ಡೆಲ್ಲಿ ವಿರುದ್ಧ ಹೈದರಾಬಾದ್‌ ತಂಡಕ್ಕೆ ದೊಡ್ಡ ಶಾಕ್‌; ಕಳೆದ ಪಂದ್ಯದ ಹೀರೋ ಟೂರ್ನಿಯಿಂದಲೇ ಔಟ್?

First Published Oct 29, 2020, 12:10 PM IST

ದುಬೈ: 2016ನೇ ಸಾಲಿನ ಐಪಿಎಲ್ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಪ್ಲೇ ಆಪ್‌ ಹಾದಿ ತಂತಿ ಮೇಲಿನ ನಡಿಗೆಯಾಗಿದೆ. ಇದರ ಹೊರತಾಗಿಯೂ ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್ ಎದುರು ಭರ್ಜರಿ ಜಯ ದಾಖಲಿಸಿದ್ದು ಹೈದರಾಬಾದ್ ತಂಡ ಆತ್ಮವಿಶ್ವಾಸ ಮತ್ತಷ್ಟು ಹೆಚ್ಚುವಂತೆ ಮಾಡಿದೆ.
ಇದೆಲ್ಲದರ ನಡುವೆ ಸನ್‌ರೈಸರ್ಸ್ ಹೈದರಾಬಾದ್ ಪಾಲಿಗೆ ಆಘಾತಕಾರಿಯಾದ ಸುದ್ದಿಯೊಂದು ಹೊರಬಿದ್ದಿದ್ದು, ಕಳೆದ ಪಂದ್ಯದ ಮ್ಯಾಚ್ ವಿನ್ನರ್ ಗಾಯಕ್ಕೆ ತುತ್ತಾಗಿದ್ದು, ಇಡೀ ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆಯಿದೆ. ಯಾರು ಆ ಆಟಗಾರ? ಏನಾಯ್ತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಡೇವಿಡ್ ವಾರ್ನರ್ ನೇತೃತ್ವದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪ್ಲೇ ಆಫ್ ಹಂತ ಪ್ರವೇಶಿಸಲು ಸರ್ವರೀತಿಯ ಪ್ರಯತ್ನ ನಡೆಸುತ್ತಿದೆ.
undefined
ಸದ್ಯ 12 ಪಂದ್ಯಗಳನ್ನಾಡಿರುವ ಆರೆಂಜ್ ಆರ್ಮಿ 5 ಗೆಲುವು ಹಾಗೂ 7 ಸೋಲುಗಳೊಂದಿಗೆ 10 ಅಂಕಗಳ ಸಹಿತ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ.
undefined
ಬಲಿಷ್ಠ ಡೆಲ್ಲಿ ವಿರುದ್ಧದ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ ಸನ್‌ರೈಸರ್ಸ್ ಹೈದರಾಬಾದ್ ತಂಡ 88 ರನ್‌ಗಳ ಭರ್ಜರಿ ಜಯ ದಾಖಲಿಸುವ ಮೂಲಕ ತನ್ನ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿತ್ತು.
undefined
ಮೊದಲು ಬ್ಯಾಟಿಂಗ್ ಮಾಡಿದ್ದ ಹೈದರಾಬಾದ್ ನಾಯಕ ವಾರ್ನರ್(66) ಹಾಗೂ ವೃದ್ದಿಮಾನ್ ಸಾಹ(87) ಹಾಗೂ ಮನೀಶ್ ಪಾಂಡೆ(44) ಸಿಡಿಲಬ್ಬರದ ಬ್ಯಾಟಿಂಗ್ ನೆರವಿನಿಂದ ಕೇವಲ 2 ವಿಕೆಟ್ ಕಳೆದುಕೊಂಡು ತಂಡ 219 ರನ್ ಗಳಿಸಿತ್ತು.
undefined
ಇದಕ್ಕುತ್ತರವಾಗಿ ರಶೀದ್ ಖಾನ್ ಮಾರಕ ದಾಳಿಗೆ ತತ್ತರಿಸಿ ಡೆಲ್ಲಿ ಕ್ಯಾಪಿಟಲ್ಸ್ ಕೇವಲ 131 ರನ್‌ಗಳಿಗೆ ಆಲೌಟ್ ಆಗುವ ಮೂಲಕ 88 ಶ್ರೇಯಸ್ ಅಯ್ಯರ್ ಪಡೆ 88 ರನ್‌ಗಳ ಹೀನಾಯ ಸೋಲು ಕಂಡಿತ್ತು.
undefined
ಇದೀಗ ಸನ್‌ ರೈಸರ್ಸ್‌ ಹೈದ್ರಾಬಾದ್‌ ತಂಡದ ಆಟಗಾರ ವೃದ್ಧಿಮಾನ್‌ ಸಾಹ ಸ್ನಾಯು ಸೆಳೆತಕ್ಕೆ ಒಳಗಾಗಿದ್ದು, ಮುಂಬರುವ ಪಂದ್ಯಗಳಲ್ಲಿ ಆಡುವುದು ಅನುಮಾನ ಎನಿಸಿದೆ.
undefined
ಮಂಗಳವಾರ ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧದ ಪಂದ್ಯದಲ್ಲಿ ಸಾಹ ಕೇವಲ 45 ಎಸೆತಗಳಲ್ಲಿ 12 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 87 ರನ್‌ ಚಚ್ಚುವ ಮೂಲಕ ಆಕರ್ಷಕ ಬ್ಯಾಟಿಂಗ್‌ನಿಂದ ಗಮನಸೆಳೆದಿದ್ದರು.
undefined
ವೃದ್ದಿಮಾನ್ ಸಾಹ ಗಾಯಗೊಂಡಿದ್ದರಿಂದ ಕ್ಷೇತ್ರ ರಕ್ಷಣೆ ವೇಳೆ ಶ್ರೀವತ್ಸ್ ಗೋಸ್ವಾಮಿ ಸನ್‌ರೈಸರ್ಸ್ ಹೈದರಾಬಾದ್ ಪರ ವಿಕೆಟ್‌ ಕೀಪರ್‌ ಆಗಿ ಕಾರ‍್ಯನಿರ್ವಹಿಸಿದ್ದರು.
undefined
ಆಸ್ಪ್ರೇಲಿಯಾ ಪ್ರವಾಸದ ಟೆಸ್ಟ್‌ ಸರಣಿಗೆ ಭಾರತ ತಂಡಕ್ಕೆ ಆಯ್ಕೆಯಾಗಿರುವ ಸಾಹರನ್ನು ಬಿಸಿಸಿಐ ವೈದ್ಯಕೀಯ ತಂಡ ಪರೀಕ್ಷಿಸಲಿದೆ.
undefined
ಸಾಹ ಅವರ ಗಾಯದ ಪರಿಣಾಮ ತಿಳಿದು ಮುಂದಿನ ಚಿಕಿತ್ಸೆಗೆ ವೈದ್ಯರು ಸಲಹೆ ನೀಡಲಿದ್ದಾರೆ ಎಂದು ಹೈದ್ರಾಬಾದ್‌ ಆಡಳಿತ ಹೇಳಿದೆ.
undefined
click me!