ಗಣತಂತ್ರ ದಿನದಂದು ವಿಶೇಷ ಪೇಟ ಧರಿಸಿದ ಮೋದಿ, ಈ ರಾಜವಂಶದೊಂದಿಗಿದೆ ಕನೆಕ್ಷನ್!

Published : Jan 26, 2021, 11:03 AM ISTUpdated : Jan 26, 2021, 11:29 AM IST

ಹಬ್ಬವನ್ನು ಗಡಿಯಲ್ಲಿರುವ ಸೈನಿಕರೊಂದಿಗೆ ಆಚರಿಸುವುದಿರಲಿ ಅಥವಾ ಗಣರಾಜ್ಯೋತ್ಸವ ಮತ್ತು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ವಿಭಿನ್ನ ಉಡುಗೆ ಧರಿಸುವುದಿರಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ವಿಭಿನ್ನ ಹಾಗೂ ವಿಶೇಷ ಶೈಲಿಗೆ ಹೆಸರುವಾಸಿಯಾಗಿದ್ದಾರೆ. ಪಿಎಂ ಮೋದಿ ಪ್ರತಿ ಬಾರಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಸದ್ಯ 72ನೇ ಗಣರಾಜ್ಯೋತ್ಸವದಂದೂ ಇಂತಹುದೇ ವಿಚಾರವಾಗಿ ಗಮನ ಸೆಳೆದಿದ್ದಾರೆ ಪಿಎಂ ಮೋದಿ ಈ ಬಾರಿ ವಿಶೇಷ ಪೇಟ ಧರಿಸಿದ್ದಾರೆ. ಈ ಪೇಟ ಅವರಿಗೆ ಜಾಮ್‌ನಗರ ರಾಜವಂಶದಿಂದ ಕೊಡುಗೆಯಾಗಿ ಸಿಕ್ಕಿದೆ.

PREV
17
ಗಣತಂತ್ರ ದಿನದಂದು ವಿಶೇಷ ಪೇಟ ಧರಿಸಿದ ಮೋದಿ, ಈ ರಾಜವಂಶದೊಂದಿಗಿದೆ ಕನೆಕ್ಷನ್!

2021: ಗಣರಾಜ್ಯೋತ್ಸವದಂದು ಪಿಎಂ ಮೋದಿ ಜಾಮ್‌ನಗರ ರಾಜವಂಸ್ಥರು ನೀಡಿದ ವಿಶೇಷ ಪೇಟ ಧರಿಸಿದ್ದರು. ಜಾಮ್‌ನಗರದ ರಾಜವಂಶ ಜಾಗತಿಕ ಮಟ್ಟದಲ್ಲಿ ಬಹಳ ಗೌರವ ಪಡೆದಿದೆ. ಇಲ್ಲಿನ ಮಹಾರಾಜ ಜಾಮ್ ಸಾಹಬ್ ದಿಗ್ವಿಜಯ್ ಸಿಂಗ್ ಎರಡನೇ ವಿಶ್ವ ಮಹಾ ಯುದ್ದದ ವೇಳೆ ಪೋಲ್ಯಾಂಡ್‌ನ 1000 ಮಕ್ಕಳನ್ನು ಕಾಪಾಡಿದ್ದರು. ಇದು ಅಂದಿನ ಯುದ್ಧ ಸಂದರ್ಭದಲ್ಲಿ ಮಾನವೀಯತೆ ತೋರಿದ ಕಾರ್ಯಗಳಲ್ಲಿ ಒಂದು.

27

2020: ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾದ ಬಳಿಕ 2020 ರಲ್ಲಿ 71ನೇ ಗಣರಾಜ್ಯೋತ್ಸವದಂದು ಮೋದಿ ಕೇಸರಿ ಪೇಟದಲ್ಲಿ ಕಂಡು ಬಂದಿದ್ದರು. ಅಂದು ಮೋದಿ ಬಹಳ ಆಕರ್ಷಕವಾಗಿ ಕಾಣಿಸುತ್ತಿದ್ದರು. ರಾಜಪಥದಲ್ಲಿ ಆಯೋಜಿಸಿದ್ದ ಪರೇಡ್‌ ಬಳಿಕ ಎಂದಿನಂತೆ ಜನರ ಬಳಿ ತೆರಳಿ ಮಾತನಾಡಿದ್ದರು.
 
