IRCTC ಅತಿ ಕಡಿಮೆ ಬೆಲೆಯ ವಿಮೆ
ವಿಮೆ ಪ್ರತಿಯೊಬ್ಬರಿಗೆ ಪ್ರಮುಖ ಹಾಗೂ ಅತ್ಯವಶ್ಯಕವಾಗಿದೆ. ಪ್ರಸಕ್ತ ಎದುರಾಗುವ ಅನರೀಕ್ಷತ ಘಟನೆ, ಆರೋಗ್ಯ ಸಮಸ್ಯೆ ಸೇರಿದಂತೆ ಹಲವು ಕಾರಣಗಳಿಂದ ವಿಮೆ ಅತ್ಯಂತ ಪ್ರಮುಖ ವಿಷಯವಾಗಿದೆ. ಸಾಮಾನ್ಯವಾಗಿ ಜನರು ಜೀವ ವಿಮೆಗೆ ವರ್ಷಕ್ಕೆ ಸಾವಿರಾರು ರೂಪಾಯಿ ಕಟ್ಟಬೇಕಾಗುತ್ತೆ. ಆದರೆ ದೇಶದಲ್ಲೇ ಅತಿ ಕಡಿಮೆ ಬೆಲೆಯ ವಿಮಾ ಯೋಜನೆ ಇದೆ.
IRCTC ವಿಮೆ
ಭಾರತೀಯ ರೈಲ್ವೆ ಸಂಸ್ಥೆ IRCTC ತುಂಬಾ ಕಡಿಮೆ ಬೆಲೆಯಲ್ಲಿ ವಿಮಾ ಯೋಜನೆ ಕೊಡುತ್ತಿದೆ. ರೈಲು ಪ್ರಯಾಣಿಕರಿಗೆ ಕೇವಲ 45 ಪೈಸೆಗೆ 10 ಲಕ್ಷ ರೂ. ವರೆಗೆ ವಿಮೆ ಕೊಡುತ್ತಿದೆ. ಈ ವಿಮೆ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಳ್ಳೋಣ.
IRCTC
IRCTC ವಿಮೆಗೆ ಯಾರು ಅರ್ಹರು?
IRCTC ಮೂಲಕ ಆನ್‌ಲೈನ್‌ನಲ್ಲಿ ಟಿಕೆಟ್ ಬುಕ್ ಮಾಡುವ ಪ್ರಯಾಣಿಕರಿಗೆ ಮಾತ್ರ 10 ಲಕ್ಷ ರೂಪಾಯಿ ವಿಮೆ ಸಿಗುತ್ತೆ. ಕನ್ಫರ್ಮ್ಡ್, RAC ಮತ್ತು ಪಾರ್ಶಿಯಲಿ ಕನ್ಫರ್ಮ್ಡ್ ಟಿಕೆಟ್‌ಗಳಿಗೆ ಮಾತ್ರ ವಿಮೆ ಲಭ್ಯವಿದೆ.
ಅತಿ ಕಡಿಮೆ ಬೆಲೆಯ ವಿಮಾ ಪಾಲಿಸಿ
5 ವರ್ಷದೊಳಗಿನ ಮಕ್ಕಳಿಗೆ ಬರ್ತ್ ಇಲ್ಲದ ಟಿಕೆಟ್‌ಗೆ ವಿಮೆ ಅನ್ವಯಿಸುವುದಿಲ್ಲ. ಆದರೆ 5 ರಿಂದ 11 ವರ್ಷದೊಳಗಿನ ಮಕ್ಕಳಿಗೆ, ಬರ್ತ್ ಇದ್ದರೂ ಇಲ್ಲದಿದ್ದರೂ ವಿಮೆ ಸಿಗುತ್ತೆ. ಇದು ಭಾರತೀಯ ರೈಲ್ವೇ ನೀಡುವ ಅತೀ ಅಗ್ಗದ ವಿಮಾ ಯೋಜನೆಯಾಗಿದೆ. ಇತರ ಯಾವುದೇ ವಿಮೆ, ಯಾವುದೇ ಸಂಸ್ಥೆಗಳು ಇಷ್ಟು ಅಗ್ಗದಲ್ಲಿ ವಿಮೆ ನೀಡುತ್ತಿಲ್ಲ.
ರೈಲ್ವೆ ವಿಮೆ
ರೈಲು ಪ್ರಯಾಣದಲ್ಲಿ ಅಪಘಾತವಾದರೆ, ಪ್ರಯಾಣಿಕರಿಗೆ ಗಾಯವಾದರೆ ಆಸ್ಪತ್ರೆ ಖರ್ಚು ವಿಮೆಯಲ್ಲಿ ಕವರ್ ಆಗುತ್ತೆ. ಆದರೆ, ಸಾವು, ಪೂರ್ಣ ಅಂಗವೈಕಲ್ಯ, ಭಾಗಶಃ ಅಂಗವೈಕಲ್ಯಕ್ಕೆ ಕವರೇಜ್ ಬೇರೆ ಬೇರೆ ಇರುತ್ತೆ. ರೈಲು ಅಪಘಾತದಲ್ಲಿ ಸಾವು ಅಥವಾ ಪೂರ್ಣ ಅಂಗವೈಕಲ್ಯವಾದರೆ 10 ಲಕ್ಷ ರೂ. ಪರಿಹಾರ ಸಿಗುತ್ತೆ. ಭಾಗಶಃ ಅಂಗವೈಕಲ್ಯಕ್ಕೆ 7.5 ಲಕ್ಷ ರೂ. ಸಿಗುತ್ತೆ. ಗಾಯವಾದರೆ ಆಸ್ಪತ್ರೆ ಖರ್ಚಿಗೆ 2 ಲಕ್ಷ ರೂ. ವರೆಗೆ ಸಿಗುತ್ತೆ. ಶವ ಸಾಗಣೆಗೆ 10,000 ರೂ ವಿಮೆಯಲ್ಲಿ ಲಭ್ಯವಾಗಲಿದೆ.
45 ಪೈಸೆ ವಿಮೆ
ಈ ವಿಮೆ ತೆಗೆದುಕೊಳ್ಳುವುದು ಪ್ರಯಾಣಿಕರ ಇಚ್ಛೆಗೆ ಬಿಟ್ಟದ್ದು. ಆದರೆ ಕೇವಲ 45 ಪೈಸೆಗೆ 10 ಲಕ್ಷ ರೂ. ಕವರೇಜ್ ಸಿಗುವುದರಿಂದ ವಿಮೆ ತೆಗೆದುಕೊಳ್ಳುವುದು ಒಳ್ಳೆಯದು. ಪ್ರತಿದಿನ ಲಕ್ಷಾಂತರ ಜನ ರೈಲಿನಲ್ಲಿ ಪ್ರಯಾಣ ಮಾಡ್ತಾರೆ. ಈ ವಿಮೆ ತುಂಬಾ ಉಪಯುಕ್ತ. 45 ಪೈಸೆ ಇಂದಿನ ಕಾಲಕ್ಕೆ ಯಾರಿಗೂ ದೊಡ್ಡ ಮೊತ್ತವಲ್ಲ. ಹೀಗಾಗಿ ರೈಲು ಟಿಕೆಟ್ ಬುಕ್ ಮಾಡುವಾಗ ವಿಮೆ ಬಟನ್ ಕ್ಲಿಕ್ ಮಾಡುವುದು ಮರೆಯಬೇಡಿ.