ಮುಂಬೈನಲ್ಲಿ ಅಮಿತಾಬ್‌ ಬಚ್ಛನ್‌ಗೆ ರಾಖಿ ಕಟ್ಟಿದ ಮಮತಾ ಬ್ಯಾನರ್ಜಿ, ಬಾಳ್‌ ಠಾಕ್ರೆ ಫೋಟೋಗೆ ಕೈಮುಗಿದ ದೀದಿ!

Published : Aug 30, 2023, 08:32 PM ISTUpdated : Aug 30, 2023, 08:36 PM IST

ಇಂಡಿ ಒಕ್ಕೂಟದ ಮೂರನೇ ಸಭೆಗಾಗಿ ಮುಂಬೈಗೆ ಆಗಮಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಾಲಿವುಡ್‌ನ ಬಿಗ್‌ ಬಿ ಅಮಿತಾಭ್‌ ಬಚ್ಛನ್‌ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆ ಅವರನ್ನು ಭೇಟಿಯಾಗಿ ರಾಖಿ ಕಟ್ಟಿದರು.

PREV
19
ಮುಂಬೈನಲ್ಲಿ ಅಮಿತಾಬ್‌ ಬಚ್ಛನ್‌ಗೆ ರಾಖಿ ಕಟ್ಟಿದ ಮಮತಾ ಬ್ಯಾನರ್ಜಿ, ಬಾಳ್‌ ಠಾಕ್ರೆ ಫೋಟೋಗೆ ಕೈಮುಗಿದ ದೀದಿ!

ಇಂಡಿ ಒಕ್ಕೂಟದ ಸಭೆಗಾಗಿ ಮುಂಬೈಗೆ ಆಗಮಿಸಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಶಿವಸೇನೆಯ ಸಂಸ್ಥಾಪಕ ಬಾಳ್‌ ಠಾಕ್ರೆ ಅವರ ನಿವಾಸಕ್ಕೆ ಭೇಟಿ ನೀಡಿ, ಅವರ ಫೋಟೋಗೆ ನಮಸ್ಕರಿಸಿದರು,

29

ಮಾತೋಶ್ರಿಯಲ್ಲಿ ಠಾಕ್ರೆ ಕುಟುಂಬವನ್ನು ಭೇಟಿ ಮಾಡಿದ ಬಳಿಕ ಮಮತಾ ಬ್ಯಾನರ್ಜಿ ಜುಹು ಬೀಚ್‌ನಲ್ಲಿರುವ ಬಾಲಿವುಡ್‌ ನಟ ಅಮಿತ್‌ ಬಚ್ಛನ್‌ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿದರು.

39

ಮಾತೋಶ್ರೀಯಲ್ಲಿ ಮಮತಾ ಬ್ಯಾನರ್ಜಿ ಇಂಡಿ ಒಕ್ಕೂಟದ ಭಾಗವಾಗಿರುವ ಶಿವಸೇನೆ ಉದ್ಧವ್‌ ಠಾಕ್ರೆ ಬಣದ ಮುಖ್ಯಸ್ಥ ಹಾಗೂ ಮಹಾರಾಷ್ಟ್ರ ಮಾಜಿ ಸಿಎಂ ಉದ್ಧವ್‌ ಠಾಕ್ರೆಗೆ ರಕ್ಷಾಬಂಧನದ ನಿಮಿತ್ತ ರಾಖಿ ಕಟ್ಟಿದರು.

49

ಈ ವೇಳೆ ಉದ್ಧವ್‌ ಠಾಕ್ರೆ ಅವರ ಪತ್ನಿ ರಶ್ಮಿ ಠಾಕ್ರೆ ಕೂಡ ಜೊತೆಯಲ್ಲಿದ್ದರು. ಮಾತೋಶ್ರೀಯಲ್ಲಿ ಕೆಲ ಸಮಯ ಕಳೆದ ಮಮತಾ ಬ್ಯಾನರ್ಜಿ ಬಾಳ್‌ ಠಾಕ್ರೆ ಅವರೊಂದಿಗಿನ ದಿನಗಳನ್ನು ನೆನೆದುಕೊಂಡಿದ್ದಾರೆ.

59

ಇಂಡಿ ಒಕ್ಕೂಟದಲ್ಲಿ ಟಿಎಂಸಿ ಹಾಗೂ ಉದ್ಧವ್‌ ಠಾಕ್ರೆ ಅವರ ಶಿವಸೇನೆ ಭಾಗವಾಗಿದೆ. ಮುಂಬೈನಲ್ಲಿ ಆಗಸ್ಟ್‌ 31 ಹಾಗೂ ಸೆಪ್ಟೆಂಬರ್‌ 1 ರಂದು ಈ ಒಕ್ಕೂಟದ ಮೂರನೇ ಸಭೆ ನಡೆಯಲಿದೆ.

69

ಉದ್ಧವ್‌ ಠಾಕ್ರೆ ಮನೆಗೆ ಭೇಟಿ ನೀಡುವ ಮುನ್ನ ಮಮತಾ ಬ್ಯಾನರ್ಜಿ, ಜುಹು ಬೀಚ್‌ನಲ್ಲಿ ಅಮಿತಾಬ್‌ ಅವರ ಇಡೀ ಕುಟುಂಬವನ್ನು ಭೇಟಿ ಮಾಡಿದ್ದಾರೆ.

79

ಈ ವೇಳೆ ನಟ ಅಭಿಷೇಕ್‌ ಬಚ್ಛನ್‌, ಮಮತಾ ಬ್ಯಾನರ್ಜಿ ಅವರಿಗೆ ಕೈಮುಗಿದು ತಮ್ಮ ನಿವಾಸಕ್ಕೆ ಸ್ವಾಗತ ಮಾಡಿದರು.ಪುತ್ರಿ ಆರಾಧ್ಯ ಹಾಗೂ ಪತ್ನಿ ಐಶ್ವರ್ಯಾ ಈ ವೇಳೆ ಜೊತೆಯಲ್ಲಿದ್ದರು.

89

ಅಮಿತಾಭ್‌ ಬಚ್ಛನ್‌ ಅವರಿಗೆ ರಾಖಿ ಕಟ್ಟಿದ ಮಮತಾ ಬ್ಯಾನರ್ಜಿ, ನನಗೆ ಅಮಿತಾಭ್‌ ಅವರೇ ಭಾರತ ರತ್ನ ಇದ್ದಂತೆ ಎಂದು  ಹೇಳಿದ್ದಾರೆ.

99

ನಿವಾಸಕ್ಕೆ ಆಗಮಿಸಿದ ಮಮತಾ ಬ್ಯಾನರ್ಜಿ ಅವರನ್ನು ಅಮಿತಾಬ್‌ ಬಚ್ಛನ್‌ ಅವರ ಪತ್ನಿ ಜಯಾ ಬಚ್ಚನ್‌ ತಬ್ಬಿಕೊಂಡು ಸ್ವಾಗತಿಸಿದರು. 

Read more Photos on
click me!

Recommended Stories