ಕೊಹ್ಲಿಯನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಆದ್ರೆ ಒಂದು ಕಂಡೀಷನ್ ಎಂದ ರಾಜಸ್ಥಾನ ರಾಯಲ್ಸ್..!

Suvarna News   | Asianet News
Published : Aug 10, 2020, 01:28 PM IST

ಬಹುನಿರೀಕ್ಷಿತ 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭವಾಗಲು ದಿನಗಣನೆ ಆರಂಭವಾಗಿದೆ. ಕೊರೋನಾ ಅಬ್ಬರದ ನಡುವೆಯೂ ಭಾರತೀಯ ಚುಟುಕು ಕ್ರಿಕೆಟ್ ಹಬ್ಬವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಐಪಿಎಲ್ ಜ್ವರ ನಿಧಾನವಾಗಿ ಕಾವೇರುತ್ತಿದ್ದಂತೆಯೇ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳ ನಡುವೆ ಫ್ಯಾನ್ ವಾರ್ ಶುರುವಾಗಿದೆ. ಅಭಿಮಾನಿಯೊಬ್ಬ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಜೆರ್ಸಿ ತೊಟ್ಟಂತೆ ಫೋಟೋ ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾನೆ. ಇದನ್ನು ಗಮನಿಸಿದ ರಾಜಸ್ಥಾನ ರಾಯಲ್ಸ್ ಒಂದು ವಿಚಿತ್ರ ಕಂಡೀಷನ್ ಪೂರೈಸಿದರೆ ವಿರಾಟ್ ಕೊಹ್ಲಿಯನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳುವುದಾಗಿ ತಿಳಿಸಿದೆ. ಏನದು ವಿಚಿತ್ರ ಷರತ್ತು..? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್..  

PREV
114
ಕೊಹ್ಲಿಯನ್ನು ನಮ್ಮ ತಂಡಕ್ಕೆ ಸೇರಿಸಿಕೊಳ್ಳುತ್ತೇವೆ ಆದ್ರೆ ಒಂದು ಕಂಡೀಷನ್ ಎಂದ ರಾಜಸ್ಥಾನ ರಾಯಲ್ಸ್..!

13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯು 19ರಿಂದ ನವೆಂಬರ್ 10ರವರೆಗೆ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದೆ.

214

ಕಳೆದ 12 ಆವೃತ್ತಿಗಳಲ್ಲೂ ಒಂದೇ ತಂಡದ ಪರ ಆಡಿದ ಏಕೈಕ ಕ್ರಿಕೆಟಿಗ ಎನ್ನುವ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ.

314

2008ರಿಂದ ಹಿಡಿದು ಇಲ್ಲಿಯವರೆಗೂ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದಾರೆ.

414

2013ರಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ನಾಯಕನಾಗಿಯು ಆಯ್ಕೆಯಾದರು. ಆದರೆ ವಿರಾಟ್ ಪಡೆಗೆ ಇದುವರೆಗೂ ಕಪ್ ಗೆಲ್ಲಲು ಸಾಧ್ಯವಾಗಿಲ್ಲ

514

ಬ್ಯಾಟಿಂಗ್‌ನಲ್ಲಿ ಅಸಾಧಾರಣ ಪ್ರದರ್ಶನ ತೋರುವ ಕೊಹ್ಲಿ, ಐಪಿಎಲ್‌ನಲ್ಲಿ ನಾಯಕನಾಗಿ ಸ್ವಲ್ಪ ಹಿಂದೆ ಬಿದ್ದಿದ್ದಾರೆ.

614

ಇದೀಗ ರಾಜಸ್ಥಾನ ರಾಯಲ್ಸ್ ತಂಡದ ಕಂಡೀಷನ್ ವಿಚಾರಕ್ಕೆ ಬರೋಣ.

714

ರಾಜಸ್ಥಾನ ರಾಯಲ್ಸ್ ಅಭಿಮಾನಿಯೊಬ್ಬ ಕೊಹ್ಲಿ RR ಜೆರ್ಸಿ ತೊಟ್ಟಂತೆ ಫೋಟೋ ಎಡಿಟ್ ಮಾಡಿ ರಾಯಲ್ಸ್ ವೆಲ್‌ಕಮ್ಸ್‌ ದ ಕಿಂಗ್ ಎಂದು ಟ್ವೀಟ್ ಮಾಡಿದ್ದರು.

814

ಇದನ್ನು ಗಮನಿಸಿದ ರಾಜಸ್ಥಾನ ರಾಯಲ್ಸ್ ಫ್ರಾಂಚೈಸಿ ವಿಚಿತ್ರ ಷರತ್ತೊಂದನ್ನು ಮುಂದಿಟ್ಟಿದೆ.

914

ಮಿಸ್ಟರ್ ನ್ಯಾಗ್ಸ್ ಅವರನ್ನೂ ಕರೆದುಕೊಂಡು ಬಂದರೆ ಮಾತ್ರ ಕೊಹ್ಲಿಯನ್ನು ಸೇರಿಸಿಕೊಳ್ಳುತ್ತೇವೆ ಎಂದು ಕಾಲೆಳೆದಿದೆ.

1014

ಮಿಸ್ಟರ್ ನ್ಯಾಗ್ಸ್ RCB ಇನ್‌ಸೈಡರ್ ಶೋಗಳ ಮೂಲಕ ಅಭಿಮಾನಿಗನ್ನು ರಂಜಿಸುತ್ತಲೇ ಬಂದಿದ್ದರು.

1114

2019ರಲ್ಲಿ ನಡೆದ ಆಟಗಾರರ ಹರಾಜಿಗೂ ಮುನ್ನ ಎಬಿಡಿ ಹಾಗೂ ಕೊಹ್ಲಿಯನ್ನು ನಮಗೆ ಕೊಡುತ್ತೀರಾ ಎಂದು ರಾಜಸ್ಥಾನ ರಾಯಲ್ಸ್ ತಂಡ ಟ್ವೀಟ್ ಮಾಡಿತ್ತು.

1214

ಇದಕ್ಕೆ ಬೆಂಗಳೂರು ಫ್ರಾಂಚೈಸಿ ಬೇಕಿದ್ದರೆ ಮಿಸ್ಟರ್ ನ್ಯಾಗ್ಸ್ ಅವರನ್ನು ತೆಗೆದಕೊಳ್ಳಿ ಎಂದು ತಿರುಗೇಟು ನೀಡಿತ್ತು.

1314

ಇದೀಗ ರಾಜಸ್ಥಾನ ಮೂಲದ ಫ್ರಾಂಚೈಸಿ ಕೌಂಟರ್ ಕೊಡುವ ರೀತಿಯಲ್ಲಿ ನ್ಯಾಗ್ಸ್ ಜತೆ ಕೊಹ್ಲಿ ಬಂದ್ರೆ ಮಾತ್ರ ಎಂದು ಹೇಳಿದೆ.

1414

ಇದಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಯಾವ ರೀತಿ ತಿರುಗೇಟು ನೀಡುತ್ತೆ ಎನ್ನುವುದನ್ನು ಕಾದು ನೋಡಬೇಕಿದೆ.

click me!

Recommended Stories