ದೇಶ ಪ್ರಸಿದ್ಧ ರಾಣಿಯನ್ನೇ ಜೈಲಿಗಟ್ಟಿದ್ದ ಇಂದಿರಾ ಗಾಂಧಿ, ಇಬ್ಬರು ಶಕ್ತಿಶಾಲಿ ಸ್ಪುರದ್ರೂಪಿಗಳು ದ್ವೇಷಿಗಳಾಗಿದ್ಯಾಕೆ

First Published | Nov 8, 2023, 5:15 PM IST

ಅತ್ಯಂತ ಶಕ್ತಿಶಾಲಿ ಬುದ್ಧಿವಂತ ಮಹಿಳೆಯರ ಪಟ್ಟಿಯಲ್ಲಿ ಎರಡು ಹೆಸರುಗಳಿವೆ.  ಆಕೆ ದೇಶದ ಪ್ರಸಿದ್ಧ ರಾಜಮನೆತನ ರಾಣಿಯಾಗಿದ್ದಳು. ಆದರೆ ಮತ್ತೊಬ್ಬಾಕೆ ದೇಶದ ಹೋರಾಟದಲ್ಲಿ ಭಾಗಿಯಾಗಿದ್ದ ಕುಟುಂಬದ ಕುಡಿಯಾಗಿದ್ದಳು ಇಬ್ಬರ ಸೌಂದರ್ಯ ಕಣ್ಣು ಕುಕ್ಕುವಂತಿತ್ತು. ಆದರೆ ಇಬ್ಬರಿಗೂ ದ್ವೇಷ. ಯಾಕೆ ಅಂತೀರಾ. ಇಲ್ಲಿದೆ ವಿವರ.
 

ಅತ್ಯಂತ ಸುಂದರ ಮತ್ತು ಅಷ್ಟೇ ಶಕ್ತಿಶಾಲಿ ಮತ್ತು ಬುದ್ಧಿವಂತ ಮಹಿಳೆಯರ ಪಟ್ಟಿಯಲ್ಲಿ ಎರಡು ಹೆಸರುಗಳಿವೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಮತ್ತು ಜೈಪುರ ರಾಜಮನೆತನದ ರಾಜಮಾತೆಯಾಗಿದ್ದ ಮಹಾರಾಣಿ ಗಾಯತ್ರಿ ದೇವಿ. ಅವರಿಬ್ಬರೂ ತಮ್ಮ ದೋಷರಹಿತ ಸೌಂದರ್ಯ, ದೃಢ ನಿರ್ಣಯ, ಅನುಗ್ರಹದಿಂದ ಇಡೀ ಜಗತ್ತನ್ನು ಮಂತ್ರಮುಗ್ಧಗೊಳಿಸಿದರು.  ಈ ಇಬ್ಬರೂ ಮಹಿಳೆಯರು ಕೂಡ ದೇಶದ ಜನರನ್ನು ಬೆಳವಣಿಗೆಯತ್ತ ಮುನ್ನಡೆಸಿದ ಕೀರ್ತಿ ಹೊಂದಿದ್ದಾರೆ.

ಆದರೆ, ಇಂದಿರಾಗಾಂಧಿ ಮತ್ತು ಗಾಯತ್ರಿದೇವಿ ನಡುವೆ ಹೊಂದಾಣಿಕೆ ಇರಲಿಲ್ಲ. ಇಬ್ಬರೂ ಸಮಾಜ ಸೇವೆಯಲ್ಲಿದ್ದರೂ ಒಬ್ಬರು ಇನ್ನೊಬ್ಬರನ್ನು ಕಂಡರೆ ಆಗುತ್ತಿರಲಿಲ್ಲ. ಇವರಿಬ್ಬರ ಜಗಳ ರಾಜಮಾತಾ ಗಾಯತ್ರಿ ದೇವಿಯ ಬಂಧನಕ್ಕೆ ಕಾರಣವಾಯಿತು. 6 ತಿಂಗಳು ರಾಣಿಯನ್ನು ಜೈಲಿನಲ್ಲಿಡಲಾಯ್ತು

Tap to resize

ಜೂನ್ 26, 1975 ರಂದು, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಆಲ್ ಇಂಡಿಯಾ ರೇಡಿಯೊದಲ್ಲಿ (AIR) ಐತಿಹಾಸಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಿದರು. ಘೋಷಣೆಯ ನಂತರ ಒಬ್ಬರ ನಂತರ ಒಬ್ಬರಂತೆ ಹೈ ಪ್ರೊಫೈಲ್ ವ್ಯಕ್ತಿಗಳನ್ನು ಬಂಧಿಸಲಾಯಿತು. 

ರಾಜಮಾತಾ ಗಾಯತ್ರಿ ಕೂಡ ಇದರಲ್ಲಿ ಒಬ್ಬರು. ಆಗರ್ಭ ಶ್ರೀಮಂತ ರಾಜಮನೆತನದ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ  ಜೈಲಿಗಟ್ಟಲಾಯ್ತು. ರಾಣಿಯ ಬಂಧನಕ್ಕೆ ಅತೀ ಹೆಚ್ಚು ರಾಜಕೀಯ ಜಗಳಕ್ಕೆ ಕಾರಣವಾಯ್ತು.

ಜೈಪುರದ ರಾಣಿ, ಗಾಯತ್ರಿ ದೇವಿ 1962 ರಿಂದ ಜೈಪುರ ವಿಧಾನಸಭೆಯ ಸಕ್ರಿಯ ಸದಸ್ಯರಾಗಿದ್ದರು ಮತ್ತು ಜಯಪ್ರಕಾಶ್ ನಾರಾಯಣ ಅವರ ಅನುಯಾಯಿಯಾಗಿದ್ದರು. ಜೆಪಿ ನಾರಾಯಣ್ ಅವರು ಇಂದಿರಾ ಗಾಂಧಿ ಮತ್ತು ಕಾಂಗ್ರೆಸ್ ಪಕ್ಷದ ವಿರುದ್ಧ ಪ್ರಧಾನ ಪ್ರತಿಪಕ್ಷವಾಗಿ ಹೊರಹೊಮ್ಮುತ್ತಿದ್ದರು.

