ಇನ್‌ಸ್ಟಾಗ್ರಾಂ ಗೆಳೆಯನಿಗಾಗಿ ಚೆನ್ನೈಗೆ ಬಂದ 17ರ ಅಪ್ರಾಪ್ತೆ; ಅಪಾಯದಿಂದ ಪಾರಾಗಿದ್ದೇ ರೋಚಕ

Published : Jun 02, 2025, 11:06 AM IST

ಮೂರು ಯುವಕರು ಬಂದು ಪರಿಚಯ ಮಾಡಿಕೊಂಡರು. ಸಹಾಯ ಮಾಡುವುದಾಗಿ ಹೇಳಿ ಹುಡುಗಿಯನ್ನು ಬ್ರಾಡ್‌ವೇ ಬಳಿಯ ಖಾಲಿ ಕಟ್ಟಡಕ್ಕೆ ಕರೆದುಕೊಂಡು ಹೋಗಿದ್ದರು.

PREV
14

ಇನ್‌ಸ್ಟಾಗ್ರಾಮ್ ಫ್ರೆಂಡ್ ಭೇಟಿಗೆ ಬಂದ 17ರ ಬಾಲಕಿಗೆ ಸ್ಥಳೀಯರು ಮತ್ತು ಪೊಲೀಸರು ಸಹಾಯ ಮಾಡಿದ್ದಾರೆ. ತಿರುವಣ್ಣಾಮಲೈನಿಂದ ಚೆನ್ನೈಗೆ ಅಪ್ರಾಪ್ತೆ ಬಂದಿದ್ದಳು.

24

ಗೆಳೆಯನನ್ನು ಹುಡುಕಿಕೊಂಡು ಬಂದಿದ್ದ ಹುಡುಗಿಗೆ ಸ್ಥಳೀಯರ ಸಹಾಯದಿಂದ ಅಪಾಯದಿಂದ ಪಾರಾಗಿದ್ದಾಳೆ. ಇನ್‌ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಚೆನ್ನೈಯ ಯುವಕನನ್ನು ಭೇಟಿಯಾಗಲು ಬಂದಿದ್ದಳು. ಯುವಕ ಹುಡುಗಿಯನ್ನು ಭೇಟಿಯಾಗಲು ಚೆನ್ನೈಗೆ ಬರುವಂತೆ ಹೇಳಿದ್ದನು.

34

ಗೆಳೆಯನ ಮಾತು ನಂಬಿ ಚೆನ್ನೈಗೆ ಹುಡುಗಿ ಬಂದಿದ್ದಳು. ಆದರೆ ಯುವಕ ಬರಲಿಲ್ಲ. ಕಾಯುತ್ತಿದ್ದ ಹುಡುಗಿ ಆತಂಕಕ್ಕೆ ಒಳಗಾದಳು. ಆಗ ಮೂರು ಯುವಕರು ಬಂದು ಪರಿಚಯ ಮಾಡಿಕೊಂಡರು. ಸಹಾಯ ಮಾಡುವುದಾಗಿ ಹೇಳಿ ಹುಡುಗಿಯನ್ನು ಬ್ರಾಡ್‌ವೇ ಬಳಿಯ ಖಾಲಿ ಕಟ್ಟಡಕ್ಕೆ ಕರೆದೊಯ್ದಿದ್ದಾರೆ.

44

ಅಪ್ರಾಪ್ತೆಯನ್ನು ಯುವಕರು ಖಾಲಿ ಕಟ್ಟಡಕ್ಕೆ ಕರೆದೊಯ್ಯುತ್ತಿರೋದನ್ನು ಗಮನಿಸಿದ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ಹುಡುಗಿಯನ್ನು ರಕ್ಷಿಸಿದರು. ಹುಡುಗಿಯ ಪೋಷಕರಿಗೆ ತಿಳಿಸಲಾಗಿದೆ. ಯುವಕನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಸದ್ಯ ಪೊಲೀಸರು ಇನ್‌ಸ್ಟಾಗ್ರಾಂ ಚಾಟ್ ಪರಿಶೀಲಿಸುತ್ತಿದ್ದಾರೆ.

Read more Photos on
click me!

Recommended Stories