ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಾಗಿ ಖ್ಯಾತ ರಾಜಕಾರಣಿಗಳಾದವರು ಇವರು!

Published : Aug 28, 2023, 03:12 PM ISTUpdated : Aug 28, 2023, 03:17 PM IST

ನಾಗರಿಕ ಸೇವೆಗಳಲ್ಲಿ ಕೆಲಸ ಮಾಡಿದ ಅನೇಕರು ತಮ್ಮ ಅಧಿಕಾರಾವಧಿ ಅಥವಾ ರಾಜೀನಾಮೆ ನೀಡಿದ ಬಳಿಕ ಪ್ರತಿಷ್ಠಿತ ರಾಜಕಾರಣಿಗಳು ಎನಿಸಿಕೊಂಡಿದ್ದಾರೆ. ರಾಜಕಾರಣಿಗಳಾಗಿ ಬದಲಾದ ಕೆಲ ನಾಗರಿಕ ಸೇವಕರ ಪಟ್ಟಿ ಇಲ್ಲಿದೆ.. 

PREV
19
ಐಎಎಸ್‌, ಐಪಿಎಸ್‌, ಐಎಫ್‌ಎಸ್‌ ಅಧಿಕಾರಿಗಳಾಗಿ ಖ್ಯಾತ ರಾಜಕಾರಣಿಗಳಾದವರು ಇವರು!

ನಾಗರಿಕ ಸೇವೆಗಳನ್ನು ಭಾರತದಲ್ಲಿ ಅತ್ಯುನ್ನತ ಶ್ರೇಣಿಯ ಉದ್ಯೋಗವೆಂದು ಪರಿಗಣಿಸಲಾಗಿದೆ. ಒಮ್ಮೆ ಒಬ್ಬ ವ್ಯಕ್ತಿಯು UPSC CSE ಅನ್ನು ಭೇದಿಸಿದರೆ, ಅವರನ್ನು ಸಂಪೂರ್ಣ ಗೌರವ, ಘನತೆಯಿಂದ ನೋಡಲಾಗುತ್ತದೆ. IAS, IPS ಅಥವಾ IFS ಅಧಿಕಾರಿಯಾಗಿರುವುದು ಅತ್ಯಂತ ಕಷ್ಟಕರವಾದ ಕೆಲಸಗಳಲ್ಲಿ ಒಂದಾಗಿದೆ. ಆದರೆ, ಇವರು ನಿವೃತ್ತರಾದ ನಂತರ ಅಥವಾ ಸ್ವಯಂ ರಾಜೀನಾಮೆ ಬಳಿಕ ಅನೇಕ ಸಂಭಾವ್ಯ ವೃತ್ತಿ ಆಯ್ಕೆಗಳನ್ನು ಆರಿಸಿಕೊಂಡಿದ್ದಾರೆ.ಈ ಪೈಕಿ, ಕೆಲವರು ಪ್ರತಿಷ್ಠಿತ ರಾಜಕಾರಣಿಗಳಾಗಿ ಹೊರಹೊಮ್ಮಿದರು. 

ರಾಜಕಾರಣಿಗಳಾಗಿ ಬದಲಾದ ಕೆಲ ನಾಗರಿಕ ಸೇವಕರ ಪಟ್ಟಿ ಇಲ್ಲಿದೆ.. 

29

ಡಾ. ಸುಬ್ರಹ್ಮಣ್ಯಂ ಜೈಶಂಕರ್
1977 ಬ್ಯಾಚ್‌ನ ಐಎಫ್‌ಎಸ್‌ ಅಧಿಕಾರಿಯಾದ ಇವರು 38 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಅವರು ಈ ಹಿಂದೆ ಜನವರಿ 2015 ರಿಂದ ಜನವರಿ 2018 ರವರೆಗೆ ವಿದೇಶಾಂಗ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದು, ನಂತರ, ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದಾರೆ ಮತ್ತು 5 ಜುಲೈ 2019 ರಿಂದ ರಾಜ್ಯಸಭೆಯಲ್ಲಿ ಸಂಸದರಾಗಿದ್ದಾರೆ.ಹಾಗೂ, 30 ಮೇ 2019 ರಿಂದ ಭಾರತ ಸರ್ಕಾರದ ವಿದೇಶಾಂಗ ವ್ಯವಹಾರಗಳ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
  

