ಶಿಂಜೋ ಅಬೆ to ಇಂದಿರಾ ಗಾಂಧಿ, ಗುಂಡೇಟಿಗೆ ಬಲಿಯಾದ ಜನಪ್ರಿಯ ನಾಯಕರು!

First Published | Jul 8, 2022, 5:24 PM IST
  • ಗುಂಡಿನ ದಾಳಿಗೆ ಜಪಾನ್ ಮಾಜಿ ಪ್ರಧಾನಿ ಶಿಂಜೋ ನಿಧನ
  • ಭಾರತದಲ್ಲೂ ಶೋಕಾಚರಣೆ,  ಆತಂಕ ಹೆಚ್ಚಿಸಿದ ಘಟನೆ
  • ಗುಂಡೇಟಿಗೆ ಬಲಿಯಾದ ಜನಪ್ರೀಯ ರಾಜಕೀಯ ನಾಯಕರು

ಭಾಷಣ ಮಾಡುತ್ತಿದ್ದ ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ಮೇಲಿನ ಗುಂಡಿನ ದಾಳಿಗೆ ಇಡೀ ವಿಶ್ವವೇ ಬೆಚ್ಚಿ ಬಿದ್ದಿದೆ. ಮಾಜಿ ಪ್ರಧಾನಿಯನ್ನು ಸುಲಭವಾಗಿ ಹತ್ಯೆ ಮಾಡಿದ ಘಟನೆ ಇದೀಗ ಎಲ್ಲಾ ರಾಷ್ಟ್ರಕ್ಕೂ ಎಚ್ಚರಿಕೆ ಸಂದೇಶ ರವಾನಿಸಿದೆ. ಇದೀಗ ರಾಜಕೀಯ ನಾಯಕರ ಭದ್ರತೆ ಅತ್ಯಂತ ಸವಾಲಾಗಿ ಪರಿಣಮಿಸಿದೆ. ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯಿಂದ ಹಿಡಿದು ಹಲವರು ಗುಂಡೇಟಿಗೆ ಬಲಿಯಾಗಿದ್ದಾರೆ. 

ಭಾರತದ ಮಾಜಿ ಪ್ರಧಾನಿ ಇಂದಿರಾ ಗಾಂಧಿ ತಮ್ಮ ಅಂಗರಕ್ಷನಿಂದಲೇ ಗುಂಡೇಟಿಗೆ ಬಲಿಯಾಗಿದ್ದರು. ಸಿಖ್‌ರ ಪವಿತ್ರ ಸ್ವರ್ಣ ಮಂದಿರದ ಮೇಲೆ ಆಪರೇಶನ್ ಬ್ಲೂ ಸ್ಟಾರ್ ಕಾರ್ಯಾಚರಣೆ ಘೋಷಿಸಿ ಉಗ್ರರ ಸದೆ ಬಡೆದ ಇಂದಿರಾ ಗಾಂಧಿಯನ್ನು ಅಕ್ಟೋಬರ್ 31 ರಂದು 1984ರಲ್ಲಿ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. 
 

Tap to resize

ಇಂದಿರಾ ಗಾಂಧಿ ಅಂಗರಕ್ಷಕ ಸತ್ವಂತ್ ಸಿಂಗ್ ಹಾಗೂ ಬೆನಟ್ ಸಿಂಗ್  ಗುಂಡು ಹಾರಿಸಿ ಹತ್ಯೆ ಮಾಡಿದ್ದರು. ಬರೋಬ್ಬರಿ 30 ಗುಂಟು ಇಂದಿರಾ ಗಾಂಧಿ ದೇಹ ಹೊಕ್ಕಿತ್ತು. ಈ ಘಟನೆ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿತ್ತು. ಇಷ್ಟೇ ಅಲ್ಲ ವಿಶ್ವವೇ ಶೋಕಾಚರಣೆ ಮಾಡಿತ್ತು.

ಪಾಕಿಸ್ತಾನದ ಎರಡು ಬಾರಿ ಪ್ರಧಾನ ಮಂತ್ರಿಯಾಗಿ ಜನಪ್ರಿಯರಾಗಿದ್ದ ಬೆನಜಿರ್ ಬುಟ್ಟೋ ಕೂಡಾ ಗುಂಡೇಟಿಗೆ ಬಲಿಯಾಗಿದ್ದಾರೆ. 2007ರ ಡಿಸೆಂಬರ್ 27 ರಂದು ಲಿಯಾಖಟ್ ನ್ಯಾಷನಲ್ ಬಾಘ್‌ನಲ್ಲಿ ರಾಜಕೀಯ ರ್ಯಾಲಿಯಲ್ಲಿ ಪಾಲ್ಗೊಂಡ ಬೆನಜೀರ್ ಬುಟ್ಟೋ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೇ ವೇಳೆ ಜೀವಂತ ಬಾಂಬ್ ಕೂಡ ಪತ್ತೆಯಾಗಿತ್ತು.