ರಾಜಮಾತಾ ಗಾಯತ್ರಿ ದೇವಿ ಅವರನ್ನು ಭ್ರಷ್ಟಾಚಾರದ ಆರೋಪದ ಮೇಲೆ ಬಂಧಿಸಲಾಗಿತ್ತು. ಆದಾಯ ತೆರಿಗೆ ಇಲಾಖೆಯು 1.70 ಕೋಟಿ ಡಾಲರ್‌ಗಳು ಮತ್ತು ದುಬಾರಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿಕೆ ನೀಡಿತ್ತು.

ಗಾಯತ್ರಿ ದೇವಿ ಆ ಸಮಯದಲ್ಲಿ ದೇಶದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾಗಿದ್ದರು. ಅವಳು ತನ್ನ ಸೌಂದರ್ಯ ಮತ್ತು ವಿಶಿಷ್ಟ ಶೈಲಿಗೆ ಹೆಸರುವಾಸಿಯಾಗಿದ್ದಳು. ಅವರು ರಾಜಸ್ಥಾನದ ಸ್ಥಳೀಯರ ಅಚ್ಚುಮೆಚ್ಚಿನ ವ್ಯಕ್ತಿಯಾಗಿದ್ದರು.  ಮತ್ತು ಹೆಣ್ಣುಮಕ್ಕಳ ಶಿಕ್ಷಣ, ರೈತರ ಬಿಕ್ಕಟ್ಟು ಸೇರಿ ಹಲವಾರು ಸಮಸ್ಯೆಗಳನ್ನು ಸರಿ ಪಡಿಸುವಲ್ಲಿ ಸಾಕಷ್ಟು ಶ್ರಮಿಸಿದರು.

ಗಾಯತ್ರಿ ದೇವಿ ಭಾರತದ ಅತ್ಯಂತ ಆಧುನಿಕ, ಸ್ವತಂತ್ರ ಮತ್ತು ಸುಂದರ ಮಹಾರಾಣಿಗಳಲ್ಲಿ ಒಬ್ಬರು. ತನ್ನ ಶಕ್ತಿಯಿಂದ ಕೆಟ್ಟ ಪರಿಸ್ಥಿತಿಗಳಲ್ಲಿ ಬದುಕುಳಿದು  ಹಲವಾರು ಜನರಿಗೆ ಸ್ಫೂರ್ತಿಯಾದಳು. 29  ಜುಲೈ 2009 ರಲ್ಲಿ ಗಾಯತ್ರಿ ದೇವಿ ವಯೋಸಹಜ ಖಾಯಿಲೆಯಿಂದ ಮೃತಪಟ್ಟರು. ಇಂದಿರಾ ಗಾಂಧಿಯವರು 31 ಅಕ್ಟೋಬರ್ 1984 ರಂದು ಗುಂಡೇಟಿಗೆ ಹತ್ಯೆಯಾದರು. 

ತುರ್ತು ಪರಿಸ್ಥಿತಿಯ ಸಮಯದಲ್ಲಿ 56 ವರ್ಷ ವಯಸ್ಸಿನ ಗಾಯತ್ರಿ ದೇವಿ ಅವರನ್ನು ಇಂದಿರಾ ಗಾಂಧಿಯವರು ಬಂಧಿಸಿ ಹೊಲಸು ಜೈಲಿನಲ್ಲಿ ಇರಿಸಿದರು. ಜೈಲು ಇಲಿಗಳಿಂದ ತುಂಬಿತ್ತು. ಆಕೆಯ ಸ್ಥಿತಿ ತುಂಬಾ ಶೋಚನೀಯವಾಗಿತ್ತು. 10 ಕಿಲೋ ದೇಹ ತೂಕ ಕಳೆದುಕೊಂಡಳು ಮತ್ತು ತನ್ನ ಹದಗೆಟ್ಟ ಆರೋಗ್ಯದ ಕಾರಣದಿಂದ ತನ್ನ ಬಿಡುಗಡೆಗಾಗಿ ಇಂದಿರಾ ಗಾಂಧಿಗೆ ಮನವಿ ಮಾಡಬೇಕಾಯಿತು.

ಕಾರಾಗೃಹದಲ್ಲಿ ಬೆತ್ತಲೆಯಾಗಿರುವ ಮಹಿಳೆ ಮತ್ತು ದೇಹದ ಮೇಲೆ ಹಲವಾರು ನೊಣಗಳನ್ನು ಹೊಂದಿರುವ ಮಹಿಳೆ ಮತ್ತು ಪ್ರತಿಯೊಬ್ಬರ ಮೇಲೆ ಇಟ್ಟಿಗೆಗಳನ್ನು ಎಸೆದ ಮಹಿಳೆ ಸೇರಿದಂತೆ ಹಲವಾರು ಹುಚ್ಚರಿದ್ದರು ಎಂದು ಗಾಯತ್ರಿ ಹೇಳಿದ್ದರು. ಗಾಯತ್ರಿ ದೇವಿ ಸ್ವತಃ ಸುಮಾರು ಎರಡು ಬಾರಿ ಜೈಲಿನಲ್ಲಿಇಟ್ಟಿಗೆಗಳಿಂದ ದಾಳಿಗೆ ಒಳಗಾಗಿದ್ದರು.

Latest Videos

click me!