ಕರ್ನಾಟಕ ಸೇರಿ ದೇಶಾದ್ಯಂತ ಭಾರಿ ಮಳೆ,ಶಾಲಾ ಕಾಲೇಜುಗಳಿಗೆ ರಜೆ, ಹೈ ಅಲರ್ಟ್ ಘೋಷಣೆ!

Published : Jul 06, 2022, 04:21 PM IST

ಕರ್ನಾಟಕದ ಹಲವು ಜಿಲ್ಲೆಗಳು ಭಾರಿ ಮಳೆಗೆ ಜಲಾವೃತ, ಶಾಲೆಗಳಿಗೆ ರಜೆ ಮಳೆಗೆ ತತ್ತರಿಸಿದ ಮುಂಬೈ, ಶಿಮ್ಲಾ, ಕೋಲ್ಕತಾ ಸೇರಿದಂತೆ ಹಲವು ನಗರ ಪರಿಸ್ಥಿತಿ ನಿಘಾ ವಹಿಸಲು ಕೇಂದ್ರ ಸೂಚನೆ, ವಿಪತ್ತು ನಿರ್ವಹಣಾ ತಂಡ ಅಲರ್ಟ್  

PREV
18
ಕರ್ನಾಟಕ ಸೇರಿ ದೇಶಾದ್ಯಂತ ಭಾರಿ ಮಳೆ,ಶಾಲಾ ಕಾಲೇಜುಗಳಿಗೆ ರಜೆ, ಹೈ ಅಲರ್ಟ್ ಘೋಷಣೆ!
ಕರ್ನಾಟಕ

ಕರ್ನಾಟಕ ಸೇರಿ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುತ್ತಿದೆ. ಕೆಲ ರಾಜ್ಯಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಭೂಕುಸಿತ, ಗುಡ್ಡ ಕುಸಿತದ ಆತಂಕವಾದರೆ, ನಗರ ಪ್ರದೇಶಗಳಲ್ಲಿ ಮನೆಗಳ ಒಳಗೆ ನುಗ್ಗಿದ ನೀರಿ, ನದಿಯಂತಾ ರಸ್ತೆ ಸೇರಿದಂತೆ ಇನ್ನಿತರ ಅಪಾಯ ಎದುರಾಗಿದೆ.

28
ರೆಡ್ ಅಲರ್ಟ್

ಮಲೆನಾಡು, ಕರಾವಳಿ ಸೇರಿದಂತೆ ರಾಜ್ಯದ 15ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮುಂಗಾರು ಮಳೆ ಅಬ್ಬರಿಸಿದ್ದು, ಮುಂಜಾಗ್ರತಾ ಕ್ರಮವಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರಕನ್ನಡ, ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜಿಗೆ ರಜೆ ಘೋಷಿಸಲಾಗಿದೆ. ನಿರಂತರವಾಗಿ ಮಳೆಯ ಸುರಿಯುತ್ತಿರುವ ಕಾರಣ ಕರಾವಳಿಯಲ್ಲಿ ಬುಧವಾರ ರೆಡ್ ಅಲರ್ಟ್ ಘೋಷಿಸಲಾಗಿದೆ. 

38
ಮಳೆ ನಡುವೆ ಪ್ರವಾಸಿಗರ ಸಂಖ್ಯೆ ಹೆಚ್ಚಳ

ಹಿಮಾಚಲ ಪ್ರದೇಶದ ಪ್ರವಾಸಿ ತಾಣಗಳಾಗಿರುವ ಶಿಮ್ಲಾ, ಕುಲು ಹಾಗೂ ಮನಾಲಿಯಲ್ಲಿ ಭಾರಿ ಮಳೆಯಾಗಿದೆ. ಒಂದೆಡೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಮತ್ತೊಂದೆಡೆ ಅಪಾಯದ ಸೂಚನೆಯೂ ಎದುರಾಗಿದೆ.

