ಚೆನ್ನೈ ವಿರುದ್ಧ ಸೋತರೂ ಕೆಕೆಆರ್‌ಗೆ ಪ್ಲೇ ಆಫ್‌ಗೇರುವ ಅವಕಾಶವಿದೆಯಾ?

First Published Oct 29, 2020, 5:34 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಆರಂಭವಾಗಿ ಇದುವರೆಗೂ 48 ಪಂದ್ಯಗಳು ಯಶಸ್ವಿಯಾಗಿ ಮುಕ್ತಾಯವಾಗಿದ್ದರೂ ಸಹ, ಯಾವೊಂದು ತಂಡವೂ ಅಧಿಕೃತವಾಗಿ ತಮ್ಮ ಪ್ಲೇ ಆಫ್‌ ಸ್ಥಾನವನ್ನು ಖಚಿತಪಡಿಸಿಕೊಂಡಿಲ್ಲ. 
ಇನ್ನು 2 ಬಾರಿಯ ಐಪಿಎಲ್ ಚಾಂಪಿಯನ್ ಕೋಲ್ಕತ ನೈಟ್‌ ರೈಡರ್ಸ್ ಟೂರ್ನಿ ಮಧ್ಯದಲ್ಲಿ ನಾಯಕನೇ ಬದಲಾದರೂ ತಂಡದ ಲಕ್ ಮಾತ್ರ ಬದಲಾಗಿಲ್ಲ. ಇದೀಗ ಗುರುವಾರ(ಅ.29) ಇಯಾನ್ ಮಾರ್ಗನ್ ನೇತೃತ್ವದ ಕೆಕೆಆರ್ ತಂಡ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಈ ಪಂದ್ಯದ ಫಲಿತಾಂಶ ಕೆಕೆಆರ್ ಪ್ಲೇ ಆಫ್‌ ದಾರಿಯ ದಿಕ್ಸೂಚಿಯಾಗಲಿದೆ. ಕೆಕೆಆರ್ ಪ್ಲೇ ಆಫ್‌ಗೇರಲು ಏನು ಮಾಡಬೇಕು ಎನ್ನುವುದರ ವಿಶ್ಲೇಷಣೆ ಇಲ್ಲಿದೆ ನೋಡಿ.
 

ಕೋಲ್ಕತ ನೈಟ್‌ ರೈಡರ್ಸ್ ಪ್ಲೇ ಆಫ್‌ಗೇರುವ ಅವಕಾಶ ಇನ್ನೂ ತಂಡದ ಕೈಯಲ್ಲೇ ಇದೆ. ಹೀಗಾಗಿ ಕೆಕೆಆರ್ ಉತ್ತಮ ಪ್ರದರ್ಶನ ತೋರಿದರೆ ಬೇರೆ ತಂಡದ ಫಲಿತಾಂಶದ ಬಗ್ಗೆ ಹೆಚ್ಚು ಚಿಂತಿಸುವ ಅಗತ್ಯವಿಲ್ಲ.
undefined
ಕೋಲ್ಕತ ನೈಟ್‌ ರೈಡರ್ಸ್ ತಂಡ ಸದ್ಯ 12 ಪಂದ್ಯಗಳನ್ನಾಡಿದ್ದು, 6 ಗೆಲುವು ಹಾಗೂ 6 ಸೋಲುಗಳೊಂದಿಗೆ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದೆ.
undefined

