ತತ್ವಶಾಸ್ತ್ರದ ಉಪನ್ಯಾಸಕಿ ದೆಹಲಿ ಮೇಯರ್‌, ಯಾರಿವರು ಶೆಲ್ಲಿ ಒಬೆರಾಯ್‌?

Published : Feb 22, 2023, 05:44 PM IST

ದೆಹಲಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿರುವ ಶೆಲ್ಲಿ ಒಬೆರಾಯ್‌, ದೆಹಲಿಯ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಡಿಸೆಂಬರ್‌ 7 ರಂದು ನಡೆದ ದೆಹಲಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ವಾರ್ಡ್‌ ನಂ.86ರಿಂದ ಒಬೆರಾಯ್‌ ಗೆಲುವು ಕಂಡಿದ್ದರು.  

PREV
110
ತತ್ವಶಾಸ್ತ್ರದ ಉಪನ್ಯಾಸಕಿ ದೆಹಲಿ ಮೇಯರ್‌, ಯಾರಿವರು ಶೆಲ್ಲಿ ಒಬೆರಾಯ್‌?

ಪಾಲಿಕೆ ಚುನಾವಣೆ ಫಲಿತಾಂಶ ಬಂದ 80 ದಿನಗಳ ಬಳಿಕ ದೆಹಲಿಗೆ ಹೊಸ ಮೇಯರ್‌ ಸಿಕ್ಕಿದ್ದಾರೆ. ಆಮ್‌ ಆದ್ಮಿ ಪಾರ್ಟಿಯ ಶೆಲ್ಲಿ ಒಬೆರಾಯ್‌ ನೂತನ ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ. ಶೆಲ್ಲಿ 150 ಮತಗಳನ್ನು ಪಡೆಯುವ ಮೂಲಕ, ಬಿಜೆಪಿಯ ರೇಖಾ ಗುಪ್ತಾರನ್ನು 34 ಮತಗಳ ಅಂತರದಲ್ಲಿ ಸೋಲಿಸಿದ್ದಾರೆ.

210

ಮೇಯರ್‌ ಆಗುವ ಮೂರು ವಿಫಲ ಯತ್ನಗಳ ಬಳಿಕ ಆಮ್‌ ಆದ್ಮಿ ಪಾರ್ಟಿಯ ನಾಯಕಿ ಶೆಲ್ಲಿ ಒಬೆರಾಯ್‌ ದೆಹಲಿಯ ಮೇಯರ್‌ ಆಗಿದ್ದಾರೆ.  ನಾಮನಿರ್ದೇಶಿತ ಸದಸ್ಯರಿಗೆ ಮತದಾನದ ಹಕ್ಕನ್ನು ನೀಡುವ ಕುರಿತಾಗಿ ಗಲಾಟೆ ಏರ್ಪಟ್ಟ ಹಿನ್ನಲೆಯಲ್ಲಿ ಹಿಂದಿನ ಚುನಾವಣಾ ಪ್ರಯತ್ನಗಳು ಸ್ಥಗಿತಗೊಂಡಿದ್ದವು.

310

39 ವರ್ಷ ವಯಸ್ಸಿನ ಶೆಲ್ಲಿ ಒಬೆರಾಯ್‌ ಇಂದಿರಾ ಗಾಂಧಿ ನ್ಯಾಷನಲ್ ಓಪನ್ ಯೂನಿವರ್ಸಿಟಿಯ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ ಸ್ಟಡೀಸ್‌ನಿಂದ ತತ್ವಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿಯನ್ನು ಹೊಂದಿದ್ದಾರೆ ಮತ್ತು ಹಲವಾರು ಶೈಕ್ಷಣಿಕ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

410

ಕಾಲೇಜಿನಲ್ಲಿ ಓದುವಾಗ  ಅತ್ಯಧಿಕ ಗ್ರೇಡ್ ಪಾಯಿಂಟ್ ಸರಾಸರಿ ಹೊಂದಿದ್ದ ಕಾರಣಕ್ಕಾಗಿ ಶೆಲ್ಲಿ ಒಬೆರಾಯ್‌, 'ಮಿಸ್ ಕಮಲಾ ರಾಣಿ ಪ್ರಶಸ್ತಿ' ಮತ್ತು ವಿದ್ಯಾರ್ಥಿವೇತನವನ್ನೂ ಪಡೆದುಕೊಂಡಿದ್ದರು.

