ಮಹಾಭಾರತವೂ ಸೇರಿ ಪ್ರಾಚೀನ ಯುದ್ಧಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ 8 ಪ್ರಾಣಿಗಳಿವು

Published : Sep 06, 2024, 05:02 PM IST

ಕೆಲವು ಪ್ರಾಣಿಗಳು ಮನುಷ್ಯನ ಜೀವನಾಡಿಯ ಭಾಗವಾಗಿವೆ. ಜೊತೆಗಾರನಾಗುವುದರಿಂದ ಹಿಡಿದು ಕಷ್ಟದ ಸಮಯದಲ್ಲಿ ಸಹಾಯಕ್ಕೆ ಧಾವಿಸುವವರೆಗೆ ಪ್ರಾಣಿಗಳು ಮನುಷ್ಯನಿಗೆ ಮಾಡಿದ ಸಹಾಯ ಅದ್ಭುತವಾದುದು. ಪ್ರಾಚೀನ ಕಾಲದಲ್ಲಿ ನಡೆಯುತ್ತಿದ್ದ ಯುದ್ಧಗಳಲ್ಲಿ ಕೆಲ ಪ್ರಾಣಿಗಳು ಯುದ್ಧದಲ್ಲಿ ಭಾಗಿಯಾಗುವ ಮೂಲಕ ಮನುಷ್ಯನಿಗೆ ನೆರವಾಗುತ್ತಿದ್ದವು. ಹೀಗೆ ಯುದ್ಧದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದ ಕೆಲ ಪ್ರಾಣಿಗಳ ಡಿಟೇಲ್ ಇಲ್ಲಿದೆ.

PREV
110
ಮಹಾಭಾರತವೂ ಸೇರಿ ಪ್ರಾಚೀನ ಯುದ್ಧಗಳಲ್ಲಿ ಮಹತ್ವದ ಪಾತ್ರ ವಹಿಸಿದ್ದ 8 ಪ್ರಾಣಿಗಳಿವು

ಪುರಾಣದಲ್ಲಿ ಯುದ್ಧಕ್ಕೂ ಪ್ರಾಣಿಗಳಿಗೂ ಮಹತ್ವದ ಸಂಬಂಧವಿದೆ. ಮಹಾಭಾರತದಿಂದ ಹಿಡಿದು ರಾಜ ಮಹರಾಜರ ಕಾಲದಲ್ಲಿನ ಯುದ್ಧದವರೆಗೆ ಅಷ್ಟೇ ಏಕೆ ಈಗ ನಡೆಯುತ್ತಿರುವ ಆಧುನಿಕ ಯುದ್ಧಗಳಲ್ಲೂ ಕೆಲ ಪ್ರಾಣಿಗಳು ಮಹತ್ವದ ಪಾತ್ರ ವಹಿಸಿವೆ. ಹೀಗೆ ಯುದ್ಧ ಕಾಲದಲ್ಲಿ ಮನುಷ್ಯನಿಗೆ ನೆರವಾದಂತಹ ಪ್ರಾಣಿಗಳ ವಿವರ ಇಲ್ಲಿದೆ. 

210

ಮೊದಲನೆಯದಾಗಿ ಆನೆಗಳು ಮಹಾಭಾರತ ಯುದ್ಧದಲ್ಲಿ ಭಾಗವಹಿಸಿದ ಉಲ್ಲೇಖವಿದೆ. ಈ ಯುದ್ಧದಲ್ಲಿ ಒಟ್ಟು 18 ಅಕ್ಷೌಹಿಣಿ ಬಲದ ಸೇನೆ ಭಾಗವಹಿಸಿತ್ತು. ಒಂದು ಅಕ್ಷೌಹಿಣಿಯಲ್ಲಿ 21,870 ಆನೆಗಳಿದ್ದವು. ಅಂದರೆ 18 ಅಕ್ಷೌಹಿಣಿ ಎಂದರೆ ಸುಮಾರು  3,93,660 ಆನೆಗಳು ಭಾಗಿಯಾಗಿದ್ದವು. ಈ ಆನೆಗಳು ಶತ್ರು ಸೈನ್ಯಗಳ ಮೇಲೆ ದಾಳಿ ಮಾಡಿ ಅಪಾರ ಹಾನಿಗೆ ಕಾರಣವಾಗುತ್ತಿದ್ದವು.

310

ನಂತರದ ಸ್ಥಾನದಲ್ಲಿ ಕುದುರೆಗಳು, ಅತೀವೇಗದ ಪಯಣಕ್ಕೆ ಹಾಗೂ ಶಕ್ತಿಗೆ ಹೆಸರುವಾಸಿ ಈ ಕುದುರೆಗಳು, ಅತೀ ವೇಗದಿಂದ ಮುನ್ನುಗುವುದಕ್ಕೆ ಹಾಗೂ ದಾಳಿ ಮಾಡುವುದಕ್ಕೆ ಈ ಕುದುರೆಗಳು ಮಹತ್ವದ ಪಾತ್ರ ವಹಿಸಿದ್ದವು.  ಮಹಾಭಾರತದ ಒಂದು ಅಕ್ಷೌಹಿಣಿಯಲ್ಲಿ 65,610 ಕುದುರೆಗಳಿದ್ದವು. ಹಾಗೂ ಒಟ್ಟಾಗಿ 11,80,980 ಕುದುರೆಗಳು ಭಾಗಿಯಾಗಿದ್ದವು.

