ಜಮ್ಮು ಕಾಶ್ಮೀರ, ಲಡಾಖ್ ಪ್ರತ್ಯೇಕಗೊಳಿಸಿದ ವಿಶ್ವ ಸಂಸ್ಥೆ ಮ್ಯಾಪ್; ಹೊತ್ತಿಕೊಂಡ ವಿವಾದ!

First Published Jan 10, 2021, 6:57 PM IST

ವಿಶ್ವ ಆರೋಗ್ಯ ಸಂಸ್ಥೆ  ಅಧೀಕೃತ ವೆಬ್‌ಸೈಟ್‌ನಲ್ಲಿ ವಿಶ್ವದ ಮ್ಯಾಪ್ ಪ್ರಕಟಿಸಿದೆ. ಆದರೆ ಈ ಮ್ಯಾಪ್ ಇದೀಗ ಭಾರತೀಯರ ಕೆಂಗಣ್ಣಿಗೆ ಗುರಿಯಾಗಿದೆ. ಕಾರಣ, ವಿಶ್ವ ಆರೋಗ್ಯ ಸಂಸ್ಥೆ ಪ್ರಕಟಿಸಿದ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯವನ್ನೇ ಭಾರತದಿಂದ ಪ್ರತ್ಯೇಕಗೊಳಿಸಲಾಗಿದೆ. ಇದು ಚೀನಾ ಕೈವಾಡ ಅನ್ನೋ ಆರೋಪ ಕೇಳಿಬಂದಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

ಕೊರೋನ ವೈರಸ್ ಕುರಿತ ಮಾಹಿತಿ ಹಾಗೂ ಭೂಪಟವನ್ನು ವಿಶ್ವ ಆರೋಗ್ಯ ಸಂಸ್ಥೆ ತನ್ನ ಅಧೀಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ. ಆದರೆ ಇದು ಮತ್ತೊಂದು ವಿವಾದವನ್ನು ಸೃಷ್ಟಿಸಿದೆ.
undefined
ವಿಶ್ವ ಆರೋಗ್ಯ ಸಂಸ್ಥೆ ನೀಲಿ, ಕಡು ನೀಲಿ, ಬಳಿ, ಸೇರಿದಂತೆ ಕಲ ಬಣ್ಣಗಳಲ್ಲಿ ಒಂದೊಂದು ರಾಷ್ಟ್ರಗಳನ್ನು ಚಿತ್ರಿಸಿದೆ. ಇದರಲ್ಲಿ ಭಾರತವನ್ನು ಕಡು ನೀಲಿ ಬಣ್ಣದಿಂದ ತುಂಬಿದೆ.
undefined
ಆದರೆ ಈ ಭಾರತ ಭೂಪಟದಲ್ಲಿ ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ ಪ್ರಾಂತ್ಯವನ್ನು ಭಾರತದಿಂದ ಪ್ರತ್ಯೇಕರಿಸಿದೆ. ಸಂಪೂರ್ಣ ಭಾರತ ಕಡು ನೀಲಿ ಬಣ್ಣದಲ್ಲಿದ್ದರೆ, ಇತ್ತ ಜಮ್ಮ ಮತ್ತು ಕಾಶ್ಮೀರ ಸಿಲ್ವರ್ ಕಲರ್ ಹಾಗೂ ಅಕ್ಸಯ್ ಚಿನ್ ಪ್ರದೇಶವನ್ನು ಚೀನಾ ದೇಶಕ್ಕೆ ನೀಡಲಾಗಿರುವ ಆಶಾಕ ನೀಲಿ ಬಣ್ಣದ ಗೆರೆಗಳಿಂದ ಚಿತ್ರಿಸಿದೆ.
undefined
ಈ ಮ್ಯಾಪ್ ವಿಶ್ವ ಸಂಸ್ಥೆ ವೆಬ್‌ಸೈಟ್‌ನಲ್ಲಿ ಪ್ರಕಟಿಸುತ್ತಿದ್ದಂತೆ, ಬ್ರಿಟನ್‌ನಲ್ಲಿ ನೆಲೆಸಿರುವ ಭಾರತೀಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಭಾರತದಲ್ಲಿ ಆಕ್ರೋಶ ವ್ಯಕ್ತವಾಗಿದೆ.
undefined
ವಿಶ್ವ ಆರೋಗ್ಯ ಸಂಸ್ಥೆ ಭೂಪಟಕ್ಕೆ ತೀವ್ರ ವಿರೋಧ ವ್ಯಕ್ತವಾಗುತ್ತಿದೆ. ಇದರ ಹಿಂದೆ ಚೀನಾ ಕೈವಾಡವಿದೆ ಅನ್ನೋ ಆರೋಪ ಕೇಳಿ ಬರುತ್ತಿದೆ. ವಿಶ್ವ ಸಂಸ್ಥೆ ಚೀನಾದ ಕೈಗೊಂಬೆಯಾಗಿದೆ ಎಂದು ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
undefined
ಕೊರೋನಾ ವೈರಸ್ ಜನಕ ಚೀನಾ ಈ ವಿಚಾರವನ್ನು ಮುಚ್ಚಿಟ್ಟಿತು. ವಿಶ್ವ ಆರೋಗ್ಯ ಸಂಸ್ಥೆಯನ್ನು ತನ್ನ ತಾಳಕ್ಕೆ ತಕ್ಕಂತೆ ಬಳಸಿಸಿಕೊಂಡಿರುವುದು ಈಗಾಗಲೇ ಬಹಿರಂಗವಾಗಿದೆ.
undefined
ಇದೀಗ ಭಾರತದ ಭೂಪಟ ವಿಚಾರದಲ್ಲಿ ಚೀನಾ, ವಿಶ್ವ ಆರೋಗ್ಯ ಸಂಸ್ಥೆಯನ್ನು ನಿಯಂತ್ರಿಸುತ್ತಿದೆ. ಇದಕ್ಕೆ ಮತ್ತೊಂದು ಊದಾಹರಣೆ ಈ ಭೂಪಟ ಎಂದು ಭಾರತೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
undefined
ವಿಶ್ವ ಸಂಸ್ಥೆ ಅಧೀಕೃತಗೊಳಿಸಿದ ಭೂಪಚ ನಾವು ಬಳಿಸಿದ್ದೇವೆ, ಇದರ ಹಿಂದೆ ಯಾವು ಉದ್ದೇಶವೂ ಇಲ್ಲ, ಚೀನಾದ ಕೈವಾಜ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಪ್ರತಿಕ್ರಿಯೆ ನೀಡಿದೆ.
undefined
click me!