ಕೊರೋನಾ ಲಸಿಕೆ ಪಡೆದ 10 ದಿನದಲ್ಲಿ ವ್ಯಕ್ತಿ ಸಾವು; ತನಿಖೆಗೆ ಆದೇಶಿಸಿದ ಮಧ್ಯ ಪ್ರದೇಶ ಸರ್ಕಾರ!

First Published Jan 9, 2021, 9:55 PM IST

ಕೊರೋನಾ ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ದಿನಾಂಕ ನಿಗದಿ ಮಾಡಿದೆ. ಇತ್ತ ಭರ್ಜರಿ ತಯಾರಿಗಳು ಆರಂಭಗೊಂಡಿದೆ. ಎರಡು ಲಸಿಕೆಗೆ ಅನುಮತಿ ಸಿಕ್ಕ ಬೆನ್ನಲ್ಲೇ  ಲಸಿಕೆ ನೀಡುವ ಕುರಿತು ಕೇಂದ್ರ ಸರ್ಕಾರ ಸರಣಿ ಸಭೆಗಳನ್ನು ನಡೆಸುತ್ತಿದೆ. ಇದರ ನಡುವೆ ಆಘಾತಕಾರಿ ಬೆಳವಣಿಗೆಯೊಂದು ನಡೆದಿದೆ.
 

ದೇಶದಿಂದ ಕೊರೋನಾ ವೈರಸ್ ಹೊಡೆದೋಡಿಸಲು ಕೇಂದ್ರ ಸರ್ಕಾರ ಇದೀಗ ಲಸಿಕೆ ವಿತರಣೆಗೆ ಮುಂದಾಗಿದೆ. ಕೋವಿಶೀಲ್ಡ್ ಹಾಗೂ ಕೋವಾಕ್ಸಿನ್ ಲಸಿಕೆಗೆ ಭಾರತದಲ್ಲಿ ಅನುಮೋದನೆ ಸಿಕ್ಕಿದೆ.
undefined
ಜನವರಿ 16 ರಿಂದ ಲಸಿಕೆ ವಿತರಣೆ ಆರಂಭಗೊಳ್ಳಲಿದೆ. ಮೊದಲ ಹಂತದಲ್ಲಿ 30 ಕೋಟಿ ಮಂದಿಗೆ ಲಸಿಕೆ ನೀಡಲು ಕೇಂದ್ರ ರೂಪುರೇಷೆ ಸಿದ್ದಪಡಿಸಿದೆ. ಆದರೆ ಇದರ ನಡುವೆ ಮಧ್ಯಪ್ರದೇಶದಿಂದ ಬಂದ ವರದಿ ಕೇಂದ್ರದ ಉತ್ಸಾಹಕ್ಕೆ ಬ್ರೇಕ್ ಹಾಕುವಂತಿದೆ.
undefined
ಕೋವಾಕ್ಸಿನ್ ಲಸಿಕೆ ಪ್ರಯೋಗದಲ್ಲಿ ಸ್ವಯಂ ಪ್ರೇರಣೆಯಿಂದ ಪಾಲ್ಗೊಂಡು ಲಸಿಕೆ ಹಾಕಿಸಿಕೊಂಡಿದ್ದ ಬೋಪಾಲದ 42 ವರ್ಷದ ದೀಪಕ್ ಮರಾವಿ ಸಾವನ್ನಪ್ಪಿದ್ದಾರೆ.
undefined
ಡಿಸೆಂಬರ್ 12 ರಂದು ಕೋವಾಕ್ಸಿನ್ ಲಸಿಕೆ ಹಾಕಿಸಿಕೊಂಡಿದ್ದ ದೀಪಕ್ ಮರಾವಿ 10 ದಿನದಲ್ಲಿ, ಅಂದರೆ ಡಿಸೆಂಬರ್ 22ರಂದು ಸಾವನ್ನಪ್ಪಿದ್ದಾರೆ.
undefined
ಮರಣೋತ್ತರ ಪರೀಕ್ಷೆಯಲ್ಲಿ ದೀಪಕ್ ಮರಾವಿ ದೇಹದಲ್ಲಿ ವಿಷಕಾರಿ ಅಂಶ ಪತ್ತೆಯಾಗಿದೆ. ಈ ವಿಷಕಾರಿ ಅಂಶದಿಂದ ಸಾನಪ್ಪಿರುವ ಶಂಕೆ ಇದೆ ಎಂದು ಮೆಡಿಕೋ ಲೀಗಲ್ ಇನ್ಸ್ಟಿಟ್ಯೂಟ್ ನಿರ್ದೇಶಕ ಡಾ.ಅಶೋಕ್ ಶರ್ಮಾ ಹೇಳಿದ್ದಾರೆ.
undefined
ದೀಪಕ್ ಮರಾವಿಗೆ ಲಸಿಕೆ ನೀಡುವಿಕೆಯಲ್ಲಿ ಭಾರತ್ ಬಯೋಟೆಕ್ ಮಾರ್ಗಸೂಚಿ ಹಾಗೂ ಭಾರತದ ಔಷಧ ನಿಯಂತ್ರಕ ಮಂಡಳಿ ಮಾರ್ಗಸೂಚಿ ಪಾಲಿಸಲಾಗಿದೆ ಎಂದು ಮೆಡಿಕಲ್ ಕಾಲೇಜು ವೈದ್ಯರಾದ ಡಾ.ರಾಜೇಶ್ ಕಪೂರ್ ಹೇಳಿದ್ದಾರೆ.
undefined
ಲಸಿಕೆ ನೀಡಿದ 30 ನಿಮಿಷ ಸಂಪೂರ್ಣ ಸೂಕ್ಷ್ಮವಾಗಿ ವೈದ್ಯರ ತಂಡ ನಿಘಾವಹಿಸಿದೆ. ಬಳಿಕ 7 ರಿಂದ 8 ದಿನ ಆರೋಗ್ಯ ವಿಚಾರಿಸಿದ್ದೇವೆ. ಈ ವೇಳೆ ಯಾವುದೇ ಸಮಸ್ಯೆ ಕುರಿತು ದೀಪಕ್ ಹೇಳಿಲ್ಲ ಎಂದು ಕಪೂರ್ ಹೇಳಿದ್ದಾರೆ.
undefined
ದೀಪಕ್ ಮರಾವಿ ಸಾವಿನ ಕುರಿತು ತನಿಖೆ ನಡೆಸಲು ಮಧ್ಯ ಪ್ರದೇಶ ಸರ್ಕಾರ ಆದೇಶಿಸಿದೆ. ಇತ್ತ ಕೋವಾಕ್ಸಿನ್ ಪ್ರಯೋಗ ಮಾಡಲು ನೀಡಿದ್ದ ಭಾರತ್ ಬಯೋಟೆಕ್ ಸಂಸ್ಥೆ ಹಾಗೂ ಭಾರತದ ಔಷಧ ನಿಯಂತ್ರ ಮಂಡಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
undefined
click me!