ಕೊರೋನಾ ಸಭೆ ಕರೆದ ಪ್ರಧಾನಿ; ಲಾಕ್‌ಡೌನ್ ಭೀತಿಯಿಂದ ಊರಿನತ್ತ ವಲಸೆ ಕಾರ್ಮಿಕರು!

First Published Apr 5, 2021, 7:50 PM IST

ಕಳೆದ ವರ್ಷ ಕೊರೋನಾ ವಕ್ಕರಿಸಿದಾಗ ಭಾರತದಲ್ಲಿ ಲಾಕ್‌ಡೌನ್ ಹೇರಲಾಗಿತ್ತು. ಬಳಿಕ ವಲಸೆ ಕಾರ್ಮಿಕರು ಪಟ್ಟ ಪಾಡು ಹೇಳತೀರದು. ಇದೀಗ ಮತ್ತೆ ಕೊರೋನಾ ಪ್ರಕರಣ ಹೆಚ್ಚಾಗುತ್ತಿರುವ ವೀಕೆಂಡ್ ಲಾಕ್‌ಡೌನ್, ನೈಟ್ ಕರ್ಫ್ಯೂ ಹೇರಲಾಗಿದೆ. ಇದೀಗ ಮತ್ತಷ್ಟು ನಿರ್ಬಂಧ ಹೇರುತ್ತಿರುವ ಕಾರಣ ವಲಸೆ ಕಾರ್ಮಿಕರು ಊರಿನತ್ತ ತೆರಳುತ್ತಿದ್ದಾರೆ. ಈ ಕುರಿತ ಮಾಹಿತಿ ಇಲ್ಲಿದೆ.

ದೇಶದಲ್ಲಿ ದಿನವೊಂದಕ್ಕೆ ಕೊರೋನಾ ಪ್ರಕರಣಗಳ ಸಂಖ್ಯೆ 1 ಲಕ್ಷ ದಾಟಿದೆ. ಪ್ರಧಾನಿ ನರೇಂದ್ರ ಮೋದಿ ಎಪ್ರಿಲ್ 8 ರಂದು ಎಲ್ಲಾ ಮುಖ್ಯಮಂತ್ರಿಗಳ ಜೊತೆ ಕೊರೋನಾ ಸಭೆ ಕರೆದಿದ್ದಾರೆ. ಇದುಜನರ ಆತಂಕವನ್ನು ಹೆಚ್ಚಿಸಿದೆ.
undefined
ಕಳೆದ ಮಾರ್ಚ್-ಎಪ್ರಿಲ್‌ನಲ್ಲಿದ್ದ ಪರಿಸ್ಥಿತಿ ಇದೀಗ ಮತ್ತೆ ಎದುರಾಗಿದೆ. ಕೊರೋನಾ ಪ್ರಕರಣ ಸಂಖ್ಯೆ ಹಿಂದಿಗಿಂತಲೂ ದುಪ್ಪಟ್ಟಾಗಿದೆ. ಹೀಗಾಗಿ ವಲಸೆ ಕಾರ್ಮಿಕರು ಲಾಕ್‌ಡೌನ್ ಆತಂಕದಿಂದ ತಮ್ಮ ತಮ್ಮ ಊರುಗಳತ್ತ ತೆರಳುತ್ತಿದ್ದಾರೆ.
undefined
ಮಹಾರಾಷ್ಟ್ರರದಲ್ಲಿ ವೀಕೆಂಡ್ ಲಾಕ್‌ಡೌನ್ ಹಾಗೂ ಪ್ರತಿ ದಿನ ನೈಟ್ ಕರ್ಫ್ಯೂ ಘೋಷಿಸಲಾಗಿದೆ. ಈ ನಿರ್ಧಾರ ಬೆನ್ನಲ್ಲೇ ಮುಂಬೈನಲ್ಲಿರುವ ವಲಸೆ ಕಾರ್ಮಿಕರು ಮತ್ತೆ ತಮ್ಮ ತಮ್ಮ ಊರಿನತ್ತ ತೆರಳು ರೈಲು ನಿಲ್ದಾಣಕ್ಕೆ ಧಾವಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ
undefined
ಮಹಾರಾಷ್ಟ್ರದಲ್ಲಿ ರೈಲು ಸೇವೆ ಸ್ಥಗಿತಗೊಳಿಸುವ ಕುರಿತು ಚರ್ಚೆ ನಡೆಯುತ್ತಿದೆ. ಅತೀ ಹೆಚ್ಚು ಮಂದಿ ಆಶ್ರಯಿಸಿರುವ ರೈಲು ಸೇವೆಯಿಂದ ಕೊರೋನಾ ಹರಡುವಿಕೆ ಹೆಚ್ಚು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಲಸೆ ಕಾರ್ಮಿಕರು ಮತ್ತಷ್ಟು ಭೀತಿಗೊಂಡಿದ್ದಾರೆ.
undefined
ರೈಲು ಸೇವೆ ಸ್ಥಗಿತಗೊಳ್ಳುವ ಮೊದಲು ಊರು ಸೇರಲು ವಲಸೆ ಕಾರ್ಮಿಕರು ಚಡಪಡಿಸುತ್ತಿದ್ದಾರೆ. ಇತ್ತ ಮೋದಿ ಸಭೆ ಮಾಹಿತಿ ತಿಳಿಯುತ್ತಿದ್ದಂತೆ ಹಲವು ರಾಜ್ಯದ ವಲಸೆ ಕಾರ್ಮಿಕರು ಇದೀಗ ಊರಿನತ್ತ ಮುಖಮಾಡಿದ್ದಾರೆ.
undefined
ಬಿಹಾರ, ಉತ್ತರ ಪ್ರದೇಶಗಳ ಕಡೆ ತೆರಳುವ ಪ್ರಯಾಣಿಕರ ಸಂಖ್ಯೆ ಒಂದೇ ಬಾರಿ ಏರಿಕೆಯಾಗಿದೆ. ರೈಲು ನಿಲ್ದಾಣಗಳಲ್ಲಿ ಕಾರ್ಮಿಕರ ಕುಟುಂಬ, ಮಕ್ಕಳು ರೈಲಿಗಾಗಿ ಕಾಯುತ್ತಿರುವ ದೃಶ್ಯಗಳು ಮನಕಲುಕುತ್ತಿದೆ.
undefined
ಭಾರತದಲ್ಲಿ ಒಂದೇ ದಿನ 1 ಲಕ್ಷ ಹೊಸ ಕೊರೋನಾ ವೈರಸ್ ಪ್ರಕರಣಗಳು ದಾಖಲಾಗಿದೆ. ಮಹಾರಾಷ್ಟ್ರರದಲ್ಲಿ ಈ ಸಂಖ್ಯೆ 50 ಸಾವಿರ ದಾಟಿದೆ. ಇನ್ನು ಕರ್ನಾಟಕದಲ್ಲಿ 6 ಸಾವಿರ ಗಡಿ ತಲಪಿದೆ.
undefined
click me!