212 ಪಿಲ್ಲರ್, 161 ಅಡಿ ಎತ್ತರ; ಕಬ್ಬಿಣ ಬಳಸದೆ ನಾಗರಶೈಲಿಯಲ್ಲಿ ರಾಮ ಮಂದಿರ ನಿರ್ಮಾಣ!

First Published | Jan 5, 2024, 6:35 PM IST

ಶ್ರೀರಾಮ ಮಂದಿರ ಉದ್ಘಾಟನೆಗೆ ಭಕ್ತರು ಕಾಯುತ್ತಿದ್ದಾರೆ. ಈ ರಾಮ ಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಮಹಡಿ, 161 ಅಡಿ ಎತ್ತರವಿರುವ ಈ ಮಂದಿರ ನಿರ್ಮಾಣದಲ್ಲಿ ಒಂದೇ ಒಂದು ಕಬ್ಬಿಣ ಬಳಕೆ ಮಾಡಿಲ್ಲ. ರಾಮ ಮಂದಿರದ ಕುತೂಹಲ ಮಾಹಿತಿ ಇಲ್ಲಿದೆ.
 

ಶತಶತಮಾನಗಳ ಹೋರಾಟದ ಫಲದಿಂದ ಇದೀಗ ಭವ್ಯ ಭಾರತದ ಪರಂಪರೆ ನಳನಳಿಸಲು ಆರಂಭಿಸಿದೆ. ಆಯೋಧ್ಯೆಯ ಭವ್ಯ ಶ್ರೀರಾಮ ಮಂದಿರ ಉದ್ಘಾಟನೆಯೊಂದಿಗೆ ಭಾರತದ ಸಂಸ್ಕೃತಿ ವಿಶ್ವದೆಲ್ಲೆಡೆ ಪಸರಿಸಲಿದೆ. ಜನವರಿ 22ರಂದು ಉದ್ಘಾಟನೆಯಾಗಲಿರುವ ಭವ್ಯ ರಾಮ ಮಂದಿರ ಹಲವು ಕುತೂಹಲಗಳ ಆಗರವಾಗಿದೆ.
 

ರಾಮ ಮಂದಿರವನ್ನು ನಾಗರ ಶೈಲಿಯಲ್ಲಿ ನಿರ್ಮಾಣ ಮಾಡಲಾಗಿದೆ. ಮೂರು ಮಹಡಿ, 161 ಅಡಿ ಎತ್ತರವಿರುವ ಈ ರಾಮ ಮಂದಿರಕ್ಕೆ ಒಂದೇ ಒಂದು ಕಬ್ಬಿಣ ಬಳಕೆ ಮಾಡಿಲ್ಲ. ಕಾರಣ ಕಬ್ಬಿಣ 100 ವರ್ಷಗಳಲ್ಲಿ ತುಕ್ಕು ಹಿಡಿಯುವ ಕಾರಣ ದೇಗುಲ ಹಾನಿಯಾಗಲಿದೆ.

Tap to resize

ಸಂಪೂರ್ಣ ಕಲ್ಲಿನಿಂದಲೇ ರಾಮ ಮಂದಿರ ನಿರ್ಮಾಣ ಮಾಡಲಾಗಿದೆ. 1000 ವರ್ಷಗಳವರೆಗೆ ಯಾವುದೇ ಪ್ರಾಕೃತಿಕ ವಿಕೋಪಕ್ಕೆ ಜಗ್ಗದೇ ಇರುವ ರೀತಿಯಲ್ಲಿ ಮಂದಿರ ನಿರ್ಮಾಣ ಮಾಡಲಾಗಿದೆ. 

ನಾಗರ ಶೈಲಿ ಪ್ರಮುಖವಾಗಿ ಉತ್ತರ ಭಾರತದ ದೇಗುಲಗಳಲ್ಲಿ ಕಾಣಬಹುದು. ಎತ್ತರದ ಶಿಖರ ಅದರ ಮೇಲೆ ಕಳಶ ರೀತಿಯಲ್ಲಿರುವ ಈ ಮಂದಿರ, 20 ಅಡಿಗಳ ಎತ್ತರದಂತೆ ಮೂರು ಮಹಡಿ ಹೊಂದಿದೆ. ದೇಗುಲದಲ್ಲಿ ಒಟ್ಟು 212 ಕಂಬಗಳಿವೆ.
 

ಗರ್ಭಗುಡಿಯಲ್ಲಿ ರಾಮ ಲಲ್ಲಾ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಲಾಗುತ್ತದೆ. ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಹೊಂದಿದೆ. ಇನ್ನು ಭವ್ಯ ರಾಮ ಮಂದಿರಕ್ಕೆ 5 ಪ್ರವೇಶ ದ್ವಾರ ಹೊಂದಿದೆ.
 

ರಾಮ ಮಂದಿರದಲ್ಲಿ ರಂಗ ಮಂಟಪ, ಸಭಾ ಮಂಟಪ, ಕೀರ್ತನ ಮಂಟಪ, ನೃತ್ಯ ಮಂಟಪ ಹಾಗೂ ಪ್ರಾರ್ಥನ ಮಂಟಪ ಎಂಬ 5 ಮಂಟಪಗಳನ್ನು ಹೊಂದಿದೆ.

ರಾಮ ಮಂದಿರದಲ್ಲಿ ಸೂರ್ಯ ದೇವ, ದೇವಿ ಭಗವತಿ, ಗಣೇಶ, ಶಿವ, ಮಾ ಅನ್ನಪೂರ್ಣೆ ಸೇರಿದಂತೆ 4 ಮಂದಿರಗಳು ಇರಲಿದೆ. ದಕ್ಷಿಣ ಪಥದಲ್ಲಿ ಹನುಮಾನ ಜಿ ಮಂದಿರವಿದೆ.  

ಮಹರ್ಷಿ ವಾಲ್ಮೀಕಿ, ಮಹರ್ಷಿ ವಶಿಷ್ಠ, ಮಹರ್ಷ ವಿಶ್ವಾಮಿತ್ರ, ಮಹರ್ಶಿ ಅಗತ್ಸ, ಮಾತಾ ಶಬರಿ, ದೇವಿ ಅಹಲ್ಯ ಮಂದಿರಗಳು ಶ್ರೀ ರಾಮ ಮಂದಿರ ಆವರಣದಲ್ಲಿ ಇರಲಿದೆ. 

Latest Videos

click me!