ಐಪಿಎಲ್ 2020 ಟೂರ್ನಿಯಲ್ಲಿ ಗರಿಷ್ಠ ವಿಕೆಟ್‌ ಕಬಳಿಸಿದ ಟಾಪ್ 10 ಬೌಲರ್‌ಗಳಿವರು..!

First Published | Nov 11, 2020, 4:27 PM IST

ಬೆಂಗಳೂರು: 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡವನ್ನು ಮಣಿಸಿದ ಮುಂಬೈ ಇಂಡಿಯನ್ಸ್‌ 5ನೇ ಬಾರಿಗೆ ಐಪಿಎಲ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. 
ಹೊಡಿಬಡಿಯಾಟದ ನಡುವೆಯೇ ಬೌಲರ್‌ಗಳು ಕಮಾಲ್ ಮಾಡುವಲ್ಲಿ ಈ ಬಾರಿ ಯಶಸ್ವಿಯಾಗಿದ್ದಾರೆ. ಕಗಿಸೋ ರಬಾಡ 30 ವಿಕೆಟ್ ಪಡೆಯುವ ಮೂಲಕ ಪರ್ಪಲ್‌ ಕ್ಯಾಪ್ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ 2020ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್ ಕಬಳಿಸಿದ ಟಾಪ್ 10 ಬೌಲರ್‌ಗಳ ಪಟ್ಟಿ ಇಲ್ಲಿದೆ ನೋಡಿ
 

1. ಕಗಿಸೋ ರಬಾಡ: ಡೆಲ್ಲಿ ಕ್ಯಾಪಿಟಲ್ಸ್
ಮಾರಕ ವೇಗಿ ರಬಾಡ 17 ಪಂದ್ಯಗಳನ್ನಾಡಿ 65.4 ಓವರ್‌ ಬೌಲಿಂಗ್‌ ಮಾಡಿ 548 ರನ್ ನೀಡಿ 30 ವಿಕೆಟ್‌ ಕಬಳಿಸುವ ಮೂಲಕ ಮೊದಲ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು
Tap to resize

2.ಜಸ್ಪ್ರೀತ್ ಬುಮ್ರಾ: ಮುಂಬೈ ಇಂಡಿಯನ್ಸ್‌
ಡೆತ್ ಓವರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಕೇವಲ 15 ಪಂದ್ಯಗಳನ್ನಾಡಿ 60 ಓವರ್‌ ಬೌಲಿಂಗ್ ಮಾಡಿ 404 ರನ್ ನೀಡಿ 27 ವಿಕೆಟ್‌ ಕಬಳಿ 2ನೇ ಸ್ಥಾನದಲ್ಲಿದ್ದಾರೆ
3. ಟ್ರೆಂಟ್ ಬೌಲ್ಟ್: ಮುಂಬೈ ಇಂಡಿಯನ್ಸ್
ಯಾರ್ಕರ್‌ ಸ್ಪೆಷಲಿಸ್ಟ್ ಬೌಲ್ಟ್ 15 ಪಂದ್ಯಗಳನ್ನಾಡಿ 57.2 ಓವರ್‌ ಬೌಲಿಂಗ್‌ ಮಾಡು 457 ರನ್ ನೀಡಿ 25 ವಿಕೆಟ್ ಕಬಳಿಸಿ 3ನೇ ಸ್ಥಾನದಲ್ಲಿದ್ದಾರೆ
4. ಆನ್ರಿಚ್ ನೊಕಿಯೆ: ಡೆಲ್ಲಿ ಕ್ಯಾಪಿಟಲ್ಸ್
ಡೆಲ್ಲಿ ಸ್ಪೀಡ್ ಗನ್ ನೊಕಿಯೆ 16 ಪಂದ್ಯಗಳನ್ನಾಡಿ 61 ಓವರ್‌ ಬೌಲಿಂಗ್ ಮಾಡಿ 512 ರನ್‌ ನೀಡಿ 22 ವಿಕೆಟ್ ಕಬಳಿಸಿ 4ನೇ ಸ್ಥಾನದಲ್ಲಿದ್ದಾರೆ.
5. ಯುಜುವೇಂದ್ರ ಚಹಲ್: ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿ ಲೆಗ್‌ ಸ್ಪಿನ್ನರ್ ಚಹಲ್ 15 ಪಂದ್ಯಗಳಲ್ಲಿ 57.1 ಓವರ್‌ ಬೌಲಿಂಗ್ ಮಾಡಿ 405 ರನ್‌ ನೀಡಿ 21 ವಿಕೆಟ್ ಕಬಳಿಸಿ 5ನೇ ಸ್ಥಾನದಲ್ಲಿದ್ದಾರೆ.
6. ರಶೀದ್ ಖಾನ್: ಸನ್‌ರೈಸರ್ಸ್‌ ಹೈದರಾಬಾದ್
ಆಫ್ಘಾನ್ ಸ್ಪಿನ್ನರ್ ರಶೀದ್ ಖಾನ್ 16 ಪಂದ್ಯಗಳನ್ನಾಡಿ 64 ಓವರ್ ಬೌಲಿಂಗ್‌ ಮಾಡಿ 344 ರನ್ ನೀಡಿ 20 ವಿಕೆಟ್ ಕಬಳಿಸಿ 6ನೇ ಸ್ಥಾನದಲ್ಲಿದ್ದಾರೆ.
7. ಜೋಫ್ರಾ ಆರ್ಚರ್: ರಾಜಸ್ಥಾನ ರಾಯಲ್ಸ್
ರಾಯಲ್ಸ್ ಮಾರಕ ವೇಗಿ ಆರ್ಚರ್ 14 ಪಂದ್ಯಗಳನ್ನಾಡಿ 55.4 ಓವರ್ ಬೌಲಿಂಗ್ ಮಾಡಿ 365 ರನ್ ನೀಡಿ 20 ವಿಕೆಟ್ ಕಬಳಿಸಿ 7ನೇ ಸ್ಥಾನದಲ್ಲಿದ್ದಾರೆ.
8. ಮೊಹಮ್ಮದ್ ಶಮಿ: ಕಿಂಗ್ಸ್ ಇಲೆವನ್ ಪಂಜಾಬ್
ವೇಗಿ ಶಮಿ 14 ಪಂದ್ಯಗಳನ್ನಾಡಿ 53.4 ಓವರ್‌ ಬೌಲಿಂಗ್ ಮಾಡಿ 460 ರನ್‌ ನೀಡಿ 20 ವಿಕೆಟ್ ಕಬಳಿಸಿ 8ನೇ ಸ್ಥಾನದಲ್ಲಿದ್ದಾರೆ.
9. ವರುಣ್ ಚಕ್ರವರ್ತಿ: ಕೋಲ್ಕತ ನೈಟ್‌ ರೈಡರ್ಸ್
ಮಿಸ್ಟ್ರಿ ಸ್ಪಿನ್ನರ್ ವರುಣ್ ಚಕ್ರವರ್ತಿ 13 ಪಂದ್ಯಗಳನ್ನಾಡಿ 52 ಓವರ್ ಬೌಲಿಂಗ್ ಮಾಡಿ 356 ರನ್ ನೀಡಿ 17 ವಿಕೆಟ್ ಕಬಳಿಸುವ ಮೂಲಕ 9ನೇ ಸ್ಥಾನದಲ್ಲಿದ್ದಾರೆ.
10. ಟಿ. ನಟರಾಜನ್: ಸನ್‌ರೈಸರ್ಸ್‌ ಹೈದರಾಬಾದ್
ಯುವ ಯಾರ್ಕರ್ ಸ್ಪೆಷಲಿಸ್ಟ್ ನಟರಾಜನ್ 16 ಪಂದ್ಯಗಳನ್ನಾಡಿ 62.5 ಓವರ್‌ ಬೌಲಿಂಗ್ ಮಾಡಿ 504 ರನ್ ನೀಡಿ 16 ವಿಕೆಟ್ ಕಬಳಿಸಿ ಗರಿಷ್ಠ ವಿಕೆಟ್‌ ಕಬಳಿಸಿದವರ ಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದ್ದಾರೆ.

Latest Videos

click me!