6 ಕ್ರಿಮಿನಲ್ ಕೇಸ್ ಮುಚ್ಚಿಟ್ಟ ದೀದಿ, ನಾಮಪತ್ರ ಅಸಿಂಧುಗೊಳಿಸಲು ಆಯೋಗಕ್ಕೆ ಬಿಜೆಪಿ ದೂರು!

Published : Mar 15, 2021, 05:49 PM IST

ಪಶ್ಚಮ ಬಂಗಾಳ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಿಂದ ಸ್ಪರ್ಧಿಸುತ್ತಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈಗಾಗಲೇ ನಾಮಪತ್ರ ಸಲ್ಲಿಸಿದ್ದಾರೆ. ಆದರೆ ಮಮತಾ ತಮ್ಮ ನಾಮಪತ್ರದಲ್ಲಿ ಸುಳ್ಳು ಹೇಳಿದ್ದಾರೆ ಎಂದು ಆರೋಪಿಸಿರುವ ಬಿಜೆಪಿ ನಾಮಪತ್ರ ರದ್ದುಗೊಳಿಸಲು ಆಗ್ರಹಿಸಿದೆ. ದೀದಿ ಹೇಳಿದ ಸುಳ್ಳಿನ ವಿವರವನ್ನೂ ಬಿಜೆಪಿ ನೀಡಿದೆ.

PREV
19
6 ಕ್ರಿಮಿನಲ್ ಕೇಸ್ ಮುಚ್ಚಿಟ್ಟ ದೀದಿ, ನಾಮಪತ್ರ ಅಸಿಂಧುಗೊಳಿಸಲು ಆಯೋಗಕ್ಕೆ ಬಿಜೆಪಿ ದೂರು!

ಪಂಚ ರಾಜ್ಯಗಳ ಚುನಾವಣೆ ಸಮೀಪಿಸುತ್ತಿದಂತೆ ರಾಜಕೀಯ ಪಕ್ಷಗಳ ಕೆಸರೆರಚಾಟ ಹೆಚ್ಚಾಗುತ್ತಿದೆ. ಆದರೆ ಪಶ್ಚಿಮ ಬಂಗಾಳದಲ್ಲಿ ವಾಕ್ಸಮರ, ಟೀಕೆ, ತಿರುಗೇಟುಗಳು ಮಾತ್ರವಲ್ಲ, ಇದರ ಜೊತೆಗೆ ಗುದ್ದಾಟ, ಜಟಾಪಟಿ ಹೈಡ್ರಾಮ ಕೂಡ ಹೆಚ್ಚಾಗಿದೆ. 

29

ಇದೀಗ ನಂದಿಗ್ರಾಮ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ನಾಮಪತ್ರ ಸಲ್ಲಿಸಿರುವ ಮಮತಾ ಬ್ಯಾನರ್ಜಿ ಚುನಾವಣಾ ಆಯೋಗಕ್ಕೆ ಸುಳ್ಳು ಹೇಳಿದ್ದಾರೆ. ತಮ್ಮ ಕ್ರಿಮಿನಲ್ ಕೇಸ್ ವಿಚಾರ ಮುಚ್ಚಿಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಸುವೇಂದು ಅಧಿಕಾರಿ ಆರೋಪಿಸಿದ್ದಾರೆ.

39

ಮಮತಾ ವಿರುದ್ಧ ನಂದಿಗ್ರಾಮದಲ್ಲಿ ಸ್ಪರ್ಧಿಸುತ್ತಿರುವ ಸುವೇಂದು ಅಧಿಕಾರಿ, ಮಮತಾ ನಾಮಪತ್ರದಲ್ಲಿನ ದೋಷಗಳನ್ನು, ತಪ್ಪುಗಳನ್ನು ಹುಡುಕಿದ್ದಾರೆ. ಇಷ್ಟೇ ಅಲ್ಲ ಆಯೋಗ ಮನವಿ ಮಾಡಿದ್ದಾರೆ.

49

ಮಮತಾ ಬ್ಯಾನರ್ಜಿ ವಿರುದ್ಧ 6 ಕ್ರಿಮಿನಲ್ ಪ್ರಕರಣಗಳು ಚಾಲ್ತಿಯಲ್ಲಿದೆ. ಇದರಲ್ಲಿ 5 ಪ್ರಕರಣಗಳು ಅಸ್ಸಾಂನಲ್ಲಿ ದಾಖಲಾಗಿದ್ದರೆ, 2008ರಲ್ಲಿ ಕೋಲ್ಕತಾದಲ್ಲಿ ಒಂದು ಪ್ರಕರಣ ದಾಖಲಾಗಿದೆ ಎಂದು ಸುವೆಂದು ಅಧಿಕಾರಿ ಹೇಳಿದ್ದಾರೆ.

59

ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ನಾಮಪತ್ರದಲ್ಲಿ ಬಾಕಿ ಇರುವ ಪ್ರಕರಣಗಳ ಕುರಿತು ಮಾಹಿತಿ ನೀಡಬೇಕು. ಸುಪ್ರೀಂ ಕೋರ್ಟ್ ಈ ಕುರಿತು ಮಹತ್ವದ ತೀರ್ಪು ನೀಡಿದೆ.

69

ಕೇಸ್ ನಂಬರ್ 286/2018 ಪ್ರಕರಣದಲ್ಲಿ ಸೆಕ್ಷನ್ 20B, 153A and 198 ಅಡಿಯಲ್ಲಿ ಅಸ್ಸಾಂನ ಗೀತಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿದೆ.. ಅಸ್ಸಾಂನ ಪಾನ್ ಬಜಾರ್ ಪೊಲೀಸ್ ಠಾಣೆಯಲ್ಲಿನ ಕೇಸ್ ನಂಬರ್ 466/2018 ,

79

ಅಸ್ಸಾಂನ ಜಾಗಿರೋಡ್ ಪೊಲೀಸ್ ಠಾಣೆಯಲ್ಲಿನ ಕೇಸ್ ನಂ.288/2018, ಇನ್ನು ಉತ್ತರ ಲಖಿಪುಂರ ಸರ್ದಾರ್ ಪೊಲೀಸ್ ಠಾಣೆಯಲ್ಲಿ ಮಮತಾ ಮೇಲೆ 832/2018 ಕೇಸ್ ನಂಬರ್ ಅಡಿ ಪ್ರಕರಣ ದಾಖಲಾಗಿದೆ.

89

ಉದರ್‌ಬಾಂಡ್ ಪೊಲೀಸ್ ಠಾಣೆಯಲ್ಲಿನ ಕೇಸ್ ನಂ 177/2018 ಅಡಿ ಪ್ರಕರಣ ದಾಖಲಾಗಿದೆ. ಇನ್ನು 2008ರಲ್ಲಿ ಸಿಬಿಐ  ಮಮತಾ ಬ್ಯಾನರ್ಜಿ ವಿರುದ್ಧ ಕೋಲ್ಕತಾದಲ್ಲಿರುವ ಕೇಸ್ ನಂ RC 01020008A0023 / 2008.

99

ಸುಳ್ಳು ದಾಖಲೆ ನೀಡಿದ ಮಮತಾ ಬ್ಯಾನರ್ಜಿ ನಾಪಪತ್ರ ಅಸಿಂಧುಗೊಳಿಸಬೇಕು ಎಂದು ಸುವೆಂದು ಅಧಿಕಾರಿ ಚುನಾವಣಾ ಆಯೋಗದ ಕದ ತಟ್ಟಿದ್ದಾರೆ.

click me!

Recommended Stories