ನವದೆಹಲಿ(ಮಾ. 14) ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಮತ್ತು ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ಒಟ್ಟಾಗಿ ಸಮಯ ಕಳೆದಿದ್ದಾರೆ. ಹಿರಿಯ ನಟ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಇದೊಂದು ಅದ್ಭುತ ಮತ್ತು ಕಲಿಕಾ ಅನುಭವ, ಯುವ ನಾಯಕನ ಜತೆ ಅನೇಕ ವಿಚಾರ ಚರ್ಚೆ ಮಾಡಿದೆ ಎಂದು ಅನುಪಮ್ ಹೇಳಿದ್ದಾರೆ. ಪುಸ್ತಕಗಳು, ಸಿನಿಮಾ, ರಾಜಕಾರಣ, ಭಾರತೀಯ ನಾಗರಿಕನ ನಿಜವಾದ ಸಂಭ್ರಮ ಹೀಗೆ ಹಲವು ವಿಚಾರಗಳನ್ನು ಮಾತನಾಡಿದೆವು ಎಂದು ತಿಳಿಸಿದ್ದಾರೆ. ಅನುಪಮ್ ಖೇರ್ ಅವರ ಪತ್ನಿ ಕಿರಣ್ ಖೇರ್ ಸಹ ಲೋಕಸಭಾ ಸದಸ್ಯೆ. ಬೆಂಗಳೂರು ದಕ್ಷಿಣ ಕ್ಷೇತ್ರವನ್ನು ಪ್ರತಿನಿಧಿಸುವ ತೇಜಸ್ವಿ ಸೂರ್ಯ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದ್ದಾರೆ. Bollywood actor anupam kher meets BJP MP Tejasvi surya photos goes viral ಯುವ ನಾಯಕನ ಜತೆ ಸಮಯ ಕಳೆದ ಖುಷಿ ಹಂಚಿಕೊಂಡ ಅನುಪಮ್ ಖೇರ್