ಅಮೇರಿಕ ಗರಿಷ್ಠ ಭದ್ರತೆ ಹಾಗೂ ಅತೀ ಸುರಕ್ಷಿತ ಎಂದೇ ಹೆಸರುವಾಸಿಯಾಗಿದೆ. ಅಮೆರಿಕದ 35ನೇ ಅಧ್ಯಕ್ಷ ಜಾನ್ ಆಫ್ ಕೆನಡಿ ಗುಂಡೇಟಿಗೆ ಬಲಿಯಾಗಿದ್ದಾರೆ. ನವೆಂಬರ್ 22, 1963ರಂದು ಜಾನ್ ಆಫ್ ಕೆನಡಿ, ಟೆಕ್ಸಾಸ್ ಗವರ್ನರ್, ಕನಡೆ ಪತ್ನಿ ತೆರೆದ ವಾಹನದಲ್ಲಿ ರ್ಯಾಲಿ ನಡೆಸುತ್ತಿದ್ದ ವೇಳೆ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ತೀವ್ರ ಗಾಯಗೊಂಡ ಕೆನಡಿಯನ್ನು ಆಸ್ಪತ್ರೆ ಸೇರಿಸಲಾಗಿತ್ತು. ಆದರೆ ಬದುಕುಳಿಯಲಿಲ್ಲ.

ಇತ್ತೀಚೆಗೆ ಕಾಂಗ್ರೆಸ್ ನಾಯಕ, ಪಂಜಾಬಿ ಸಿಂಗರ್ ಸಿಧು ಮೂಸೆ ವಾಲ ಹತ್ಯೆಯಾಗಿದೆ. ದುಷ್ಕರ್ಮಿಗಳು 10ಕ್ಕೂ ಹೆಚ್ಚು ಪಿಸ್ತೂಲ್‌ನಿಂದ ಸತತ ಗುಂಡಿ ಹಾರಿಸಿ ಹತ್ಯೆ ಮಾಡಿದ್ದರು. ಪಂಜಾಬ್ ಆಪ್ ಸರ್ಕಾರ ಭದ್ರತೆ ವಾಪಸ್ ಪಡೆದ ಬೆನ್ನಲ್ಲೇ ಈ ಘಟನೆ ನಡೆದಿತ್ತು.
 

पूर्व प्रधानमंत्री राजीव गांधी की हत्यापूर्व प्रधानमंत्री राजीव गांधी की हत्या के मामले में भी सीबीआई को सुप्रीम कोर्ट की फटकार लग चुकी है। सुप्रीम कोर्ट ने कहा था कि जांच में अभी तक कोई प्रगति नहीं हुई। यह 'अंतहीन' हो सकती है।

ಭಾರತದ ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಹತ್ಯೆ ಮಾಡಲಾಗಿದೆ.ಆದರೆ ಇದು ಗುಂಡೇಟಿನ ದಾಳಿಯಾಗಿರಲಿಲ್ಲ. ಶ್ರೀಪರಂಬದೂರಿನಲ್ಲಿನ ರ್ಯಾಲಿಯಲ್ಲಿ ರಾಜೀವ್ ಗಾಂಧಿಯನ್ನು ಬಾಂಬ್ ಸ್ಫೋಟಿಸಿ ಹತ್ಯೆ ಮಾಡಲಾಗಿತ್ತು. 

1965ರಲ್ಲಿ ಭಾರತ ಹಾಗೂ ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಗಡಿ ಪ್ರದೇಶಗಳ ರಾಜ್ಯಗಳಲ್ಲಿ ವಿಮಾನ ಹಾರಾಟ ಅತ್ಯಂತ ಸವಾಲಾಗಿತ್ತು. ಅಂದು ಗುಜರಾತ್ ಮುಖ್ಯಮಂತ್ರಿಯಾಗಿದ್ದ ಬಲ್ವಂತ್ ರೈ ಮೆಹ್ತಾ ಮಿಥಾಪುರದಿಂದ ಕಚ್‌ಗೆ ವಿಮಾನದ ಮೂಲಕ ತೆರಳಿದ್ದರು. ಪತ್ನಿ ಹಾಗೂ ಇತರ ಮೂವರು ಸಿಬ್ಬಂದಿಗಳೊಂದಿಗೆ ವಿಮಾನ ಏರಿದ ಬಲ್ವಂತ್ ರೈ ಮೆಹ್ತಾ ಕಚ್ ಸಮೀಪಿಸುವ ಮೊದಲೇ ಪಾಕಿಸ್ತಾನ ವಾಯು ಸೇನೆ ಯುದ್ದ ವಿಮಾನ ಎಂದು ತಿಳಿದು ಹೊಡೆದುರುಳಿಸಿತ್ತು.

Latest Videos

click me!