410

ಹಾಗೆಯೇ ಒಂಟೆಗಳು, ಮಹಾಭಾರತದಲ್ಲಿ ಒಂಟೆಗಳ ಉಲ್ಲೇಖವಿಲ್ಲ, ಆದರೆ ಪ್ರಾಚೀನ ಯುದ್ಧಗಳಲ್ಲಿ ಮರುಭೂಮಿಯ ಈ ಪ್ರಾಣಿಗಳು ಮಹತ್ವದ ಪಾತ್ರವ ವಹಿಸಿವೆ. ಮರುಭೂಮಿಯಲ್ಲಿ ಯುದ್ಧ ಸಾಮಗ್ರಿಗಳ ಸಾಗಣೆ ಒಂಟೆಗಳ ಮೂಲಕವೇ ನಡೆಯುತ್ತಿತ್ತು. 

510

ಶ್ವಾನಗಳು ಪ್ರಾಚೀನ ಯುದ್ಧಗಳು ಮಾತ್ರವೇಕೆ ಈಗಲೂ ಶ್ವಾನಗಳು ಯುದ್ಧದ ಹೊರತಾಗಿ ದೇಶ ರಕ್ಷಣೆಯ ಮಹತ್ವದ ಕಾರ್ಯದಲ್ಲಿ ಶ್ವಾನದಳದ ಹೆಸರಿನಲ್ಲಿ ತೊಡಗಿಸಿಕೊಂಡಿವೆ.

610

ನಿಷ್ಠೆಗೆ ಹಾಗೂ ಸ್ನೇಹಕ್ಕೆ ಹೆಸರಾದ ಶ್ವಾನಗಳನ್ನು ಪ್ರಾಚೀನ ಕಾಲದಲ್ಲಿ ಸೇನಾ ಕ್ಯಾಂಪ್‌ಗಳನ್ನು ಕಾಯಲು, ಮಹತ್ವದ ಸಂದೇಶ ರವಾನಿಸಲು ಬಳಸಲಾಗುತ್ತಿತ್ತು.

710

ಪಾರಿವಾಳಗಳು ಪ್ರಾಚೀನ ಕಾಲದಲ್ಲಿ ಸಂವಹನ ಕಾರ್ಯಕ್ಕೆ ಹೆಸರುವಾಸಿಯಾದಂತಹ ಹಕ್ಕಿಗಳು, ಬಹಳ ದೂರಕ್ಕೆ ತಲುಪಬೇಕಾದ ಮಹತ್ವದ ಸಂದೇಶಗಳನ್ನು ಇವುಗಳು ತಲುಪಿಸುತ್ತಿದ್ದವು.

810

ಹೇಸರಗತ್ತೆಗಳು: ಕಷ್ಟಕರವಾದ ದುರ್ಗಮ ಪ್ರದೇಶಗಳಲ್ಲಿ ಭಾರವಾದ ವಸ್ತುಗಳನ್ನು ಸಾಗಿಸಲು ಹಾಗೂ ಸೈನಿಕರ ಸಾಗಣೆಗೆ ಈ ಹೇಸರಗತ್ತೆಗಳು ನೆರವಾಗುತ್ತಿದ್ದವು, ಇವುಗಳ ನೆರವು ಅಲ್ಲಿ ಅನಿವಾರ್ಯವಾಗಿದ್ದವು.

910

ಗೂಳಿಗಳು: ಗೂಳಿಗಳು ಭಾರವಾದ ಎಂಜಿನ್‌ಗಳನ್ನು ಎಳೆಯಲು ಸಹಾಯ ಮಾಡುತ್ತಿದ್ದವು, ಕೋಟೆಗೆ ಮುತ್ತಿಗೆ ಹಾಕುವ ಕೆಲಸ ಕೋಟೆ ನಿರ್ಮಾಣ ಕಾರ್ಯದಲ್ಲಿ ಇವುಗಳು ನೆರವಾಗುತ್ತಿದ್ದವು

1010

ಕತ್ತೆಗಳು: ಭಾರ ಹೊರುವುದಕ್ಕೆ ಪ್ರಸಿದ್ಧವಾಗಿರುವ ಕತ್ತೆಗಳು  ಕೂಡ ದುರ್ಗಮ ಪ್ರದೇಶಗಳಲ್ಲಿ ಸರಕು ಸಾಗಣೆಗೆ ನೆರವಾಗುತ್ತಿದ್ದವು. 
 

Read more Photos on
click me!

Recommended Stories