48
ಶಿಮ್ಲಾದಲ್ಲಿ ಭೂಕುಸಿತ

ಶಿಮ್ಲಾದಲ್ಲಿ ಸುರಿದ ಭಾರಿ ಮಳೆಯಿಂದ ಭೂಕುಸಿತ ಸಂಭವಿಸಿದೆ. ಈ ಭೂಕುಸಿತದಲ್ಲಿ ಓರ್ವ ಮೃತಪಟ್ಟಿದ್ದಾರೆ. ಕುಲುವಿನಲ್ಲಿ ಭೂಕುಸಿತ ಸಂಭವಿಸಿತ್ತು ಐವರು ಕಾಣೆಯಾಗಿದ್ದಾರೆ. ಇನ್ನು ಕುಲುವಿನಲ್ಲಿ ಸುರಿದ ಭಾರಿ ಮಳೆಗೆ ವಾಹನಗಳ ಸಿಲುಕಿ ಜಖಂ ಆಗಿದೆ. ಭೂಕುಸಿತದ ಪರಿಣಾಮ  ಗುಡ್ಡ, ಮರಗಳು ಧರೆಗುರುಳಿದೆ. 

58
ಅಸ್ಸಾಂ ಮೇಘಾಲಯದಲ್ಲಿ ಭಾರಿ ಮಳೆ

ಅಸ್ಸಾಂ ಮತ್ತು ಮೇಘಾಲಯದಲ್ಲಿ ಬರೋಬ್ಬರಿ 121 ವರ್ಷಗಳ ಬಳಿಕ ಜೂನ್ ತಿಂಗಳಲ್ಲಿ ಅತ್ಯಧಿಕ ಮಳೆಯಾಗಿದೆ. ಅಸ್ಸಾಂ ಮತ್ತು ಮೇಘಾಲಯದಲ್ಲಿ ಜೂನ್ ತಿಂಗಳ ಮಳೆ ಪ್ರಮಾಣ  858.1 mm. ಈಗಾಗಲೇ  ಅಸ್ಸಾಂ ಪ್ರವಾಹ ಪರಿಸ್ಥಿತಿ ಎದುರಿಸಿದೆ. ಸತತ ಮಳೆಯಿಂದ ಇದೀಗ ಅಪಾಯದ ಪರಿಸ್ಥಿತಿ ಎದುರಾಗಿದೆ.

68
ಮುಳುಗಿದ ಮುಂಬೈ

ಮುಂಬೈಯಲ್ಲಿ ಮಂಗಳವಾರ ಭಾರೀ ಮಳೆಯಾಗಿದ್ದು, ಅಂಧೇರಿ, ಘಾಟ್‌ಕೋಪರ್‌, ಚೆಂಬೂರ್‌, ಧಾರಾವಿ, ದಾದರ್‌ ವಡಾಲಾ, ಪನ್ವೇಲ್‌ ಮೊದಲಾದ ಪ್ರದೇಶಗಳು ಸಂರ್ಪೂಣವಾಗಿ ಜಲಾವೃತವಾಗಿವೆ. ಇದರಿಂದಾಗಿ ರಸ್ತೆ-ರೈಲು ಸಂಚಾರ, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ.

78
ಧುಮ್ಮಿಕ್ಕಿ ಹರಿಯುತ್ತಿದೆ ಜಲಪಾತ

ಮಹಾರಾಷ್ಟರದಲ್ಲಿ ಭಾರಿ ಮಳೆಯಾಗುತ್ತಿರುವ ಕಾರಣ ಹಲವು ಜಲಪಾತಗಳು ಧುಮ್ಮಿಕ್ಕಿ ಹರಿಯುತ್ತಿದೆ. ಇಲ್ಲಿಗೆ ಪ್ರವಾಸಿಗರ ಸಂಖ್ಯೆ ಕೂಡ ಹೆಚ್ಚಾಗಿದೆ. ಪೊವಾಯಿ ಲೇಕ್‌ನಲ್ಲಿ ಪ್ರವಾಸಿಗರ ದಂಡೇ ಹರಿದು ಬರುತ್ತಿದೆ.

88
ಮುಂದಿನ 24 ಗಂಟೆಗಳ ಕಾಲ ಭಾರಿ ಮಳೆ

ಕಳೆದ 24 ಗಂಟೆಗಳಲ್ಲಿ ಮುಂಬೈಯಲ್ಲಿ ಸರಾಸರಿ 95.81 ಮಿ.ಮೀ. ಮಳೆಯಾಗಿದ್ದು, ಪೂರ್ವ ಹಾಗೂ ಪಶ್ಚಿಮ ಉಪನಗರ ವಲಯದಲ್ಲಿ 115.09 ಮಿ.ಮೀ. ಹಾಗೂ 116.73 ಮಿ.ಮೀ. ಮಳೆಯಾಗಿದೆ . ಮುಂದಿನ 24 ಗಂಟೆಗಳ ಕಾಲವೂ ಮುಂಬೈಯಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. 

Read more Photos on
click me!

Recommended Stories