ಮಸೂದೆ ಹಿಂಪಡೆಯಲ್ಲ, ಸುಪ್ರೀಂ ಕೋರ್ಟ್‌ಗೆ ಹೋಗಿ; ಈ ಮಾತಿನಿಂದ ವಿಫಲವಾಯ್ತಾ ಸಂಧಾನ?

Published : Jan 04, 2021, 08:52 PM IST

ಕೇಂದ್ರ ಸರ್ಕಾರ ಮತ್ತು ರೈತರ ಜೊತೆಗಿನ 7ನೇ ಸುತ್ತಿನ ಸಂಧಾನ ವಿಫಲಗೊಂಡಿದೆ. ಈ ಮೂಲಕ ರೈತ ಪ್ರತಿಭಟನೆ ಸದ್ಯಕ್ಕೆ ನಿಲ್ಲುವ ಲಕ್ಷಣಗಳು ಗೋಚರಿಸುತ್ತಿಲ್ಲ. ಕೇಂದ್ರ ಸಚಿವರು ಹಾಗೂ 41 ರೈತ ಸಂಘಟನೆಗಳ ಮುಖಂಡರ ನಡೆಸಿದ ಮಾತುಕತೆ ವಿಫಲಕ್ಕೆ ಕಾರಣವಾದ ಪ್ರಮುಖ ಅಂಶ ಏನು ? ಇಲ್ಲಿದೆ ವಿವರ.  

PREV
18
ಮಸೂದೆ ಹಿಂಪಡೆಯಲ್ಲ, ಸುಪ್ರೀಂ ಕೋರ್ಟ್‌ಗೆ ಹೋಗಿ; ಈ ಮಾತಿನಿಂದ ವಿಫಲವಾಯ್ತಾ ಸಂಧಾನ?

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಕೃಷಿ ಮಸೂದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ 7ನೇ ಸುತ್ತಿನ ಮಾತುಕತೆಯೂ ವಿಫಲಗೊಂಡಿದೆ. ಇದಕ್ಕೆ ಕಾರಣವೇನು ಅನ್ನೋ ಕುತೂಹಲ ಸಭೆಯ ಪ್ರಮುಖಾಂಶಗಳು ಉತ್ತರ ನೀಡುತ್ತಿದೆ.

28

ರೈತರು ಕೇಂದ್ರದ 3 ಕೃಷಿ ಮಸೂದೆ ಹಿಂಪಡೆಯಲೇಬೇಕು. ಅಲ್ಲಿವರೆಗೆ ಹೋರಾಟ ಮುಂದುವರಿಯಲಿದೆ ಎಂದು ರೈತರು ಪಟ್ಟು ಹಿಡಿದಿದ್ದಾರೆ. ಆದರೆ ಕೇಂದ್ರ ಸರ್ಕಾರ ಕೃಷಿ ಮಸೂದೆ ವಾಪಸ್ ಪಡೆಯಲು ಸಾಧ್ಯವಿಲ್ಲ ಎಂದಿದೆ.

38

ಸಾಕಷ್ಟು ಚರ್ಚಿಸಿ, ತಜ್ಞರು, ಕೃಷಿ ಸಾಧಕರು ಸೇರಿದಂತೆ ಸಮಿತಿ ರಚಿಸಿದ ವರದಿ ಆಧರಿಸಿ ಮಸೂದೆ ತಂದಿದ್ದೇವೆ. ಇದರಲ್ಲಿನ ತಪ್ಪುಗಳನ್ನು ಹೇಳಿ, ತಿದ್ದುಪಡಿ ಮಾಡಲು ಕೇಂದ್ರ ತಯಾರಿದೆ. ಇದರ ಬದಲು ಸಂಪೂರ್ಣ ಮಸೂದೆ ಹಿಂಪಡೆಯಲು ಸಾಧ್ಯವಿಲ್ಲ ಎಂದಿದೆ.

48

ಮಸೂದೆ ಹಿಂಪಡೆಯುವುದೇ ನಿಮ್ಮ ಬೇಡಿಕೆಯಾಗಿದ್ದರೆ ಸುಪ್ರೀಂ ಕೋರ್ಟ್‌ಗೆ ಹೋಗಿ ಎಂದು ಕೃಷಿ ಸಚಿ ನರೇಂದ್ರ ಸಿಂಗ್ ತೋಮರ್ ಸಭೆಯಲ್ಲಿ ಹೇಳಿದ್ದಾರೆ ಎಂದು ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ ಮುಖಂಡ ಸರ್ವಾನ್ ಸಿಂಗ್ ಪಂದೆರ್ ಹೇಳಿದ್ದಾರೆ.

58

ಸಭೆ ನಡುವೆ ಭೋಜನಕ್ಕೆ ರೈತ ಮುಖಂಡರನ್ನು ಆಹ್ವಾನಿಸಲಾಯಿತು. ಆದರೆ ರೈತರು ನಿಮ್ಮ ಊಟ ನಿಮಗೆ, ನಾವು ತಂದಿರುವ ಊಟ ನಮಗೆ ಎಂದು ಸಚಿವರ ಜೊತೆ ಭೋಜನ ಸವಿಯಲು ನಿರಾಕರಿಸಿದ್ದಾರೆ.

68

ಸಭೆ ವಿಫಲಗೊಂಡ ಕಾರಣ ಜನವರಿ 26 ರ ಗಣರಾಜ್ಯೋತ್ಸವ ದಿನದಂದು ಕಿಸಾನ್ ಪರೇಡ್ ಮತ್ತಷ್ಟು ತೀವ್ರಗೊಳಿಸಲು ರೈತ ಸಂಘಟನೆಗಳು ನಿರ್ಧರಿಸಿದೆ. ಇದಕ್ಕಾಗಿ ಯುವಕರಿಗೆ ಕರೆ ನೀಡಿದೆ.

78

3 ಕೃಷಿ ಮಸೂದೆಗಳಲ್ಲಿರುವ ತಪ್ಪುಗಳನ್ನು ಹೇಳಲು ರೈತರು ಮುಂದಾಗುತ್ತಿಲ್ಲ. ಬದಲಾಗಿ ಸಂಪೂರ್ಣ ಮಸೂದೆ ವಾಪಸ್ ಬೇಡಿಕೆ ಮುಂದಿಡುತ್ತಿದ್ದಾರೆ. ಇತ್ತ ಕೇಂದ್ರ ಮಸೂದೆ ವಾಪಸ್ ಪಡೆಯಲು ಸಾಧ್ಯವೇ ಇಲ್ಲ ಎಂದಿದೆ. ಹೀಗಾಗಿ ಸಂಧಾನ ವಿಫಲಗೊಂಡಿದೆ.

88

ನವೆಂಬರ್  26 ರಿಂದ ದೆಹಲಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬೇಡಿಕೆ ಈಡೇರುವವರೆಗೆ ಪ್ರತಿಭಟನೆ ನಿಲ್ಲಿಸುವುದಿಲ್ಲ ಎಂದು ರೈತ ಮುಖಂಡರು ಹೇಳಿದ್ದಾರೆ.

click me!

Recommended Stories