ಹೊಸ ಸಂಸತ್ ಭವನದ ಛಾವಣಿ ಮೇಲೆ ರಾರಾಜಿಸಲಿದೆ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ!

Published : Jul 11, 2022, 01:53 PM IST

ಜುಲೈ 11 ರಂದು ಬೆಳಗ್ಗೆ ಹೊಸ ಸಂಸತ್ ಭವನದ ಮೇಲ್ಛಾವಣಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ಲಾಂಛನ ಅಂದರೆ ಅಶೋಕ ಲಾಂಛನವನ್ನು ಅನಾವರಣಗೊಳಿಸಿದರು. ಈ ರಾಷ್ಟ್ರೀಯ ಲಾಂಛನವು 9500 ಕೆಜಿ ತೂಗುತ್ತದೆ, ಇದು ಕಂಚಿನಿಂದ ಮಾಡಲ್ಪಟ್ಟಿದೆ. ಇದರ ಎತ್ತರ 6.5 ಮೀಟರ್. ಇದನ್ನು ಹೊಸ ಸಂಸತ್ತಿನ ಕಟ್ಟಡದ ಸೆಂಟ್ರಲ್ ಫೋಯರ್‌ನ ಮೇಲ್ಭಾಗದಲ್ಲಿ ಇರಿಸಲಾಗಿದೆ. ಲಾಂಛನಕ್ಕೆ ಸಪೋರ್ಟ್‌ ಆಗಿ ಸುಮಾರು 6500 ಕೆಜಿ ತೂಕದ ಉಕ್ಕಿನ ಪೋಷಕ ರಚನೆಯನ್ನು ನಿರ್ಮಿಸಲಾಗಿದೆ. ರಾಷ್ಟ್ರೀಯ ಲಾಂಛನದ ಸ್ಕೆಚ್ ಮತ್ತು ಎರಕಹೊಯ್ದ ಪ್ರಕ್ರಿಯೆಯು ಕ್ಲೇ ಮಾಡೆಲಿಂಗ್/ಕಂಪ್ಯೂಟರ್ ಗ್ರಾಫಿಕ್‌ನಿಂದ ಕಂಚಿನ ಎರಕ ಮತ್ತು ಹೊಳಪು ನೀಡುವವರೆಗೆ ಎಂಟು ವಿಭಿನ್ನ ಹಂತದ ತಯಾರಿಕೆಯ ಮೂಲಕ ಸಾಗಿದೆ.  

PREV
15
ಹೊಸ ಸಂಸತ್ ಭವನದ ಛಾವಣಿ ಮೇಲೆ ರಾರಾಜಿಸಲಿದೆ 9,500 ಕೆಜಿ ಕಂಚಿನ ರಾಷ್ಟ್ರೀಯ ಲಾಂಛನ!

ಹೊಸ ಸಂಸತ್ ಭವನದ ಕೆಲಸವನ್ನು ಟಾಟಾ ಪ್ರಾಜೆಕ್ಟ್ಸ್ ಲಿಮಿಟೆಡ್‌ಗೆ ವಹಿಸಲಾಗಿದೆ. ಸಂಸತ್ತಿನ ಕಲಾಪದಲ್ಲಿ ಇದು 888 ಲೋಕಸಭಾ ಸದಸ್ಯರು ಮತ್ತು 384 ರಾಜ್ಯಸಭಾ ಸದಸ್ಯರ ಆಸನ ಸಾಮರ್ಥ್ಯವನ್ನು ಹೊಂದಿರುತ್ತದೆ. ಲೋಕಸಭೆಯ ಸಭಾಂಗಣದಲ್ಲಿ 1272 ಜನರ ಹೆಚ್ಚುವರಿ ಆಸನಗಳನ್ನು ಇರಿಸಲಾಗಿದೆ, ಇದರಿಂದ ಉಭಯ ಸದನಗಳ ಜಂಟಿ ಅಧಿವೇಶನ ಸಾಧ್ಯವಾಗುತ್ತದೆ.

25

60000 ಚದರ ಮೀಟರ್ ವಿಸ್ತೀರ್ಣದಲ್ಲಿ ನೂತನ ಸಂಸತ್ ಭವನ ನಿರ್ಮಾಣವಾಗುತ್ತಿದೆ. ಮಾಸ್ಟರ್ ಪ್ಲಾನ್ ಪ್ರಕಾರ, ಈಗಿರುವ ವೃತ್ತಾಕಾರದ ಸಂಸತ್ ಭವನದ ಮುಂಭಾಗದಲ್ಲಿರುವ ಗಾಂಧಿ ಪ್ರತಿಮೆಯ ಹಿಂದೆ ಈ ಹೊಸ ತ್ರಿಕೋನ ಸಂಸತ್ ಭವನವನ್ನು ನಿರ್ಮಿಸಲಾಗುತ್ತಿದೆ.
 

35

ಅಶೋಕ ಚಿಹ್ನೆಯು ಭಾರತದ ರಾಜ್ಯ ಲಾಂಛನವಾಗಿದೆ. ಇದನ್ನು ಸಾರನಾಥದಲ್ಲಿ ಕಂಡುಬರುವ ಅಶೋಕ ಲಾಟ್‌ನಿಂದ ತೆಗೆದುಕೊಳ್ಳಲಾಗಿದೆ. ಇದರಲ್ಲಿ ನಾಲ್ಕು ದಿಕ್ಕುಗಳಲ್ಲಿ ಮುಖ ಮಾಡಿ ನಿಂತಿರುವ ನಾಲ್ಕು ಸಿಂಹಗಳಿವೆ. ರಾಷ್ಟ್ರೀಯ ಲಾಂಛನವನ್ನು 26 ಜನವರಿ 1950 ರಂದು ಅಂಗೀಕರಿಸಲಾಯಿತು.
 

45

ಹೊಸ ಸಂಸತ್ ಭವನವು ಲೋಕಸಭೆ ಮತ್ತು ರಾಜ್ಯಸಭೆಯ ಎರಡೂ ಸದನಗಳಿಗೆ ತಲಾ ಒಂದು ಕಟ್ಟಡವನ್ನು ಹೊಂದಿರುತ್ತದೆ. ಇದರಲ್ಲಿ ಸೆಂಟ್ರಲ್ ಹಾಲ್ ಇಲ್ಲ. ನೂತನ ಕಟ್ಟಡವು ಅತ್ಯಾಧುನಿಕ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ಹೊಂದಿದೆ. ಇದರಲ್ಲಿ ಹಸಿರು ತಂತ್ರಜ್ಞಾನವನ್ನೂ ಬಳಸಲಾಗುವುದು.
 

55

ಹೊಸ ಸಂಸತ್ ಕಟ್ಟಡದ ಯೋಜನೆಯನ್ನು ಸೆಪ್ಟೆಂಬರ್ ತಿಂಗಳಲ್ಲಿ 2019 ರಲ್ಲಿ ಘೋಷಿಸಲಾಯಿತು. ಯೋಜನೆಯ ಅಡಿಗಲ್ಲು 10 ಡಿಸೆಂಬರ್ 2020 ರಂದು ಪ್ರಧಾನಿ ನರೇಂದ್ರ ನರೇಂದ್ರ ಮೋದಿಯವರು ಹಾಕಿದರು.

Read more Photos on
click me!

Recommended Stories