕಳೆದುಕೊಂಡಿರುವ ಉಮೇಶ್ ಯಾದವ್‌ ಬೌಲಿಂಗ್‌ನಲ್ಲಿ ಸಾಕಷ್ಟು ದುಬಾರಿಯಾಗುತ್ತಿದ್ದಾರೆ.
undefined

Latest Videos


ಹೈದರಾಬಾದ್ ಎದುರು 4 ಓವರ್‌ಗೆ 48 ಹಾಗೂ ಪಂಜಾಬ್ ಎದುರು 3 ಓವರ್‌ಗೆ 35 ರನ್ ನೀಡಿ ಬೌಲಿಂಗ್‌ನಲ್ಲಿ ದುಬಾರಿಯಾಗಿದ್ದು, ಆ ಬಳಿಕ ಉಮೇಶ್‌ಗೆ ತಂಡದಲ್ಲಿ ಸ್ಥಾನವೇ ಸಿಗಲಿಲ್ಲ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಉಮೇಶ್ ಆರ್‌ಸಿಬಿ ಪರ ಆಡೋದು ಡೌಟ್
undefined
2. ಡೇಲ್ ಸ್ಟೇನ್: ವೇಗದ ಬೌಲರ್
undefined
ಸ್ಪೀಡ್‌ ಗನ್ ಡೇಲ್ ಸ್ಟೇನ್ 2020ನೇ ಆವೃತ್ತಿಯ ಹರಾಜಿನಲ್ಲಿ ಕೊನೆಯ ಕ್ಷಣದಲ್ಲಿ ತಂಡ ಕೂಡಿಕೊಂಡಿದ್ದರು. ಆದರೆ ಅನುಭವಿ ವೇಗಿ ತಂಡದ ನಿರೀಕ್ಷೆ ಉಳಿಸಿಕೊಳ್ಳಲು ಮತ್ತೆ ವಿಫಲರಾದರು.
undefined
ಸ್ಟೇನ್ ಪಂಜಾಬ್ ವಿರುದ್ಧ 4 ಓವರ್ ಬೌಲಿಂಗ್‌ ಮಾಡಿ ಕೇವಲ 1 ವಿಕೆಟ್ ಪಡೆದು 57 ರನ್ ಬಿಟ್ಟುಕೊಟ್ಟಿದ್ದರು. ಇನ್ನು ಹೈದರಾಬಾದ್ ವಿರುದ್ಧ ಸ್ಟೇನ್ 9ರ ಎಕನಮಿಯಲ್ಲಿ ರನ್ ಬಿಟ್ಟುಕೊಟ್ಟಿದ್ದರು. ಹೀಗಾಗಿ ಸ್ಟೇನ್‌ಗೆ ಈ ಸಲ ಗೇಟ್ ಪಾಸ್ ಸಿಗೋದು ಬಹುತೇಕ ಗ್ಯಾರಂಟಿ
undefined
3. ಪಾರ್ಥಿವ್ ಪಟೇಲ್: ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್
undefined
ಎಡಗೈ ವಿಕೆಟ್‌ ಕೀಪರ್ ಬ್ಯಾಟ್ಸ್‌ಮನ್ ಪಾರ್ಥಿವ್ ಪಟೇಲ್ ಪಟೇಲ್ 12ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ವಿಕೆಟ್ ಕೀಪಿಂಗ್ ಹಾಗೂ ಆರಂಭಿಕ ಬ್ಯಾಟ್ಸ್‌ಮನ್‌ ಆಗಿ ಕೆಲವು ಸ್ಮರಣೀಯ ಪ್ರದರ್ಶನ ತೋರಿದ್ದರು.