Latest Videos


ಇನ್ನುಳಿದ ಕೆಕೆಆರ್ ಪಾಲಿನ 2 ಪಂದ್ಯಗಳನ್ನು ಒಳ್ಳೆಯ ಅಂತರದಲ್ಲಿ ಜಯಿಸಿದರೆ ಮಾರ್ಗನ್ ಪಡೆ 16 ಅಂಕಗಳೊಂದಿಗೆ ಪ್ಲೇ ಆಫ್‌ ಪ್ರವೇಶಕ್ಕೆ ಅವಕಾಶಗಿಟ್ಟಿಸಿಕೊಳ್ಳಬಹುದಾಗಿದೆ.
undefined
ಕಿಂಗ್ಸ್ ಇಲೆವನ್ ಪಂಜಾಬ್ ಹಾಗೂ ಕೋಲ್ಕತ ನೈಟ್‌ ರೈಡರ್ಸ್ ತಂಡಗಳೆರಡು ತಲಾ 12 ಅಂಕಗಳನ್ನು ಹೊಂದಿದ್ದು, ಮುಂದಿನ ಪಂದ್ಯದಲ್ಲಿ ಈ 2 ತಂಡಗಳು ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲಿವೆ.
undefined
ಒಂದು ವೇಳೆ ಪಂಜಾಬ್ ಹಾಗೂ ಕೋಲ್ಕತ ತಂಡಗಳು ಮುಂದಿನ 2 ಪಂದ್ಯಗಳನ್ನು ಜಯಿಸಿದರೆ ತಲಾ 16 ಅಂಕಗಳಿಸಲಿವೆ. ಈ ಸಂದರ್ಭದಲ್ಲಿ ಕೆಕೆಆರ್ ತನ್ನ ರನ್ ರೇಟ್ ಉತ್ತಮ ಪಡಿಸಿಕೊಂಡರೆ ಕನಿಷ್ಠವೆಂದರೂ ನಾಲ್ಕನೇ ತಂಡವಾಗಿ ಪ್ಲೇ ಆಫ್‌ಗೇರಬಹುದು.
undefined
ಇಯಾನ್ ಮಾರ್ಗನ್ ಪಡೆ ದುಬೈನಲ್ಲಿ ನಡೆಯಲಿರುವ ಚೆನ್ನೈ ಸೂಪರ್ ಕಿಂಗ್ಸ್‌ ವಿರುದ್ಧ ಭರ್ಜರಿ ಜಯ ಸಾಧಿಸಬೇಕಿದೆ, ಒಂದು ವೇಳೆ ಸಿಎಸ್‌ಕೆ ಎದುರು ಮಾರ್ಗನ್ ಪಡೆ ಮುಗ್ಗರಿಸಿದರೂ ಕೆಕೆಆರ್ ತಂಡ ಸಂಪೂರ್ಣ ಪ್ಲೇ ಆಫ್‌ ರೇಸಿನಿಂದ ಹೊರಬೀಳುವುದಿಲ್ಲ.
undefined
ಕಿಂಗ್ಸ್ ಇಲೆವನ್ ಪಂಜಾಬ್ ಪಂಜಾಬ್ ತಂಡ ಇನ್ನುಳಿದ 2 ಪಂದ್ಯಗಳ ಪೈಕಿ ಒಂದರಲ್ಲಿ ಸೋಲಬೇಕು, ಇದೇ ವೇಳೆ ಕೋಲ್ಕತ ನೈಟ್‌ ರೈಡರ್ಸ್ ತಂಡ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದರೆ 14 ಅಂಕಗಳೊಂದಿಗೆ ನೆಟ್‌ ರನ್‌ ರೇಟ್ ಆಧಾರದಲ್ಲಿ ಪ್ಲೆ ಆಫ್‌ಗೇರಬಹುದು.
undefined
ಕೆಕೆಆರ್ ಹಾಗೂ ಪಂಜಾಬ್ ತಂಡಗಳು ತಮ್ಮ ಮುಂದಿನ ಎರಡು ಪಂದ್ಯಗಳಲ್ಲಿ ಸಿಎಸ್‌ಕೆ ಹಾಗೂ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸುತ್ತಿದ್ದರೂ, ಪಂಜಾಬ್ ತನ್ನ ಅಭಿಯಾನದ 2 ಪಂದ್ಯಗಳು ಮುಕ್ತಾಯದ ಬಳಿಕ ಮಾರ್ಗನ್ ಪಡೆ ರಾಜಸ್ಥಾನ ವಿರುದ್ದ ಪಂದ್ಯವನ್ನಾಡಲಿದ್ದು, ಸಾಕಷ್ಟು ಲೆಕ್ಕಾಚಾರದಲ್ಲಿ ಕಣಕ್ಕಿಳಿಯಲು ಕೆಕೆಆರ್‌ಗೆ ಅವಕಾಶ ಸಿಗಲಿದೆ.
undefined
click me!