510

ಶೆಲ್ಲಿ ಭಾರತೀಯ ವಾಣಿಜ್ಯ ಸಂಘದ ಆಜೀವ ಸದಸ್ಯರಾಗಿದ್ದಾರೆ ಮತ್ತು ಈ ಹಿಂದೆ ವಿವಿಧ ಸಮ್ಮೇಳನಗಳಲ್ಲಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ. ಒಬೆರಾಯ್ ಅಂತಹ ಒಂದು ಸಮಾರಂಭದಲ್ಲಿ ಚಿನ್ನದ ಪದಕವನ್ನು (ಪ್ರೊ ಮನುಭಾಯ್ ಶಾ ಪ್ರಶಸ್ತಿ) ಗೆದ್ದರು.
 

610

ಶೆಲ್ಲಿ ಒಬೆರಾಯ್ ಅವರ ರಾಜಕೀಯ ಜೀವನವು ಸುಮಾರು ಒಂದು ದಶಕದ ಹಿಂದೆ ಅವರು ಎಎಪಿ ಸೇರುವ ಮೂಲಕ ಪ್ರಾರಂಭವಾಗಿತ್ತು. ಅವರು 2020 ರವರೆಗೆ ದೆಹಲಿ AAP ನ ಮಹಿಳಾ ಘಟಕದ ಉಪಾಧ್ಯಕ್ಷರಾಗಿದ್ದರು.

710

ದೆಹಲಿ 10 ವರ್ಷಗಳ ಬಳಿಕ ಮಹಿಳಾ ಮೇಯರ್‌ಅನ್ನು ಪಡೆದುಕೊಂಡಿದೆ. 2011ರಲ್ಲಿ ಬಿಜಿಪಿಯ ರಜನಿ ಅಬ್ಬಿ, ದೆಹಲಿ ಪಾಲಿಕೆಯಲ್ಲಿ ಮೇಯರ್‌ ಆಗಿದ್ದ ಕೊನೆಯ ಮಹಿಳೆಯಾಗಿದ್ದರು. ಅದಾದ ಬಳಿಕ ಅಂದರೆ 2012ರಲ್ಲಿ ಶೀಲಾ ದೀಕ್ಷಿತ್‌ ಸರ್ಕಾರದಲ್ಲಿ ದೆಹಲಿ ಪಾಲಿಕೆಯನ್ನು ಮೂರು ಭಾಗಗಳಾಗಿ ವಿಭಾಗಿಸಲಾಗಿತ್ತು.

810

2012ರಲ್ಲಿ ವಿಭಾಗಿಸಲಾಗಿದ್ದ ದೆಹಲಿ ಪಾಲಿಕೆಯನ್ನು 2022ರಲ್ಲಿ ಮರು ಜೋಡಿಸಲಾಗಿತ್ತು. ಅದಾದ ಬಳಿಕ ನಡೆದ ಮೊದಲ ಚುನಾವಣೆಯಲ್ಲಿಯೇ ಆಪ್‌ ಭರ್ಜರಿ ಜಯ ಸಂಪಾದನೆ ಮಾಡಿತ್ತು.

910

ಆಪ್‌ನ ಅಲೆ ಮೊಹಮದ್‌ ಇಕ್ಬಾಲ್‌ ಉಪಮೇಯರ್‌ ಆಗಿ ಆಯ್ಕೆಯಾದರು. ಅವರು 147 ಮತಗಳನ್ನು ಪಡೆದರೆ, ಬಿಜೆಪಿ ಕಮಲ್‌ ಬಗ್ಡಿ ಇಲ್ಲಿ ಸೋಲು ಕಂಡರು.

1010

ಡಿಸೆಂಬರ್‌ 8 ರಂದು ಪ್ರಕಟವಾಗಿದ್ದ ದೆಹಲಿ ಪಾಲಿಕೆ ಚುನಾವಣೆ ಫಲಿತಾಂಶದಲ್ಲಿ 15 ವರ್ಷಗಳ ಬಳಿಕ ಬಿಜೆಪಿ ಸೋಲು ಕಂಡಿತ್ತು. 250 ಸದಸ್ಯಬಲದ ಪಾಲಿಕೆಯಲ್ಲಿ ಮೇಯರ್‌ ಸ್ಥಾನ ಪಡೆಯಲು 138 ಮತ ಪಡೆಯುವುದು ಅಗತ್ಯವಾಗಿದೆ. 241 ಕಾರ್ಪೋರೇಟರ್‌ಗಳು, 10 ಸಂಸದರು ಹಾಗೂ 14 ಶಾಸಕರು ಮೇಯರ್‌ ಚುನಾವಣೆಯಲ್ಲಿ ಮತ ಹಾಕುತ್ತಾರೆ. 9 ಕಾಂಗ್ರೆಸ್‌ ಕಾರ್ಪೋರೇಟರ್‌ಗಳು ಚುನಾವಣೆಯಲ್ಲಿ ಭಾಗವಹಿಸಲಿರಲಿಲ್ಲ.

Read more Photos on
click me!

Recommended Stories