37

2019: ಅಂದು ಮೋದಿ ಹಳದಿ ಹಾಗೂ ಕೆಂಪು ಬಣ್ಣದ ಪೇಟದಲ್ಲಿ ಕಂಗೊಳಿಸಿದ್ದರು. ಮೋದಿಯನ್ನು ಯಾವತ್ತೂ ಹೊಸ ಬದಲಾವಣೆಗೆ ನೆನಪಿಸಿಕೊಳ್ಳುತ್ತಾರೆ. ಅಂದು ಪಿಎಂ ಮೋದಿ ಪ್ರತಿ ಬಾರಿಯಂತೆ ಗ್ಯಾಲರಿಯಲ್ಲಿದ್ದ ಜನ ಸಾಮಾನ್ಯರ ಭೇಟಿಯಾಗಿ ಮಾತನಾಡಿದ್ದರು.

47

2018: ತಾವೆಲ್ಲಿ ಹೋದರೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಲ್ಲಿನ ಸಂಸ್ಕೃತಿ ಅರಿಯಲು ಯತ್ನಿಸುತ್ತಾರೆ ಎಂಬ ಮಾತಿದೆ. ಇದೇ ಮಾತಿನಂತೆ ಪಿಎಂ ಮೋದಿ 2018 ರಲ್ಲಿ ಕೇಸರಿ, ಹಸಿರು ಹಾಗೂ ಕೆಂಪು ಬಣ್ಣದ ಶಿರವಸ್ತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ಪಿಎಂ ಮೋದಿ ಪ್ರತಿ ಬಾರಿ ನಡೆಯುವ ಗಣರಾಜ್ಯೋತ್ಸವ ಹಾಗೂ ಸ್ವಾತಂತ್ರ್ಯೋತ್ಸವದಂದು ತಪ್ಪದೇ ಸಾಂಪ್ರದಾಯಿಕ ಉಡುಗೆ ಅದರಲ್ಲೂ ವಿಶೇಷವಾಗಿ ಪೇಟ ಧರಿಸುತ್ತಾರೆ.

57

2017: ಅಂದು ಪಿಎಂ ಮೋದಿ ಗುಲಾಬಿ ಬಣ್ಣದ ಪೇಟದಲ್ಲಿ ಕಾಣಿಸಿಕೊಂಡಿದ್ದರು. 

67

2016: 2016ರ ಗಣರಾಜ್ಯೋತ್ಸವದಂದು ಹಳದಿ ಬಣ್ಣದ ಪೇಟ ಧರಿಸಿದ್ದ ಮೋದಿ, ನೆಹರೂ ಸೂಟ್ ಧರಿಸಿದ್ದರು. 

77

2015: ಮೊದಲ ಬಾರಿ ದೇಶದ ಪ್ರಧಾನಿಯಾದ ಬಳಿಕ ನಡೆದಿದ್ದ ಗಣರಾಜ್ಯೋತ್ಸವದಂದು ಪಿಎಂ ಮೋದಿ ವಿಭಿನ್ನ ಶೈಲಿಯಲ್ಲಿ ಕಾಣಿಸಿಕೊಂಡಿದ್ದರು. ಅಂದು ಪಿಎಂ ಮೋದಿ ಗುಲಾಬಿ ಹಾಗೂ ಹಸಿರು ಬಣ್ಣದ ಜೋದ್ಪುರಿ ಪೇಟ ಧರಿಸಿದ್ದರು. 2015ರ ಗಣರಾಜ್ಯೋತ್ಸವದಂದು ಅಮೆರಿಕದ ಅಂದಿನ ಅಧ್ಯಕ್ಷರಾಗಿದ್ದ ಬರಾಕ್ ಒಬಾಮಾ ಅತಿಥಿಯಾಗಿ ಆಗಮಿಸಿದ್ದರು.

click me!

Recommended Stories