ಸೋಷಿಯಲ್ ಮೀಡಿಯಾದ ಕಾವು ಹೆಚ್ಚಿಸಿದ ಹಾರ್ದಿಕ್ ಪತ್ನಿ ನಟಾಸಾ ಲುಕ್‌!

First Published | Nov 6, 2020, 2:22 PM IST

ಹಾರ್ದಿಕ್ ಪಾಂಡ್ಯ ಪ್ರಸ್ತುತ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನೆಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಸೆರ್ಬಿಯಾ ಮೂಲದ ಬಾಲಿವುಡ್ ನಟಿ ನಟಾಸಾ ಸ್ಟಾಂಕೋವಿಕ್ ಅವರನ್ನು ಮದುವೆಯಾಗಿದ್ದು, ಮಗ ಅಗಸ್ತ್ಯ ಈ ವರ್ಷದ ಜುಲೈನಲ್ಲಿ ಜನಿಸಿದ್ದಾನೆ. ಇತ್ತೀಚೆಗೆ ನಟಾಸಾ ಶೇರ್‌ ಮಾಡಿಕೊಂಡಿರುವ ಬ್ಲ್ಯಾಕ್‌ ಡ್ರೆಸ್‌ ಪೋಟೋ ಸಖತ್‌ ವೈರಲ್‌ ಆಗಿದೆ. ಕ್ರಿಕೆಟಿಗನ ಪತ್ನಿಯ ಈ ಲುಕ್‌ಗೆ ನೆಟ್ಟಿಗರು ಬೋಲ್ಡ್‌ ಆಗಿದ್ದಾರೆ. 
 

ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾದಲ್ಲಿ ತಮ್ಮ ಬ್ಯಾಟಿಂಗ್ ಹಾಗೂ ಬೌಲಿಂಗ್‌ ಸಾಮರ್ಥ್ಯದಿಂದಾಗಿ ಸ್ಥಾನ ಕಂಡುಕೊಂಡಿದ್ದಾರೆ. ತಂಡದ ಟ್ಯಾಲೆಂಟ್ಆಲ್‌ರೌಂಡರ್ ಆಗಿರುವ ಹಾರ್ದಿಕ್‌ ಪರ್ಸನಲ್‌ ಲೈಫ್‌ ಸಹ ಈಗ ಲೈಮ್‌ಲೈಟ್‌ನ್ಲಲಿದೆ. ಇದಕ್ಕೆ ಕಾರಣ ಅವರ ಹಾಟ್‌ ಪತ್ನಿ ನಟಾಸಾ ಸ್ಟಾಂಕೋವಿಕ್.
ನಟಾಸಾ ತನ್ನ ಇತ್ತೀಚಿನಪೋಸ್ಟ್‌ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿದ್ದಾರೆ.ಅವರು ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವೊಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಕಪ್ಪು ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ನಟಾಸಾ 'ಬ್ಲ್ಯಾಕ್‌ ಈಸ್‌ ಬೆಟರ್‌' ಎಂದು ಕ್ಯಾಪ್ಷನ್‌ ನೀಡಿದ್ದಾರೆ.
Tap to resize

ಎರಡೂ ಫೋಟೋಗಳಿಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ. ಅವರ ಹಾಟ್‌ ಲುಕ್‌ ಸಖತ್‌ ವೈರಲ್‌ ಆಗಿದೆ. ಅಭಿಮಾನಿಗಳು ಆಕರ್ಷಕ ಎಮೋಜಿಗಳೊಂದಿಗೆ ಅವರ ಸೌಂದರ್ಯವನ್ನು ಹೋಗಳಿದ್ದಾರೆ.
ತನ್ನ ಮಗ ಅಗಸ್ತ್ಯನ ಜನನದ ನಂತರ, ಮೂರು ತಿಂಗಳಲ್ಲಿ ನಟಾಸಾಮತ್ತೆ ಸ್ಲಿಮ್‌ ಹಾಗೂ ಫಿಟ್‌ ಆಗಿದ್ದಾರೆ.
ಅಕ್ಟೋಬರ್ 30 ರಂದು ಮಗ ಅಗಸ್ತ್ಯನಿಗೆ ಮೂರು ತಿಂಗಳ ತುಂಬಿದ ಸಮಯದಲ್ಲಿ ನಟಾಸಾ, ಫೋಟೋವನ್ನು ಹಂಚಿಕೊಂಡಿದ್ದಾರೆ.
ಅದರಲ್ಲಿ ಮಗನ ಜೊತೆ ಕೇಕ್‌ನೊಂದಿಗೆ ಕಾಣಿಸಿಕೊಂಡಿದ್ದರು. ಆ ಫೋಟೋಗೆ 'We miss you @hardikpandya93 ❤️ 🎂 @thebakersden_ ' ಎಂದು ಬರೆದಿದ್ದರು.
ಒಂದೆರಡು ವರ್ಷಗಳ ಹಿಂದೆ ನಟಾಸಾಳ ಜೊತೆ ಡೇಟ್ ಮಾಡಲು ಪ್ರಾರಂಭಿಸಿದ ಪಾಂಡ್ಯ ಈ ವರ್ಷದ ಜನವರಿಯಲ್ಲಿ ತಮ್ಮ ನಿಶ್ಚಿತಾರ್ಥವನ್ನು ದುಬೈನಲ್ಲಿ ಆನೌನ್ಸ್‌ ಮಾಡಿದ್ದರು.
ಕೆಲವು ತಿಂಗಳುಗಳ ನಂತರ, ಲಾಕ್ಡೌನ್ ಸಮಯದಲ್ಲಿ ದಂಪತಿವಿವಾಹವಾದರು.
ನಟಾಸಾ 2014ರಲ್ಲಿ ಬಿಡುಗಡೆಯಾದ ಸತ್ಯಾಗ್ರಹ ಸಿನಿಮಾದಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಇದುವರೆಗೆ ಏಳು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫ್ಲೆಶ್, ವೆಬ್-ಸೀರಿಸ್‌ ಅವರ ಮುಂದಿನ ಪ್ರಾಜೆಕ್ಟ್‌ ಆಗಿದ್ದು, ಬಿಡುಗಡೆ COVID-19 ಕಾರಣದಿಂದ ವಿಳಂಬವಾಗಿದೆ.

Latest Videos

click me!