undefined
ಆದರೆ 13ನೇ ಆವೃತ್ತಿಯ ಟೂರ್ನಿಯಲ್ಲಿ ಎಬಿ ಡಿವಿಲಿಯರ್ಸ್ ವಿಕೆಟ್‌ ಕೀಪಿಂಗ್ ಪಾತ್ರವನ್ನು ನಿಭಾಯಿಸಿದ್ದರಿಂದ, ದೇವದತ್ ಪಡಿಕ್ಕಲ್ ಆರಂಭಿಕನಾಗಿ ಯಶಸ್ಸು ಗಳಿಸಿದ್ದರಿಂದ ಪಟೇಲ್‌ಗೆ ಈ ಆವೃತ್ತಿಯಲ್ಲಿ ಒಂದೇ ಒಂದು ಪಂದ್ಯವನ್ನಾಡಲು ಅವಕಾಶ ಸಿಗಲಿಲ್ಲ. ಹೀಗಾಗಿ 2021ನೇ ಆವೃತ್ತಿಗೂ ಮುನ್ನ ಪಟೇಲ್‌ ಅವರನ್ನು ಬೆಂಗಳೂರು ಫ್ರಾಂಚೈಸಿ ಕೈಬಿಡುವ ಸಾಧ್ಯತೆಯಿದೆ.
undefined
4. ಪವನ್ ನೇಗಿ: ಆಲ್ರೌಂಡರ್
undefined
ಯುವ ಆಟಗಾರ ಪವನ್ ನೇಗಿ ಈ ಹಿಂದಿನ ಹರಾಜಿಗೂ ಮುನ್ನ ಆರ್‌ಸಿಬಿ ಫ್ರಾಂಚೈಸಿ ರೀಟೈನ್ ಮಾಡಿಕೊಂಡಿತ್ತು. ಆದರೆ ನೇಗಿಯನ್ನು ತಂಡದಲ್ಲಿ ಉಳಿಸಿಕೊಂಡರೂ 2020ನೇ ಸಾಲಿನ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದಲ್ಲಿ ಒಂದೇ ಒಂದು ಅವಕಾಶ ಸಿಗಲಿಲ್ಲ.
undefined
13ನೇ ಆವೃತ್ತಿಯ ಐಪಿಎಲ್‌ನಲ್ಲಿ ಕೆಲ ಪಂದ್ಯಗಳಲ್ಲಿ ಸಬ್‌ಸ್ಟಿಟ್ಯೂಟ್‌ ಫೀಲ್ಡರ್‌ ಆಗಿ ಕಾಣಿಸಿಕೊಂಡಿದ್ದು ಬಿಟ್ಟರೆ, ನೇಗಿ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳಲು ವಿಫಲರಾದರು. ಹೀಗಾಗಿ ನೇಗಿಗೆ ಈ ಬಾರಿ ಗೇಟ್‌ಪಾಸ್ ಸಿಗುವ ಸಾಧ್ಯತೆಯಿದೆ.
undefined
5. ಗುರುಕೀರತ್ ಮನ್: ಬ್ಯಾಟ್ಸ್‌ಮನ್
undefined
ಬಲಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಗುರುಕೀರತ್ ಮನ್‌ಗೆ ತಮ್ಮ ಸಾಮರ್ಥ್ಯ ಸಾಭೀತು ಮಾಡಲು ಈ ಸಲ ಸರಿಯಾದ ಅವಕಾಶವೇ ಸಿಗಲಿಲ್ಲ. ಸಿಕ್ಕ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಮನ್ ವಿಫಲರಾದರು.
undefined
ಗುರುಕೀರತ್ ಮನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರನ್‌ ವೇಗಕ್ಕೆ ಚುರುಕುಮುಟ್ಟಿಸಬೇಕಾದ ಸಂದರ್ಭದಲ್ಲಿ 24 ಎಸೆತಗಳನ್ನು ಎದುರಿಸಿ ಕೇವಲ 15 ರನ್ ಬಾರಿಸಿದ್ದರು. ಇನ್ನು ಟೂರ್ನಿಯಲ್ಲಿ ಮನ್‌ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್ ನೂರಕ್ಕಿಂತ ಕಡಿಮೆಯಿದ್ದು, ಬಹುತೇಕ ಗುರುಕೀರತ್‌ಗೂ ಆರ್‌ಸಿಬಿ ಗೇಟ್‌ಪಾಸ್ ನೀಡುವ ಸಾಧ್ಯತೆಯಿದೆ.
undefined
click me!