ಸೂಪರ್ ಓವರ್‌ನಲ್ಲಿ ಇಶನ್ ಕಿಶನ್ ಯಾಕೆ ಬ್ಯಾಟಿಂಗ್ ಮಾಡಲಿಲ್ಲ; ಸೀಕ್ರೇಟ್ ಬಿಚ್ಚಿಟ್ಟ ರೋಹಿತ್ ಶರ್ಮಾ..!
First Published | Sep 29, 2020, 9:50 AM ISTದುಬೈ: ಬಹುಶಃ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಮುಂಬೈ ಇಂಡಿಯನ್ಸ್ ಪಂದ್ಯ ಮುಕ್ತಾಯದ ಬಳಿಕ ಕ್ರಿಕೆಟ್ ಅಭಿಮಾನಿಗಳು ಅಬ್ಬಾ ಎಂತಾ ಮ್ಯಾಚ್ ಗುರು ಎಂದು ಉದ್ಘರಿಸದೇ ಇರುವವರೇ ಇಲ್ಲವೇನೋ. ಆ ಮಟ್ಟಿಗೆ ಅಭಿಮಾನಿಗಳನ್ನು ನಿಲ್ಲಿಸಿತ್ತು ಹೈವೋಲ್ಟೇಜ್ ಪಂದ್ಯ.
ಜಿದ್ದಾಜಿದ್ದಿನಿಂದ ಕೂಡಿದ್ದ ಪಂದ್ಯ ಟೈ ಆಗಿದ್ದರಿಂದ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು. ಸೂಪರ್ ಓವರ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೊನೆಯ ಎಸೆತದಲ್ಲಿ ಗೆಲುವು ದಾಖಲಿಸುವ ಮೂಲಕ ಹಾಲಿ ಚಾಂಪಿಯನ್ ಮೇಲೆ ಪ್ರಾಬಲ್ಯ ಮೆರೆಯಿತು. ಆದರೆ ಇದಕ್ಕೂ ಮುನ್ನ ಸ್ಫೋಟಕ 99 ರನ್ ಸಿಡಿಸಿದ ಇಶನ್ ಕಿಶನ್ ಯಾಕೆ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಬರಲಿಲ್ಲ ಎನ್ನುವ ಪ್ರಶ್ನೆ ಅಭಿಮಾನಿಗಳಲ್ಲಿ ಕಾಡಲಾರಂಭಿಸಿದೆ. ಇದಕ್ಕೆ ನಾಯಕ ರೋಹಿತ್ ಉತ್ತರ ನೀಡಿದ್ದಾರೆ.