39

ಅಶ್ವಿನಿ ವೈಷ್ಣವ್
1994 ರಲ್ಲಿ, ಅಶ್ವಿನಿ ವೈಷ್ಣವ್ ಒಡಿಶಾ ಕೇಡರ್‌ನಲ್ಲಿ ಭಾರತೀಯ ಆಡಳಿತ ಸೇವೆ (IAS) ಗೆ ಸೇರಿದರು ಮತ್ತು ಒಡಿಶಾದಲ್ಲಿ ಕೆಲಸ ಮಾಡಿದ್ದಾರೆ. ನಂತರ, ಭಾರತೀಯ ಜನತಾ ಪಕ್ಷದ ಸದಸ್ಯರಾಗಿದ್ದು, 2019 ರಿಂದ ಒಡಿಶಾವನ್ನು ಪ್ರತಿನಿಧಿಸುತ್ತಿದ್ದಾರೆ. ಅವರು ಪ್ರಸ್ತುತ ರೈಲ್ವೆಯ 39 ನೇ ಸಚಿವರಾಗಿ, 55 ನೇ ಸಂವಹನ ಸಚಿವರಾಗಿ ಮತ್ತು 2021 ರಿಂದ ಭಾರತ ಸರ್ಕಾರದಲ್ಲಿ 2 ನೇ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವರಾಗಿ ಮತ್ತು ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

49

ರಾಜ್ ಕುಮಾರ್ ಸಿಂಗ್ 
ರಾಜ್‌ ಕುಮಾರ್‌ ಸಿಂಗ್ ಅವರು 1975 ರ ಬ್ಯಾಚ್ ಬಿಹಾರ ಕೇಡರ್ ಭಾರತೀಯ ಆಡಳಿತ ಸೇವೆಯ ಅಧಿಕಾರಿ ಮತ್ತು ಭಾರತದ ಮಾಜಿ ಗೃಹ ಕಾರ್ಯದರ್ಶಿಯಾಗಿದ್ದಾರೆ. ಇವರು ಬಿಜೆಪಿ ಸೇರಿದ ಬಳಿಕ ಪ್ರಸ್ತುತ ಭಾರತ ಸರ್ಕಾರದಲ್ಲಿ ಕೇಂದ್ರ ಕ್ಯಾಬಿನೆಟ್ ಮಂತ್ರಿ. ಅವರು ಮೇ 2014 ರಿಂದ ಬಿಹಾರದ ಅರ್ರಾಗೆ ಭಾರತೀಯ ಸಂಸತ್ತಿನ ಸದಸ್ಯರಾಗಿದ್ದಾರೆ. 

59

ಅಜಿತ್ ಜೋಗಿ

ಅಜಿತ್ ಜೋಗಿ 1968 ರಲ್ಲಿ ನಾಗರಿಕ ಸೇವೆಗಳನ್ನು ಭೇದಿಸಿ ಐಎಎಸ್ ಅಧಿಕಾರಿಯಾದರು. ಐಎಎಸ್ ಅಧಿಕಾರಿಯಾಗಿ ತಮ್ಮ ಅಧಿಕಾರಾವಧಿ ಪೂರ್ಣಗೊಳಿಸಿದ ನಂತರ ಇವರು ಕಾಂಗ್ರೆಸ್ ಪಕ್ಷಕ್ಕೆ ಸೇರಿದರು. ನಂತರ ಅವರು ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದರು.

