ಚೆನ್ನೈ ಸೂಪರ್ ಕಿಂಗ್ಸ್‌ನ ಮತ್ತೋರ್ವ ಸ್ಟಾರ್ ಆಟಗಾರನೂ ಐಪಿಎಲ್‌ನಲ್ಲಿ ಆಡೋದು ಡೌಟ್..!

First Published | Sep 2, 2020, 9:59 AM IST

ನವದೆಹಲಿ: ಐಪಿಎಲ್‌ ಟೂರ್ನಿ ಆರಂಭಕ್ಕೆ ಕೆಲ ವಾರಗಳಷ್ಟೇ ಬಾಕಿ ಉಳಿದಿದ್ದರೂ ಸಿಎಸ್‌ಕೆ ತಂಡದಲ್ಲಿನ ಸಮಸ್ಯೆಗಳಿನ್ನೂ ಬಗೆಹರಿದಿಲ್ಲ. ಸುರೇಶ್ ರೈನಾ ಐಪಿಎಲ್ ಟೂರ್ನಿಯಿಂದ ಹೊರಬಿದ್ದ ಶಾಕ್‌ನಲ್ಲಿರುವಾಗಲೇ ಮಹೇಂದ್ರ ಸಿಂಗ್ ಧೋನಿ ಪಡೆಗೆ ಮತ್ತೊಂದು ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಅನುಭವಿ ಸುರೇಶ್ ಜತೆಗೆ ಇದೀಗ ಮತ್ತೋರ್ವ ಅನುಭವಿ ಆಟಗಾರರ ಈ ಬಾರಿಯ ಐಪಿಎಲ್ ಟೂರ್ನಿಯಿಂದ ಹಿಂದೆ ಸರಿಯುವ ತೀರ್ಮಾನ ಮಾಡಿದ್ದಾರೆ ಎನ್ನಲಾಗಿದೆ.

ಮೂರು ಬಾರಿಯ ಐಪಿಎಲ್ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ 13ನೇ ಆವೃತ್ತಿಯ ಐಪಿಎಲ್‌ ಆರಂಭಕ್ಕೂ ಮುನ್ನ ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದೆ.
undefined
ಮೊದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಇಬ್ಬರು ಆಟಗಾರರು ಸೇರಿದಂತೆ 13 ಮಂದಿಗೆ ಕೊರೋನಾ ಸೋಂಕು ವಕ್ಕರಿಸಿತ್ತು. ಹೀಗಾಗಿ ಆಟಗಾರರು ಇನ್ನೂ ಅಭ್ಯಾಸಕ್ಕಾಗಿ ಮೈದಾನಕ್ಕಿಳಿದಿಲ್ಲ.
undefined

Latest Videos


ಇದರ ಬೆನ್ನಲ್ಲೇ ದಿಢೀರ್ ಎನ್ನುವಂತೆ ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಸುರೇಶ್ ರೈನಾ ಆಗಸ್ಟ್ 29ರಂದು ಸಂಪೂರ್ಣ ಟೂರ್ನಿಯಿಂದ ಹೊರಗುಳಿಯುವುದಾಗಿ ತಿಳಿಸಿ ಭಾರತಕ್ಕೆ ಬಂದಿದ್ದಾರೆ.
undefined
ಈ ಶಾಕ್‌ನಿಂದ ಹೊರಬರುವ ಮುನ್ನವೇ ತಾರಾ ಸ್ಪಿನ್ನರ್‌ ಹರ್ಭಜನ್‌ ಸಿಂಗ್‌ ಈ ಬಾರಿ ಸಿಎಸ್‌ಕೆ ಪರ ಆಡುವುದು ಅನುಮಾನವಾಗಿದೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿದೆ.
undefined
ಹರ್ಭಜನ್‌ ಸಿಂಗ್‌ ಮಂಗಳವಾರ (ಸೆ.1) ದುಬೈಗೆ ಬರಬೇಕಿತ್ತು. ಆದರೆ ಸಿಎಸ್‌ಕೆ ತಂಡದಲ್ಲಿ ಹೆಚ್ಚುತ್ತಿರುವ ಕೊರೋನಾ ಪ್ರಕರಣದಿಂದಾಗಿ ಭಜ್ಜಿ ದುಬೈಗೆ ಪ್ರಯಾಣಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
undefined
ಹರ್ಭಜನ್ ಸಿಂಗ್ ಚೆನ್ನೈನಲ್ಲಿ ನಡೆದ ಸಿಎಸ್‌ಕೆ ಕ್ಯಾಂಪ್‌ನಿಂದಲೂ ದೂರವೇ ಉಳಿದಿದ್ದರು. ಇನ್ನು ದುಬೈಗೂ ಸಿಎಸ್‌ಕೆ ಜತೆ ಪ್ರಯಾಣ ಬೆಳೆಸಿಲ್ಲ. ಇದು ಸಾಕಷ್ಟು ಅನುಮಾನವನ್ನು ಹುಟ್ಟುಹಾಕಿದೆ.
undefined
ಆಡಿದ ಎಲ್ಲಾ ಆವೃತ್ತಿಗಳಲ್ಲೂ ಪ್ಲೇ ಆಫ್ ಪ್ರವೇಶಿಸಿದ ಏಕೈಕ ತಂಡ ಎನಿಸಿರುವ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಸಿಎಸ್‌ಕೆ ಪಡೆ ಈ ಬಾರಿ ರೈನಾ ಇಲ್ಲದೇ ಮೊದಲ ಬಾರಿಗೆ ಕಣಕ್ಕಿಳಿಯುತ್ತಿದೆ.
undefined
ಸಿಎಸ್‌ಕೆ ತಂಡದ ತುಂಬ ಅನುಭವಿ ಆಟಗಾರರಿದ್ದರೂ ರೈನಾ ಅನುಪಸ್ಥಿತಿ ಹಾಗೆಯೇ ಭಜ್ಜಿ ಒಂದು ವೇಳೆ ಟೂರ್ನಿ ಮಿಸ್‌ ಮಾಡಿಕೊಂಡರೆ ಧೋನಿ ಪಾಳಯ ಸ್ವಲ್ಪ ಹಿನ್ನಡೆ ಅನುಭವಿಸಲಿದೆ ಎಂದರೆ ತಪ್ಪಾಗಲಾರದು.
undefined
click me!