IPL ಟೂರ್ನಿಯಿಂದ ಹಿಂದೆ ಸರದಿದ್ದೇಕೆ..? ಕುತೂಹಲಕ್ಕೆ ತೆರೆ ಎಳೆದ ರೈನಾ..!

First Published Aug 31, 2020, 12:15 PM IST

ನವದೆಹಲಿ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅತ್ಯಂತ ನಂಬಿಕಸ್ಥ ಬ್ಯಾಟ್ಸ್‌ಮನ್ ಎಂದೇ ಗುರುತಿಸಿಕೊಂಡಿದ್ದ ಎಡಗೈ ಬ್ಯಾಟ್ಸ್‌ಮನ್ ಸುರೇಶ್ ರೈನಾ ಏಕಾಏಕಿ 13ನೇ ಆವೃತ್ತಿಯ ಐಪಿಎಲ್‌ನಿಂದ ಏಕಾಏಕಿ ಹೊರಬಿದ್ದಿದ್ದಾರೆ. ವೈಯುಕ್ತಿಕ ಕಾರಣಗಳಿಂದಾಗಿ ರೈನಾ ಐಪಿಎಲ್ ತಂಡದಿಂದ ಹೊರಬಿದ್ದಿದ್ದಾರೆ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡ ಖಚಿತ ಪಡಿಸಿತ್ತು.
ಇದೀಗ ಸುರೇಶ್ ರೈನಾ ತಾವು ಐಪಿಎಲ್‌ನಿಂದ ಹಿಂದೆ ಸರಿದಿದ್ದೇಕೆ ಎನ್ನುವ ಅಭಿಮಾನಿಗಳ ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಅಷ್ಟಕ್ಕೂ ಸುರೇಶ್ ರೈನಾ ಹೇಳಿದ್ದೇನು ಎನ್ನುವ ನಿಮ್ಮ ಕುತೂಹಲಕ್ಕೆ ತೆರೆ ಎಳೆದಿದ್ದಾರೆ.
 

ಮಿಸ್ಟರ್ ಐಪಿಎಲ್ ಎಂದೇ ಕರೆಸಿಕೊಳ್ಳುವ ಸುರೇಶ್ ರೈನಾ 2020ನೇ ಸಾಲಿನ ಐಪಿಎಲ್‌ನಿಂದ ಹೊರಬಿದ್ದಿದ್ದಾರೆ.
undefined
ಈ ಮೊದಲು ಚೆನ್ನೈ ಸೂಪರ್ ಕಿಂಗ್ಸ್ ತಂಡ ವೈಯುಕ್ತಿಕ ಕಾರಣದಿಂದಾಗಿ ರೈನಾ ಟೂರ್ನಿಯಿಂದ ಹಿಂದೆ ಸರಿದು ಭಾರತಕ್ಕೆ ಮರಳಿದ್ದಾರೆ ಎಂದು ತಿಳಿಸಿತ್ತು.
undefined
ಆದರೆ ಇದೀಗ ಸ್ವತಃ ಸುರೇಶ್ ತಾವು ಐಪಿಎಲ್‌ನಿಂದ ಹಿಂದೆ ಸರದಿದ್ದು ಏಕೆ ಎನ್ನುವ ವಿಚಾರವನ್ನು ಬಾಯ್ಬಿಟ್ಟಿದ್ದಾರೆ.
undefined
ಐಪಿಎಲ್‌ ಟೂರ್ನಿಯಿಂದ ನಾನು ಹೊರಬರುವುದಕ್ಕೆ ನನ್ನ ಮಕ್ಕಳೇ ಕಾರಣ ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಆಟಗಾರ ಸುರೇಶ್‌ ರೈನಾ ಹೇಳಿದ್ದಾರೆ.
undefined
ನಮ್ಮ ಕುಟುಂಬಸ್ಥರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿರುವ ಘಟನೆ ಬಗ್ಗೆ ನನ್ನ ಇಬ್ಬರು ಮಕ್ಕಳಾದ ಗ್ರೇಸಿಯಾ (4) ಹಾಗೂ 5 ತಿಂಗಳ ಮಗು ರಿಯೋ ಆತಂಕಗೊಂಡಿದ್ದಾರೆ.
undefined
ಹೀಗಾಗಿ ಪಿಎಲ್‌ ಟೂರ್ನಿಯಿಂದ ಹಿಂದೆ ಸರಿದಿದ್ದೇನೆ. ನನ್ನ ಮಕ್ಕಳಿಗಿಂತ ಐಪಿಎಲ್‌ ಕ್ರಿಕೆಟ್‌ ಟೂರ್ನಿ ಮಹತ್ವದ್ದು ಎಂದು ನನಗನಿಸಲಿಲ್ಲ ಎಂದು ರೈನಾ ಹೇಳಿದ್ದಾರೆ.
undefined
ಈ ನಡುವೆ ಚೆನ್ನೈ ತಂಡದಲ್ಲಿ ಕೊರೋನಾ ಸೋಂಕು ಉಲ್ಬಣಿಸಿದ್ದರಿಂದ ರೈನಾ ತಂಡದಿಂದ ಹೊರ ಹೋಗಿದ್ದಾರೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು.
undefined
ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸುರೇಶ್ ರೈನಾ ಅವರಿಲ್ಲದೇ ಚೆನ್ನೈ ಸೂಪರ್ ಕಿಂಗ್ಸ್ ತಂಡ ಸಂಪೂರ್ಣ ಟೂರ್ನಿ ಆಡಲಿದೆ.
undefined
13ನೇ ಆವೃತ್ತಿಯ ಐಪಿಎಲ್ ಟೂರ್ನಿಯು ಸೆಪ್ಟೆಂಬರ್ 19ರಿಂದ ಆರಂಭವಾಗಿ ನವೆಂಬರ್ 10ರವರೆಗೆ ನಡೆಯಲಿದೆ.
undefined
click me!