69

ಮಣಿಶಂಕರ್ ಅಯ್ಯರ್

ಲಾಹೋರ್‌ನಲ್ಲಿ ಜನಿಸಿದ ಮಣಿಶಂಕರ್ ಅಯ್ಯರ್ ಬ್ಯಾಚ್ 1963 ರ IFS ಅಧಿಕಾರಿಯಾಗಿದ್ದರು. ಅವರು 1991 ರಲ್ಲಿ ತಮಿಳುನಾಡಿನ ಮೈಲಾಡುತುರೈನಿಂದ ಲೋಕಸಭೆಗೆ ಆಯ್ಕೆಯಾದರು. ಅಂದಿನಿಂದ ಅವರು ಅನೇಕ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
 

79

ಮೀರಾ ಕುಮಾರ್

ಮೀರಾ ಕುಮಾರ್ ಭಾರತದ ಮೊದಲ ಮಹಿಳಾ ಲೋಕಸಭಾ ಸ್ಪೀಕರ್. ಅವರು 2009 ರಿಂದ 2014 ರ ನಡುವೆ ಆ ಸ್ಥಾನವನ್ನು ಹೊಂದಿದ್ದರು. ಮೀರಾ ಕುಮಾರ್ ಅವರು 1973 ರಲ್ಲಿ ಸಿವಿಲ್ ಸೇವೆಗಳಿಗೆ ಸೇರಿದರು ಮತ್ತು ಒಂದು ದಶಕಕ್ಕೂ ಹೆಚ್ಚು ಕಾಲ IFS ಅಧಿಕಾರಿಯಾಗಿ ಸೇವೆ ಸಲ್ಲಿಸಿದರು. ಅವರು 1985 ರಲ್ಲಿ ಬಿಜ್ನೋರ್ ಉಪಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ಮತ್ತು ಮಾಯಾವತಿಯನ್ನು ಸೋಲಿಸುವ ಮೂಲಕ ಅಬ್ಬರದಿಂದ ರಾಜಕೀಯಕ್ಕೆ ಬಂದರು.
 

89

ಯಶವಂತ್ ಸಿನ್ಹಾ

ಬಿಹಾರ ಮೂಲದ ಯಶವಂತ್ ಸಿನ್ಹಾ 1960ರಲ್ಲಿ ಯುಪಿಎಸ್‌ಸಿ CSEಯಲ್ಲಿ ತೇರ್ಗಡೆಯಾಗಿ ಸುದೀರ್ಘ ಕಾಲ ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ನಂತರ 1984 ರಲ್ಲಿ, ಅವರು IAS ಹುದ್ದೆಗೆ ರಾಜೀನಾಮೆ ನೀಡಿದರು ಮತ್ತು ಜನತಾ ಪಕ್ಷದ ಅಡಿಯಲ್ಲಿ ಸಕ್ರಿಯ ರಾಜಕೀಯಕ್ಕೆ ಸೇರಿದರು.

99

ಸತ್ಯಪಾಲ್ ಸಿಂಗ್

ಸತ್ಯಪಾಲ್ ಸಿಂಗ್ ಮಹಾರಾಷ್ಟ್ರ ಕೇಡರ್‌ನ 1980 ರ ಬ್ಯಾಚ್‌ನ ಮಾಜಿ ಐಪಿಎಸ್ ಅಧಿಕಾರಿ. ಅವರು ಮುಂಬೈನ ಪೊಲೀಸ್ ಕಮಿಷನರ್ ಆಗಿ ಸೇವೆ ಸಲ್ಲಿಸಿದರು ಮತ್ತು 1990 ರ ದಶಕದಲ್ಲಿ ಮುಂಬೈನಲ್ಲಿ ಅಪರಾಧ ನಿರ್ಮೂಲನೆ ಮಾಡುವಲ್ಲಿ ಪಾತ್ರ ವಹಿಸಿದರು. ಮುಂಬೈ ಪೊಲೀಸ್ ಮುಖ್ಯಸ್ಥ ಹುದ್ದೆಗೆ ರಾಜೀನಾಮೆ ನೀಡಿದ ನಂತರ ಅವರು 2014 ರಲ್ಲಿ ಬಿಜೆಪಿ ಸೇರಿದ್ದಾರೆ. 
 

Read more Photos on
click me!

Recommended Stories