14ನೇ ಆವೃತ್ತಿಯ ಏರೋ ಇಂಡಿಯಾ ಶೋ ಅಂತಿಮ ಘಟ್ಟ ತಲುಪಿದೆ. ಇಂದು ಯುದ್ಧವಿಮಾನಗಳ ಸಾಹಸ, ಹೆಲಿಕಾಪ್ಟರ್ ಶಕ್ತಿ ಪ್ರದರ್ಶನ ಮೇಳೈಸಿತು. ಯಲಹಂಕಾ ವಾಯುನೆಲೆಯಲ್ಲಿ ನಡೆಯುತ್ತಿರುವ ಈ ಏರ್ ಶೋ ಅಪ್ರತಿಮ ಸಾಹಸ ದೃಶ್ಯಕ್ಕೂ ಸಾಕ್ಷಿಯಾಯಿತು.
ಅಂತಿಮ ಹಂತ ತಲುಪಿರುವ ಕಾರಣ ಏರೋ ಇಂಡಿಯಾ ಶೋ ವೀಕ್ಷಿಸಲು ಜನಸಾಗರವೇ ಹರಿದು ಬರುತ್ತಿದೆ. ದೇಶದ ಯುದ್ಧವಿಮಾನಗಳು, ವಸ್ತು ಪ್ರದರ್ಶನ ಮಳಿಗೆ ಸೇರಿದಂತೆ ಹಲವು ಆಕರ್ಷಕಣೆಗಳು ಏರ್ ಶೋನಲ್ಲಿ ಜನರನ್ನು ಕೈಬೀಸಿ ಕರೆಯುತ್ತಿದೆ.
ಯಲಹಂಕಾ ವಾಯುನೆಲೆಯಲ್ಲ ಸಾಗರೋಪಾದಿಯಲ್ಲಿ ಜನರು ಆಗಮಿಸುತ್ತಿರುವ ಕಾರಣ ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಟ್ರಾಫಿ ಜಾಮ್ ಸಂಭವಿಸಿದೆ. ರಸ್ತೆಗಳು ವಾಹನಗಳಿಂದ ತುಂಬಿ ತುಳುಕುತ್ತಿದೆ. ಇದರಿಂದ ಜನರು ಹೈರಾಣಾದರು.
ಆ್ಯಕ್ಸಿಡೆಂಟಲ್, ಕ್ರಾಸ್ ಲೇವಲ್ ಪ್ರದರ್ಶನ ನೀಡಿದ ಸೂರ್ಯಕಿರಣದ 9 ಏರ್‌ಕ್ರಾಫ್ಟ್ ಸೇರಿದಂತೆ ಇತರ ಏರ್‌ಕ್ರಾಫ್ಟ್ ಆಗಸದಲ್ಲಿ ಚಿತ್ತಾರ ಬರೆಯಿತು. ಯುದ್ಧವಿಮಾನಗಳ ಶಬ್ದವೇ ಆಗಮಿಸಿದ್ದವರನ್ನು ರೋಮಾಂಚನಗೊಳಿಸಿತು.
ಭಾರತ ನಿರ್ಮಿಸಿದ ತೇಜಸ್ ಹೆಲಿಕಾಪ್ಟರ್‌ಗೆ ವಿದೇಶಗಳಲ್ಲಿ ಭಾರಿ ಬೇಡಿಕೆ ಇದೆ. ಈ ತೇಜಸ್ ಅತೀವ ಹೆಮ್ಮೆಯೊಂದಿಗೆ ಆಗಸದಲ್ಲಿ ಸಾಹಸ ಪ್ರದರ್ಶಿಸಿತು. ತೇಜಸ್ ಲಘು ಯುದ್ದವಿಮಾನಕ್ಕೆ ಮಲೇಷಿಯಾ ಸೇರಿದಂತೆ ಹಲವು ದೇಶಗಳಿಂದ ಬೇಡಿಕೆ ವ್ಯಕ್ತವಾಗಿದೆ.
ಆಗಸದಲ್ಲಿ ಯುದ್ದವಿಮಾನಗಳ ಸಾಹಸ ಸೆರೆಹಿಡಿಯಲು ಜನರು ಮುಗಿಬಿದ್ದರು. ಸುಂದರ ಕ್ಷಣಗಳನ್ನು ಮೊಬೈಲ್ ಹಾಗೂ ಕ್ಯಾಮೆರಾ ಮೂಲಕ ಸೆರೆಹಿಡಿದರು. ಇನ್ನು ಮಕ್ಕಳು ಕೂಡ ಏರೋ ಇಂಡಿಯಾ ಶೋ ಅತೀಯಾಗಿ ಸಂಭ್ರಮಿಸಿದ್ದಾರೆ.
ವಿಮಾನಗಳ ಸಾಹಸ ಪ್ರದರ್ಶನ ಒಂದೆಡೆಯಾದರೆ ಮತ್ತೊಂದೆಡೆ ಮಾದರಿ ವಿಮಾನಗಳು, ಡ್ರೋನ್ ಸೇರಿದಂತೆ ಇತರ ಉತ್ಪನ್ನಗಳ ವಸ್ತು ಪ್ರದರ್ಶನ ಜನರ ಗಮನಸೆಳೆಯಿತು. ಮಳಿಗೆಗೆ ಬೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.
ಅಮೇರಿಕಾ ಯುದ್ಧವಿಮಾನಗಳ ಕೂಡ ಏರೋ ಇಂಡಿಯಾ ಶೋದಲ್ಲಿ ಪಾರಮ್ಯ ಮೆರೆಯಿತು. ಯುದ್ಧವಿಮಾನ ಎಫ್-16, ಎಫ್-35ಎ, ಎಫ್-35 ಯುದ್ಧವಿಮಾನ ಕೂಡ ಅಬ್ಬರಿಸಿತು