ಪವಿತ್ರ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆ ಮಾಡಿದೆ. ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ಹೆಸರುಗಳಿಂದ ಕರೆಯಲ್ಪಟ್ಟರೂ ಮಕರ ರಾಶಿಯತ್ತ ಸೂರ್ಯನ ಪ್ರವೇಶದ ದಿನವೇ ಮಕರ ಸಂಕ್ರಾಂತಿ. ಈ ಪವಿತ್ರ ಹಬ್ಬದ ಪ್ರಯುಕ್ತ ಪ್ರಧಾನಿ ಮೋದಿ ಗೋವುಗಳಿಗೆ ಮೇವು ತಿನ್ನಿಸಿದ್ದಾರೆ.
ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ 6ಕ್ಕೂ ಹೆಚ್ಚು ಗೋವುಗಳಿಗೆ ಮೇವು ತಿನ್ನಿಸಿದ್ದಾರೆ. ಗೋವುಗಳ ಜೊತೆ ಕಾಲ ಕಳೆದ ಮೋದಿ, ಮೇವಿನ ಜೊತೆಗೆ ಸಂಕ್ರಾಂತಿ ಹಬ್ಬದ ಸಿಹಿ ತಿನ್ನಿಸಿದ್ದಾರೆ.
ಸಂಕ್ರಾಂತಿ ಹಬ್ಬದ ದಿನ ಗೋವುಗಳನ್ನು ಶೃಂಗರಿಸಿ ಪೂಜೆ, ಅವುಗಳಿಗೆ ಮೇವು, ಸಿಹಿ ತಿನ್ನಿಸುವುದು ಸಂಪ್ರದಾಯ. ಹೀಗೆ ಪ್ರಧಾನಿ ಮೋದಿ ಗೋವುಗಳಿಗೆ ಮೇವು ತಿನ್ನಿಸಿದ್ದಾರೆ.
ಜನವರಿ 22ರಂದು ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣಪ್ರತಿಷ್ಠೆ ಮಾಡಲಿರುವ ಪ್ರಧಾನಿ ಮೋದಿ ವೃತ ಕೈಗೊಂಡಿದ್ದಾರೆ. ಈ ಶುಭಸಂದರ್ಭ ನಡುವೆ ಮೋದಿ, ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ.
ಸೂರ್ಯನು ಮಕರ ರಾಶಿಯತ್ತ ಚಲನೆಯನ್ನುಆಧರಿಸಿ ಈ ಪವಿತ್ರ ದಿನವನ್ನು ಮಕರ ಸಂಕ್ರಾಂತಿಯಾಗಿ ಆಚರಿಸಲಾಗುತ್ತದೆ. ರೈತ ಮಕರ ಸಂಕ್ರಾಂತಿ ಹಬ್ಬವನ್ನು ಅತ್ಯಂತ ವಿಶೇಷವಾಗಿ ಆಚರಿಸುತ್ತಾನೆ. ಕರ್ನಾಟಕದ ಉತ್ತರ ಭಾಗದಲ್ಲಿ ಗೋವುಗಳನ್ನು ಕಿಚ್ಚು ಹಾಯಿಸಿ ಆಚರಿಸುತ್ತಾರೆ. ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡಿ ಅನ್ನೋದು ಕನ್ನಡದಲ್ಲಿ ಪ್ರಚಲಿತದಲ್ಲಿರುವ ಮಾತು.
ಪುಸ್ಯ ಮಾಸದ ಶುಕ್ಲ ಪಕ್ಷದ 5ನೇ ದಿನ ಆಚರಿಸುವ ಮಕರ ಸಂಕ್ರಾಂತಿ ಹಬ್ಬ ಈ ಬಾರಿ ಸೋಮವಾರ ಉತ್ತಮ ಘಳಿಗೆ ಹೊಂದಿದೆ. ದಿನಾಂಕದಲ್ಲಿ ಕೆಲ ಗೊಂದಲಗಳಿದ್ದರೂ ದೇಶಾದ್ಯಂತ ವಿಜ್ರಂಭಣೆಯಿಂದ ಹಬ್ಬದ ಆಚರಣೆ ನಡೆಯುತ್ತಿದೆ.
ಕಬ್ಬು, ಎಳ್ಳು ಬೆಲ್ಲ ಮಿಶ್ರಣದ ಪ್ರಸಾದ ಮಕರ ಸಂಕ್ರಾಂತಿಯ ವಿಶೇಷ. ಈ ಹಬ್ಬ ಸಾಮರಸ್ಯ, ಕೃತಜ್ಞತೆ, ಪ್ರೀತಿ ಉದಾರತೆಯ ಸಂಕೇತವಾಗಿದೆ. ಇದೀಗ ಮೋದಿ ಸಂಕ್ರಾಂತಿ ಪ್ರಯುಕ್ತ ಗೋವುಗಳಿಗೆ ಮೇವು ತಿನ್ನಿಸುವ ಮೂಲಕ ಹಬ್ಬದ ವಿಶೇಷತೆ ಸಾರಿದ್ದಾರೆ.