ಐಪಿಎಲ್ 2020: ಮುಂಬೈ ವಿವಾದಾತ್ಮಕ ಮಾಜಿ ಕ್ರಿಕೆಟಿಗ ಆರೆಸ್ಟ್..!

First Published Nov 9, 2020, 12:25 PM IST

ಮುಂಬೈ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಭರದಿಂದ ಸಾಗುತ್ತಿದ್ದರೆ, ಮತ್ತೊಂದೆಡೆ ಬೆಟ್ಟಿಂಗ್ ದಂಧೆ ಕೂಡಾ ಸಾಕಷ್ಟು ಸದ್ದು ಮಾಡುತ್ತಿದೆ. ಇದೀಗ ಬೆಟ್ಟಿಂಗ್ ದಂಧೆ ಮಾಡಲು ಮಾಜಿ ಕ್ರಿಕೆಟಿಗರೊಬ್ಬರು ಪೊಲೀಸರ ಅತಿಥಿಯಾಗಿದ್ದಾರೆ.
ಮುಂಬೈ ಪ್ರಥಮ ದರ್ಜೆ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸಿದ್ದ ರಾಬಿನ್ ಮೋರಿಸ್ ಬೆಟ್ಟಿಂಗ್ ದಂಧೆ ನಡೆಸಲು ಹೋಗಿ ಸಿಕ್ಕಿಬಿದ್ದ ಆರೋಪಿಯಾಗಿದ್ದಾರೆ. ಅಷ್ಟಕ್ಕೂ ಯಾರೀತ ರಾಬಿನ್ ಮೋರಿಸ್? ಈತನ ಹಿನ್ನೆಲೆ ಏನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

ಮುಂಬೈ ರಣಜಿ ತಂಡದ ಮಾಜಿ ಕ್ರಿಕೆಟಿಗ ರಾಬಿನ್ ಮೋರಿಸ್ ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸಲು ಹೋಗಿ ವರ್ಸೋವಾ ಪೊಲೀಸರ ಅತಿಥಿಯಾಗಿದ್ದಾರೆ.
undefined
ರಾಬಿನ್ ಮೋರಿಸ್ 1995ರಿಂದ 2007ರ ಅವಧಿಯಲ್ಲಿ 44 ಪ್ರಥಮ ದರ್ಜೆ ಹಾಗೂ 51 ಲಿಸ್ಟ್ ಎ ಪಂದ್ಯಗಳನ್ನು ಆಡಿದ್ದರು.
undefined
ಇದೀಗ ಬೆಟ್ಟಿಂಗ್ ದಂಧೆಯಲ್ಲಿ ಪಾಲ್ಗೊಂಡ ತಪ್ಪಿಗಾಗಿ ರಾಬಿನ್ ಮೋರಿಸ್ ಸೇರಿದಂತೆ ಮತ್ತಿಬ್ಬರು ಆರೋಪಿಗಳನ್ನು ವರ್ಸೋವಾ ಪೊಲೀಸರು ಬಂಧಿಸಿದ್ದಾರೆ.
undefined
ರಾಬಿನ್ ಮೋರಿಸ್ ತಮ್ಮ ನಿವಾಸದಿಂದಲೇ ಬೆಟ್ಟಿಂಗ್ ನಡೆಸುತ್ತಿರುವ ಖಚಿತ ಮಾಹಿತಿ ಮೇರೆಗೆ ವರ್ಸೋವಾ ಪೊಲೀಸರು ದಾಳಿ ನಡೆಸಿ ಮಾಜಿ ಕ್ರಿಕೆಟಿಗನ ಹೆಡೆಮುರಿ ಕಟ್ಟಿದ್ದಾರೆ.
undefined
ಈ ವೇಳೆ ಪೊಲೀಸರು ಮೋರಿಸ್ ಅವರ ಲ್ಯಾಪ್‌ಟಾಪ್ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ. ಸದ್ಯ ರಾಬಿನ್ ಮೋರಿಸ್ ಪೊಲೀಸರ ಕಸ್ಟಡಿಯಲ್ಲಿದ್ದು, ಸೋಮವಾರ(ನ.09) ಮ್ಯಾಜಿಸ್ಟ್ರೇಟ್ ಕೋರ್ಟ್‌ಗೆ ಹಾಜರುಪಡಿಸಲಿದ್ದಾರೆ ಎಂದು ವರದಿಯಾಗಿದೆ.
undefined
ಭ್ರಷ್ಟಾಚಾರದ ಆರೋಪದಲ್ಲಿ ರಾಬಿನ್ ಮೋರಿಸ್ ಹೆಸರು ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ..!
undefined
ಕಳೆದ ವರ್ಷ ಆಂಗ್ಲ ಸುದ್ದಿವಾಹಿನಿ ಅಲ್‌ ಜಜೀರಾ ನಡೆಸಿದ ಸ್ಟಿಂಗ್ ಆಪರೇಷನ್‌ನಲ್ಲಿ ಸ್ಪಾಟ್ ಫಿಕ್ಸಿಂಗ್ ವಿಚಾರವನ್ನು ಕುಟುಕು ಕಾರ್ಯಾಚರಣೆಯಲ್ಲಿ ಬಾಯ್ಬಿಟ್ಟಿದ್ದರು. ಈ ವಿಡಿಯೋದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಹಸನ್ ರಾಜಾ ಕೂಡಾ ಕಾಣಿಸಿಕೊಂಡಿದ್ದರು.
undefined
ಇದೀಗ ಅಶ್ರಫ್ ಅವರು ಚಿಕಿತ್ಸೆಗಾಗಿ ಹಣಕಾಸನ್ನು ಹೊಂದಾಣಿಸಲು ಸಾಕಷ್ಟು ಪರದಾಡುತ್ತಿದ್ದಾರೆ.
undefined
ಕಳೆದ ವರ್ಷ ಲೋನ್ ಏಜೆಂಟ್‌ವೊಬ್ಬರನ್ನು ಕಿಡ್ನಾಪ್ ಮಾಡಿದ ಆರೋಪದಡಿ ರಾಬಿನ್ ಮೋರಿಸ್ ಸೇರಿದಂತೆ ನಾಲ್ವರನ್ನು ಪೊಲೀಸರು ಬಂಧಿಸಿದ್ದರು.
undefined
click me!