ಆರ್‌ಸಿಬಿ ಅಭಿಮಾನಿಗಳ ಕ್ಷಮೆ ಕೇಳಿ ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್..!

Suvarna News   | Asianet News
Published : Nov 08, 2020, 03:43 PM IST

ಅಬುಧಾಬಿ: 13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಲಿಮಿನೇಟರ್‌ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡು ಹೊರಬಿದ್ದಿದೆ. ಕಳೆದ 12 ವರ್ಷಗಳಿಂದ ಕಪ್‌ ಗೆಲ್ಲಲು ವಿಫಲವಾಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸಲ ಕಪ್‌ ಗೆಲ್ಲಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಬ್ಯಾಟ್ಸ್‌ಮನ್‌ಗಳ ದಯಾನೀಯ ವೈಫಲ್ಯದಿಂದಾಗಿ ಪಂದ್ಯ ಕೈಚೆಲ್ಲಿತು. ಇದರ ಬೆನ್ನಲ್ಲೇ ಮಿಸ್ಟರ್ 360 ಖ್ಯಾತಿಯ ಎಬಿ ಡಿವಿಲಿಯರ್ಸ್ ಅಭಿಮಾನಿಗಳಿಗೆ ಹೃದಯಸ್ಪರ್ಷಿ ಸಂದೇಶ ರವಾನಿಸಿದ್ದಾರೆ.  

PREV
19
ಆರ್‌ಸಿಬಿ ಅಭಿಮಾನಿಗಳ ಕ್ಷಮೆ ಕೇಳಿ ಭಾವನಾತ್ಮಕ ಸಂದೇಶ ರವಾನಿಸಿದ ಎಬಿ ಡಿವಿಲಿಯರ್ಸ್..!

ಬರೋಬ್ಬರಿ ಮೂರು ವರ್ಷಗಳ ಬಳಿಕ ಪ್ಲೇ ಆಫ್‌ಗೆ ಲಗ್ಗೆಯಿಟ್ಟಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಲಿಮಿನೇಟರ್ ಪಂದ್ಯದಲ್ಲಿ ಆಘಾತಕಾರಿ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿದೆ.

29

ಅಬುಧಾಬಿಯಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಪಡೆ ಸನ್‌ರೈಸರ್ಸ್ ಹೈದರಾಬಾದ್ ಎದುರು 6 ವಿಕೆಟ್‌ಗಳ ಆಘಾತಕಾರಿ ಸೋಲು ಕಂಡಿದೆ.

39

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಎಬಿ ಡಿವಿಲಿಯರ್ಸ್(56) ಏಕಾಂಗಿ ಹೋರಾಟದ ಹೊರತಾಗಿಯೂ 7 ವಿಕೆಟ್ ಕಳೆದುಕೊಂಡು 131 ರನ್‌ ಗಳಿಸಿತ್ತು.

49

ಇದಕ್ಕುತ್ತರವಾಗಿ ಕೇನ್ ವಿಲಿಯಮ್ಸನ್(50) ಹಾಗೂ ಜೇಸನ್ ಹೋಲ್ಡರ್(24) ಆಕರ್ಷಕ ಜತೆಯಾಟದ ನೆರವಿನಿಂದ ಸನ್‌ರೈಸರ್ಸ್‌ 4 ವಿಕೆಟ್‌ ಕಳೆದುಕೊಂಡು ಇನ್ನೆರಡು ಎಸೆತಗಳು ಬಾಕಿ ಇರುವಂತೆಯೇ ಗೆಲುವಿನ ನಗೆ ಬೀರಿದೆ.

59

ಆರ್‌ಸಿಬಿಯ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಆಗಿ ಗುರುತಿಸಿಕೊಂಡಿರುವ ಎಬಿ ಡಿವಿಲಿಯರ್ಸ್ ಇದೀಗ ಬೆಂಗಳೂರು ಅಭಿಮಾನಿಗಳಿಗೆ ಹೃದಯಸ್ಪರ್ಷಿ ಸಂದೇಶ ರವಾನಿಸಿದ್ದಾರೆ.

69

ಪಂದ್ಯ ಮುಕ್ತಾಯದ ಬಳಿಕ ಡ್ರೆಸ್ಸಿಂಗ್ ರೂಂನಲ್ಲಿ ನಾಯಕ ವಿರಾಟ್ ಕೊಹ್ಲಿ, ಕೋಚ್ ತಂಡವನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ಎಬಿ ಡಿವಿಲಿಯರ್ಸ್ ಅಭಿಮಾನಿಗಳ ಕ್ಷಮೆ ಕೋರಿದ್ದಾರೆ.

79

ನಮ್ಮೆಲ್ಲಾ ಆರ್‌ಸಿಬಿ ಅಭಿಮಾನಿಗಳಿಗೆ ಈ ಪರಿ ನಮಗೆ ಬೆಂಬಲ ನೀಡಿದ್ದಕ್ಕೆ ಧನ್ಯವಾದಗಳು. ನಾವು ನಮ್ಮ ಕೈಲಾದ ಪ್ರಯತ್ನವನ್ನು ಮಾಡಿದೆವು, ಆದರೆ ಕಪ್‌ ಗೆಲ್ಲಲು ಈ ಸಲವೂ ಸಾಧ್ಯವಾಗಲಿಲ್ಲ. ಇದಕ್ಕಾಗಿ ಕ್ಷಮೆ ಇರಲಿ ಎಂದು ಎಬಿಡಿ ಅಭಿಮಾನಿಗಳ ಬಳಿ ಕ್ಷಮೆ ಕೋರಿದ್ದಾರೆ.

89

ಈ ಟೂರ್ನಿಯಲ್ಲಿ ಸಾಕಷ್ಟು ಒಳ್ಳೆಯ ಅಂಶಗಳು ನಮಗೆ ಸಿಕ್ಕಿವೆ. ಮುಂದಿನ ವರ್ಷ ಮತ್ತಷ್ಟು ಒಳ್ಳೆಯ ಪ್ರದರ್ಶನ ನೀಡುತ್ತೇವೆ. ನಮ್ಮನ್ನು ಬೆಂಬಲಿಸಿದ್ದಕ್ಕೆ, ನಮ್ಮ ಜೊತೆಯಿರುವುದಕ್ಕೆ ನಿಮಗೆಲ್ಲಾ ಅನಂತ ಧನ್ಯವಾದಗಳು ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.

99

13ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿನ ಲೀಗ್ ಹಂತದ ಮೊದಲ 10 ಪಂದ್ಯಗಳ ಪೈಕಿ ಆರ್‌ಸಿಬಿ 7 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗಿತ್ತು. ಆದರೆ ಇನ್ನುಳಿದ 5 ಪಂದ್ಯಗಳಲ್ಲೂ ಸತತ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. 

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories