IPL 2020 ಈ ಸಲ ಆಲ್ಟ್ರೋಸ್‌ ಕಾರು ಗೆದ್ದಿದ್ದು ಯಾರು?

First Published | Nov 11, 2020, 1:53 PM IST

ದುಬೈ: ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ದಾಖಲೆಯ 5ನೇ ಐಪಿಎಲ್ ಜಯಿಸಿ ಗೆದ್ದು ಬೀಗಿದೆ. ಇದರೊಂದಿಗೆ ಒಂದು ತಂಡಕ್ಕೆ 5 ಐಪಿಎಲ್ ಟ್ರೋಫಿ ಗೆದ್ದುಕೊಟ್ಟ ಮೊದಲ ಹಾಗೂ ಏಕೈಕ ನಾಯಕ ಎನ್ನುವ ಹಿರಿಮೆ ರೋಹಿತ್ ಶರ್ಮಾ ಪಾಲಾಗಿದೆ.
ಡೆಲ್ಲಿ ವಿರುದ್ಧ ಮುಂಬೈ ಇಂಡಿಯನ್ಸ್‌ ತಂಡ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು. ಇದರ ಬೆನ್ನಲ್ಲೇ ಅರಬ್ಬರ ನಾಡಿನಲ್ಲಿ ಬಿಸಿಸಿಐ ಅದ್ಧೂರಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಂಡಿತ್ತು. ಈ ಟೂರ್ನಿಯ ಆಕರ್ಷಣೀಯ ಕೇಂದ್ರ ಬಿಂದುವಾಗಿದ್ದ ಟಾಟಾ ಆಲ್ಟ್ರೋಸ್ ಕಾರು ಏಕೆ ಹಾಗೂ ಯಾರ ಪಾಲಾಯಿತು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ 
 

ಯುಎಇನಲ್ಲಿ ನಡೆದ 13ನೇ ಆವೃತ್ತಿಯ ಐಪಿಎಲ್ ಟೂರ್ನಿಗೆ ಟಾಟಾ ಆಲ್ಟ್ರೋಸ್ ಕೂಡಾ ಸಹಪ್ರಾಯೋಜಕತ್ವ ನೀಡಿತ್ತು.
undefined
ಅತ್ಯುತ್ತಮ ಬ್ಯಾಟಿಂಗ್‌ ಸ್ಟ್ರೈಕ್‌ರೇಟ್ ಹೊಂದಿದ ಬ್ಯಾಟ್ಸ್‌ಮನ್‌ಗೆ ಟಾಟಾ ಆಲ್ಟ್ರೋಸ್ ಕಾರು ಬಹುಮಾನವಾಗಿ ನೀಡಲು ತೀರ್ಮಾನಿಸಲಾಗಿತ್ತು.
undefined

Latest Videos


ಈ ವರ್ಷ ಟಾಟಾ ಆಲ್ಟ್ರೋಸ್ ಕಾರು ಪಡೆಯಲು ಮುಂಬೈ ಇಂಡಿಯನ್ಸ್ ಸ್ಫೋಟಕ ಬ್ಯಾಟ್ಸ್‌ಮನ್‌ಗಳಾದ ಕೀರಾನ್ ಪೊಲ್ಲಾರ್ಡ್‌ ಹಾಗೂ ಹಾರ್ದಿಕ್ ಪಾಂಡ್ಯ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಟ್ಟಿತ್ತು.
undefined
ಸ್ಪೋಟಕ ಬ್ಯಾಟ್ಸ್‌ಮನ್ ಹಾರ್ದಿಕ್ ಪಾಂಡ್ಯ 13 ಇನಿಂಗ್ಸ್‌ಗಳಲ್ಲಿ 178.98ರ ಸ್ಟ್ರೈಕ್‌ರೇಟ್‌ನಲ್ಲಿ 281 ರನ್ ಬಾರಿಸಿದ್ದರು.
undefined
ಇನ್ನು ಕೀರಾನ್ ಪೊಲ್ಲಾರ್ಡ್ ಕೇವಲ 12 ಇನಿಂಗ್ಸ್‌ಗಳಲ್ಲಿ 191.42ರ ಸ್ಟ್ರೈಕ್‌ರೇಟ್‌ನಲ್ಲಿ 268 ರನ್ ಬಾರಿಸಿದ್ದರು.
undefined
ಹೀಗಾಗಿ ಗರಿಷ್ಠ ಸ್ಟ್ರೈಕ್‌ರೇಟ್‌ ಹೊಂದಿದ ಕೀರಾನ್ ಪೊಲ್ಲಾರ್ಡ್ ಟಾಟಾ ಆಲ್ಟ್ರೋಸ್ ಕಾರನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾದರು.
undefined
ಪೊಲ್ಲಾರ್ಡ್‌ಗೆ ಬರೋಡ ಮೂಲದ ಆಟಗಾರ ಹಾರ್ದಿಕ್ ಪಾಂಡ್ಯ ನಿಕಟ ಪೈಪೋಟಿ ನೀಡಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಕೇವಲ 3 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದ್ದರಿಂದಾಗಿ ಟಾಟಾ ಆಲ್ಟ್ರೋಸ್ ಕಾರು ಗೆಲ್ಲಲು ವಿಫಲರಾದರು.
undefined
ಇನ್ನುಳಿದಂತೆ ರಾಜಸ್ಥಾನ ರಾಯಲ್ಸ್‌ ತಂಡದ ಕ್ರಿಕೆಟಿಗ ಜೋಫ್ರಾ ಆರ್ಚರ್ 179.36ರ ಸ್ಟ್ರೈಕ್‌ರೇಟ್‌ನೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
undefined
ಚೆನ್ನೈ ಸೂಪರ್ ಕಿಂಗ್ಸ್‌ ಆಲ್ರೌಂಡರ್ ರವೀಂದ್ರ ಜಡೇಜಾ 171.85ರ ಸ್ಟ್ರೈಕ್‌ರೇಟ್‌ನೊಂದಿಗೆ ನಾಲ್ಕನೇ ಸ್ಥಾನ ಪಡೆದರು.
undefined
click me!