ಕಾರ್ಡ್ ಸೇವ್ ಮಾಡೋದನ್ನ ಅವಾಯ್ಡ್ ಮಾಡಿ
ಇದಲ್ಲದೆ, ಆನ್‌ಲೈನ್ ವಂಚನೆ ತಪ್ಪಿಸಬೇಕು ಅಂದ್ರೆ, ನಿಮ್ಮ ಕಾರ್ಡ್‌ನ್ನ ಆನ್‌ಲೈನ್‌ನಲ್ಲಿ ಸೇವ್ ಮಾಡೋದನ್ನ ಅವಾಯ್ಡ್ ಮಾಡಿ. ನೀವು ಎಲ್ಲಾದ್ರೂ ಆನ್‌ಲೈನ್‌ನಲ್ಲಿ ಪೇಮೆಂಟ್ ಮಾಡ್ಬೇಕಾದ್ರೆ, ನಿಮ್ಮ ಕಾರ್ಡ್‌ನ್ನ ಈ ಪ್ಲಾಟ್‌ಫಾರ್ಮ್‌ನಲ್ಲಿ ಸೇವ್ ಮಾಡ್ಬೇಕಾ ಅಂತ ಆ ಪ್ಲಾಟ್‌ಫಾರ್ಮ್ ಕೇಳುತ್ತೆ, ಇದ್ರಿಂದ ಮುಂದೆ ಪೇಮೆಂಟ್ ಮಾಡೋದು ಸುಲಭ ಆಗುತ್ತೆ. ಆಗ 'ಇಲ್ಲ' ಅಂತಾನೆ ಹೇಳಬೇಕು. ಏಕೆಂದರೆ, ಆ ಪ್ಲಾಟ್‌ಫಾರ್ಮ್ ಸೇಫ್ ಇಲ್ಲ ಅಂದ್ರೆ, ನಿಮ್ಮ ಕಾರ್ಡ್ ಡೀಟೇಲ್ಸ್ ಕೂಡ ಸೇಫ್ ಇರಲ್ಲ. ಅದಕ್ಕೇ ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವಾಗ, ನಿಮ್ಮ ಕಾರ್ಡ್‌ನ್ನ ಸೇಫ್ ಇಲ್ಲದ ವೆಬ್‌ಸೈಟ್‌ಗಳಲ್ಲಿ ಸೇವ್ ಮಾಡ್ಬೇಡಿ ಅಂತ ಎಕ್ಸ್‌ಪರ್ಟ್ಸ್ ಹೇಳ್ತಾರೆ.